
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ಸೀಸನ್ 11 ನಲ್ಲಿ ಈ ಬಾರಿ ಸ್ಪರ್ಗ ಮತ್ತು ನರಕ ಎಂಬ ಎರಡು ಮನೆಗಳಿದೆ. ಮೊದಲ ದಿನ ಬಿಗ್ ಬಾಸ್ ನಲ್ಲಿ ನಿಯಮಗಳನ್ನು ಫಾಲೋ ಮಾಡೋ ವಿಚಾರದಲ್ಲೇ ಹಲವು ವಾಗ್ವಾದಗಳು ನಡೆದವು. ಬಿಗ್‌ಬಾಸ್ ನಿಯಮವನ್ನು ಅರ್ಥ ಮಾಡಿಕೊಳ್ಳವಲ್ಲೇ ಮನೆ ಮಂದಿ ಸೋತರು. ಸ್ವರ್ಗ ಮತ್ತು ನರಕದಲ್ಲಿ ಯಾರು ಯಾವ ನಿಯಮ ಫಾಲೋ ಮಾಡಬೇಕೆನ್ನುವುದರ ಬದಲಾಗಿ ಹಲವಾರು ಗೊಂದಲಗಳೇ ಹೆಚ್ಚಾಯ್ತು.
ಸ್ವರ್ಗದ ಇಡೀ ಮನೆಯನ್ನು ಕ್ಲೀನ್ ಮಾಡಲು ಚೈತ್ರಾ ಕುಂದಾಪುರ ಮತ್ತು ಸುರೇಶ್ ಅವರನ್ನು ಆಯ್ಕೆ ಮಾಡಲಾಗಿತ್ತು. ನರಕ ನಿವಾಸಿಗಳು ಇಷ್ಟನ್ನೂ ನಾವು ಸರಿಯಾಗಿ ಮಾಡಿಲ್ಲವೆಂದರೆ ಸ್ವರ್ಗ ನಿವಾಸಿಗಳೇ ಹೊಣೆ ಆಗುತ್ತಾರೆ. ಕೆಲಸ ಕರೆಕ್ಟ್ ಮಾಡದೆ ಟೈಂ ವೇಸ್ಟ್ ಮಾಡಬೇಕು ಎಂದು ಮಾತನಾಡಿಕೊಂಡರು. ಇತ್ತ ಸ್ವರ್ಗದಲ್ಲಿ ನರಕ ವಾಸಿಗಳು ಮಿಸ್ಟೇಕ್ ಮಾಡಲು ಪ್ರಯತ್ನ ಪಡಬಹುದು ಎಂದು ಮಾತನಾಡಿಕೊಂಡರು.
ಒಂದೇ ದಿನದಲ್ಲಿ ತಾನು ಗೆಲ್ಲಲ್ಲವೆಂದು ಡಿಸೈಡ್ ಮಾಡಿದ್ರಾ ಲಾಯರ್ ಜಗದೀಶ್, ತ್ರಿವಿಕ್ರಮ್, ಧರ್ಮಗೆ ಬೆಂಬಲ
ಈ ಮಧ್ಯೆ ಲಾಯರ್ ಜಗದೀಶ್ ಬಂದು ಸ್ವರ್ಗದ ವಾತಾವರಣ ಹಾಳಾಗಿದೆ. ಮೆಲ್ಲಗೆ ಮಾತನಾಡಬೇಕು ಎಂಬ ಆದೇಶ ಬಂದಿದೆ ಎಂದು ಹೇಳಿದ್ದಾರೆ ಎಂದು ಪಿನ್ ಇಟ್ಟರು. ಇದಕ್ಕೆ ಚೈತ್ರಾ ಕುಂದಾಪುರ ಒಂದೋ ಪ್ರತಿಯಲ್ಲಿ ಬರಬೇಕು ಇಲ್ಲವೇ ಬಿಗ್ಬಾಸ್ ಅನೌನ್ಸ್ ಮಾಡಬೇಕು ಅಂದರು. ಇದು ಅಡುಗೆ ಮನೆಯಲ್ಲಿ ಯಮುನಾ ಮತ್ತು ಚೈತ್ರಾ ಮಧ್ಯೆ ದೊಡ್ಡ ಗಲಾಟೆಗೆ ಕಾರಣವಾಯ್ತು. ಎಷ್ಟು ಮಾತನಾಡಬೇಕು ಅಷ್ಟೇ ಮಾತನಾಡಿದರೆ ಒಳ್ಳೆಯದು ಎಂದು ಇಬ್ಬರ ನಡುವೆ ಗಲಾಟೆ ಆಯ್ತು. ನೀವು ತುಂಬಾ ಮಾತನಾಡುತ್ತೀರಿ ಎಂದು ಚೈತ್ರಾ ಎಂದು ಯಮುನಾ ಆರೋಪಿಸಿದರು. ನಾನು ಮಾತನಾಡಬಾರದು ಎಂದು ನೀವು ಹೇಳುವ ಹಾಗಿಲ್ಲ ಎಂದು ಚೈತ್ರ ಎದುರುತ್ತರ ನೀಡಿದರು. ಅಡುಗೆ ಮನೆಯಲ್ಲಿ ಕಾವು ಹೆಚ್ಚಾಯ್ತು. ಇತ್ತ ನರಕವಾಸಿಗಳ ಬಳಿ ಬಂದು ಜಗದೀಶ್ ನಗುತ್ತಿದ್ದರು.
ಮುಂದುವರೆದು ಮಂಜು ಕೈನಿಂದ ಚೈತ್ರಾ ಪೇರಳೆಯನ್ನು ಕಿತ್ತುಕೊಂಡು ತಿಂದು ನರಕಕ್ಕೆ ಬಿಸಾಡಿದ್ದು ಅಲ್ಲಿದ್ದವರೆಲ್ಲ ಆ ಹಣ್ಣನ್ನು ತಿಂದರು. ಇದು ಮತ್ತೆ ನಿಯಮ ಉಲ್ಲಂಘಿಸಿದ್ದೀರಿ ಎಂದು ಮನೆಯರ ವಾಗ್ವಾದಕ್ಕೆ ಕಾರಣವಾಯ್ತು. ಇದೇ ವಿಚಾರವಾಗಿ ಮತ್ತೆ ಯಮುನಾ ಮತ್ತು ಚೈತ್ರಾ ನಡುವೆ ಗಲಾಟೆ ನಡೆದು ಚೈತ್ರಾ ರೂಲ್ಸ್ ಬ್ರೇಕ್ ಮಾಡಿದ್ರೆ ಬಿಗ್‌ಬಾಸ್ ನನಗೆ ಶಿಕ್ಷೆ ನೀಡ್ತಾರೆ ನೀವು ಯಾರು ಎಂದು ವಾಗ್ವದ ನಡೆದು ಕೊನೆಗೆ ಯಮುನಾ ಕ್ಯಾಮರಾ ಮುಂದೆ ಬಂದು ಬಿಗ್‌ಬಾಸ್ ಶಿಕ್ಷೆ ನೀಡಿ ಎಂದು ಕೇಳಿಕೊಂಡರು.
BBK11: ಎಲ್ಲಾ ಕಡೆ ಲಾಯರ್ ಬುದ್ದಿ ತೋರಿಸ್ತಾರೆ: ಲಾಯರ್ ಜಗದೀಶ್ ಗೆ ಟಾಂಟ್ ಕೊಟ್ಟ ಧನ್‌ರಾಜ್
ನರಕದಲ್ಲಿರುವ ಚೈತ್ರಾ ಕುಂದಾಪುರ ಅವರು ಟಾಯ್ಲೆಟ್ ಕ್ಲೀನ್ ಮಾಡಿದ್ದರು. ಆದರೆ ಅದು ಸರಿಯಾಗಿ ಕ್ಲೀನ್ ಆಗಿಲ್ಲ ಎಂದು ಜಗದೀಶ್ ಪುನಃ ಕ್ಲೀನ್ ಮಾಡಿದರು. ಆದರೆ ಬಿಗ್ಬಾಸ್ ನಿಮಯದ ಪ್ರಕಾರ ಇದು ತಪ್ಪು ಎಂದು ಇಡೀ ಮನೆ ಅವರ ಮೇಲೆ ಮುಗಿಬಿತ್ತು.
ಕೊನೆಗೆ ಧನ್ ರಾಜ್ ಮತ್ತು ಜಗದೀಶ್ ಮಧ್ಯೆ ವಾಗ್ವಾದ ನಡೆದು ಕೊನೆಗೆ ನೀವು ನಾಲ್ಕು ಜನ ಅಲ್ಲಿ ನಾಲ್ಕು ಜನ ಇಲ್ಲಿ ಕೂತುಕೊಂಡು ಮಾತನಾಡುತ್ತಿದ್ದೀರಿ. ನಾನು ಗೇಮ್ ಆಡಿದ್ರೆ ಚೆಕ್ ಮೇಟ್ ಆಡುದು. ಯಾವ ಅಟ್ಯಾಚ್ ಮೆಂಟ್ ಬೇಡ ನಾವು ಫೇರ್ ಗೇಮ್ ಆಡೋಣ ನಮ್ಮಲ್ಲಿ ಒಗ್ಗಟು ಇರಬೇಕು ಎಂದು ಕೊನೆಗೆ ಜಗದೀಶ್ ಹೇಳಿದರು. ಕೊನೆಗೆ ಎಲ್ಲರೂ ಕೂತು ನಾವು ಒಗ್ಗಟ್ಟಿನಲ್ಲಿ ಇರಬೇಕು ಎಂದು ನಿರ್ಧಾರ ಮಾಡಿದರು. ಈ ವೇಳೆ ಯುಮುನಾ ಅವರು ಚೈತ್ರಾ ಮೇಲೆ ಹರಾಸ್‌ಮೆಂಟ್ ಮಾಡಿದ್ದಾರೆಂದು ಜಗದೀಶ್ ಹೇಳಿದರು. ಆಗ ಇಡೀ ಮನೆ ಜಗದೀಶ್ ಮೇಲೆ ಮುಗಿಬಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.