
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ಸೀಸನ್ 11 ನಲ್ಲಿ ಈ ಬಾರಿ ಸ್ಪರ್ಗ ಮತ್ತು ನರಕ ಎಂಬ ಎರಡು ಮನೆಗಳಿದೆ. ಮೊದಲ ದಿನ ಬಿಗ್ ಬಾಸ್ ನಲ್ಲಿ ನಿಯಮಗಳನ್ನು ಫಾಲೋ ಮಾಡೋ ವಿಚಾರದಲ್ಲೇ ಹಲವು ವಾಗ್ವಾದಗಳು ನಡೆದವು.
ಮೊದಲ ದಿನ ಬೆಳಗ್ಗೆ ಎದ್ದಾಗ ಭವ್ಯಾ ಗೌಡ ಮತ್ತು ಧನ್‌ರಾಜ್ ಇಬ್ಬರೂ ಒಬ್ಬೊಬ್ಬರ ಬಗ್ಗೆ ಒಂದೊಂದು ರೀತಿ ಮಾತನಾಡುತ್ತಿದ್ದರು. ತುಕಾಲಿ ಮಾನಸ ಮಾತು ಜಾಸ್ತಿ, ಐಶ್ವರ್ಯ ಚೈಲ್ಡ್, ಜಗದೀಶ್ ವೆರಿ ಆಕ್ಟೀವ್ ಯಮುನಾ ಅವರು ಒಂಥರಾ , ಹಂಸ ಕಣ್ಣಲ್ಲೇಲುಕ್ ಕೊಡುತ್ತಾರೆ ಎಂದೆಲ್ಲ ಮಾತನಾಡುತ್ತಿರುವಾಗ ಮಧ್ಯೆ ಬಂದ ಲಾಯರ್ ಜಗದೀಶ್ ನೀವಿಬ್ಬರೂ ಮಾತನಾಡಿಕೊಂಡು ಬಂದಿದ್ದೀರಾ ನಾನು ನಿನ್ನನ್ನು ಪ್ರೊಮೋಟ್ ಮಾಡುತ್ತೇನೆ. ನೀನು ನನ್ನನ್ನು ಪ್ರೊಮೋಟ್ ಮಾಡುತ್ತೇನೆ ಎಂದು ಅಂತ ಕಾಲೆಳೆದರು. ಇದಕ್ಕೆ, ಎಲ್ಲಾ ಕಡೆ ಲಾಯರ್ ಬುದ್ದಿ ತೋರಿಸ್ತಾರೆ ಎಂದು ಜಗದೀಶ್ ಕಾಲೆಳೆದರು ಧನ್‌ರಾಜ್.
ಬಿಗ್‌ಬಾಸ್ ಮನೆಯಲ್ಲಿ ಮೊದಲ ದಿನವೇ ಗಲಾಟೆಗೆ ನಾಂದಿ ಹಾಡಿದ ಚೈತ್ರಾ ಕುಂದಾಪುರ, ಉಗ್ರಂ ಮಂಜು ಪಿತ್ತ ನೆತ್ತಿಗೆ!
ನರಕದಲ್ಲಿರುವವರಿಗೆ ನೀರು ಕೊಡಬಹುದು ಆದರೆ ಬಿಸಿ ನೀರು ಕೊಡುವಂತಿಲ್ಲ ಎಂಬ ವಿಷಯವಾಗಿ ಚರ್ಚೆ ನಡೆಯಿತು. ನರಕದಲ್ಲಿರುವವರು ಬಿಸಿ ನೀರು ಕೊಡಿ ಕೊಡಿ ಎಂದು ಅಂಗಲಾಚಿದರೂ ಸ್ವರ್ಗದಲ್ಲಿರುವವರು ಕೊಡಲಿಲ್ಲ. ಮಡಕೆಯಲ್ಲಿ ನೀರು ಖಾಲಿಯಾದರೆ ನೀರು ಕೊಡಬಹುದು ಎಂದು ಕೊನೆಗೂ ರೂಲ್ ಬುಕ್ ಓದಿ ಜಗದೀಶ್ ತಣ್ಣೀರು ಕೊಟ್ಟರು. ನೀರು ಕೊಡಬಹುದಾ ಬೇಡ್ವಾ ಎಂದು ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ ವ್ಯಕ್ತವಾಯ್ತು
ಇನ್ನು ಭವ್ಯ ಗೌಡ ನರಕದಲ್ಲಿರುವವರು ಇಲ್ಲಿ ಬಂದು ಕ್ಲೀನ್ ಮಾಡೋ ತರ ಏನಾದ್ರೂ ಟಾಸ್ಕ್ ಕೊಡಿ ಬಿಗ್ಬಾಸ್. ನಾವು ಸ್ವರ್ಗದಲ್ಲಿದ್ದೇವೆ ಎಂದರು. ಇದನ್ನು ಕೇಳಿ ಧನ್‌ರಾಜ್ ನಾವು ಮುಂದೆ ನರಕಕ್ಕೆ ಹೋದ್ರೆ ಇದನ್ನೇ ನಾವು ಮಾಡಬೇಕು ಎಂದು ನಕ್ಕರು.
ಈ ಅವಕಾಶ ನನ್ನ ಕನಸು ನನಸು ಮಾಡಿದೆ; ಜನರ ಆಶೀರ್ವಾದ ಬೇಡಿ ಭವ್ಯಾ ಗೌಡ ಪೋಸ್ಟ್!
ಅದಾದ ನಂತರ ಎಲ್ಲಾ ಮನೆ ಕೆಲಸದ ಭಾಗವನ್ನು ನರಕ ನಿವಾಸದ ಇಬ್ಬರಿಗೆ ವಹಿಸಲು ಬಿಗ್‌ಬಾಸ್ ಹೇಳಿದರು. ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ ಎಂದರು. ಇದಾದ ಬಳಿಕ ಸ್ವರ್ಗದಲ್ಲಿರುವ 10 ಜನ ಚರ್ಚಿಸಿ ಇಬ್ಬರನ್ನು ಆಯ್ಕೆ ಮಾಡಿದರು. ಅದರಂತೆ ಚೈತ್ರಾ ಕುಂದಾಪುರ ಮತ್ತು ಗೋಲ್ಡ್ ಸುರೇಶ್ ಮನೆ ಕ್ಲೀನ್ ಮಾಡಿದ್ರು.
ಇದಾಗಿ ಇಬ್ಬರನ್ನು ಆಯ್ಕೆ ಮಾಡಿದಾಗ ರೂಲ್ಸ್ ಬುಕ್ ವಿಚಾರವಾಗಿ ಭವ್ಯಾ ಮತ್ತು ನರಕವಾಸಿಗಳ ಮಧ್ಯೆ ವಾಗ್ವಾದ ನಡೆಯಿತು. ರೂಲ್ಸ್ ಬುಕ್ ಓದಲು ಆಗಲ್ಲ ಒಂದೇ ಸಲ ಹೇಳೋದು ಎಂದು ಹೇಳಿದರು. ಇದಕ್ಕೆ ತುಕಾಲಿ ಮಾನಸ ಒಂದು ಸಲ ಅರ್ಥ ಆಗಿಲ್ಲ ಅಂದ್ರೆ 30 ಸಲ ಕೇಳಿ ತಿಳಿದುಕೊಳ್ಳಿ ಎಂದು ಹೇಳಿ ಕಳಿಸಿದ್ದಾರೆ. ಹೀಗಾಗಿ ನನಗೆ ರೂಲ್ಸ್ ಬಗ್ಗೆ ಹೇಳಿ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.