
ಚಿತ್ರದುರ್ಗ (ಸೆ.30): ದಂಪತಿಗಳು ಸಾವಿನಲ್ಲೂ ಒಂದಾದ ಅಪೂರ್ವ ಘಟನೆಗೆ ಚಿತ್ರದುರ್ಗ ಸಾಕ್ಷಿಯಾಗಿದ್ದು, ಹೃದಯಾಘಾತದಿಂದ ಪತಿ, ಪತ್ನಿ ಇಬ್ಬರು ಮೃತಪಟ್ಟಿದ್ದಾರೆ. ನಗರದ ಕೆಳಗೋಟೆ ಬಡಾವಣೆಯಲ್ಲಿ ಘಟನೆ ಜರುಗಿದೆ. ಚಿತ್ರದುರ್ಗ ಖಾಸಗಿ ಕಾಲೇಜೊಂದರಲ್ಲಿ ಗ್ರಂಥಪಾಲಕರಾಗಿ ನಿವೃತ್ತಿಯಾಗಿದ್ದ ಓಂಕಾರಮೂರ್ತಿ ಅವರಿಗೆ ಸೋಮವಾರ ಬೆಳಗ್ಗೆ ಲಘು ಹೃದಯಾಘಾತ ಕಂಡುಬಂದ ಕಾರಣ ತಕ್ಷಣ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಅಸು ನೀಗಿದ್ದಾರೆ. ಪತಿ ಸಾವಿನ ಸಂಗತಿಯಿಂದ ತೀವ್ರ ಆಘಾತಕ್ಕೆ ಒಳಗಾದ ಪತ್ನಿ ದ್ರಾಕ್ಷಾಣಿಯವರಿಗೆ ಹೃದಯ ಸ್ತಂಭನವಾಗಿ ಮನೆಯಲ್ಲಿ ಅಸು ನೀಗಿದ್ದಾರೆ.
ಕೆಲಸದೊತ್ತಡದಿಂದ ಹೃದಯ ರೋಗ ಹೆಚ್ಚಳ: ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ರೋಟರಿ ಸಂಸ್ಥೆ ವತಿಯಿಂದ ಹೃದಯ ಮತ್ತು ಫಾರ್ಮಸಿ ದಿನಾಚರಣೆ ನಡೆಯಿತು. ತಹಸೀಲ್ದಾರ್ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಮತ್ತು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ರೋಟರಿ ಸಂಸ್ಥೆಯ ಅಧ್ಯಕ್ಷ ಎಸ್. ನಿರಂಜನ್ ಕಾರ್ಯಕ್ರಮ ಉದ್ಘಾಟಿಸಿದರು. ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೃದಯ ರೋಗ ಜಾಸ್ತಿ ಆಗಿ ಕಾಣಿಸಿ ಕಾಣಿಸಿಕೊಳ್ಳುತ್ತಿವೆ ಕಾರಣ ಕೆಲಸದೊತ್ತಡ ಮತ್ತು ನಮ್ಮ ಜೀವನಶೈಲಿ ಮತ್ತು ತಿನ್ನುವಂತಹ ಆಹಾರದಿಂದ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂದರು.
ಡಾ. ಪ್ರಜ್ವಲ್ ಮಾತನಾಡಿ, ಈ ವರ್ಷದ ಹೃದಯ ದಿನಾಚರಣೆಯ ಧ್ಯೇಯ ಒಳ್ಳೆಯ ಹೃದಯದಿಂದ ಎಲ್ಲರನ್ನು ಗೆಲ್ಲೋಣ ಎಂಬ ವಾಕ್ಯವಾಗಿದೆ, ಹೃದಯಾಘಾತವೆಂದರೆ, ಹಾರ್ಟ್ ಅಟ್ಯಾಕ್, ಕಾರ್ಡಿಕ್ ಅರೆಸ್ಟ್, ಹೃದಯ ಸ್ತಂಬನ, ಹೃದಯ ಕಂಠ , ಹೃದಯ ಮಾಂಸ, ಈ ಮೂರು ರೀತಿಯಲ್ಲಿ ಹೃದಯಾಘಾತವಾಗುತ್ತದೆ, ಹೃದಯಾಘಾತವು ಹೆಚ್ಚು 30 ರಿಂದ 45 ವರ್ಷದ ಒಳಗಿನ ವಯಸ್ಸಿನವರಿಗೆ ಹೆಚ್ಚು ಆಗುತ್ತದೆ. ರಕ್ತದೊತ್ತಡ , ಮಧುಮೇಹ, ಧೂಮಪಾನ, ಮದ್ಯಪಾನ, ಹೃದಯ ಸಂಬಂಧಪಟ್ಟ ಕಾಯಿಲೆಗಳು, ಆಹಾರ ವ್ಯತ್ಯಾಸಗಳಿಂದ ಉಂಟಾಗುತ್ತದೆ ಎಂದರು.
ಸಮಾಜ ಸುಧಾರಣೆಯಲ್ಲಿ ಮಾಧ್ಯಮ ಪಾತ್ರ ಅಪಾರ: ಸಚಿವ ಚಲುವರಾಯಸ್ವಾಮಿ
ತಾಲೂಕು ಆರೋಗ್ಯಾಧಿಕಾರಿ ಡಾ. ಟಿ. ರವಿಕುಮಾರ್ ಮಾತನಾಡಿ, ಮಾನಸಿಕ ಒತ್ತಡ , ಆಹಾರ ಪದ್ಧತಿ, ವ್ಯಾಯಾಮ ಮಾಡದೆ ಇರುವುದು ಈ ಕಾಯಿಲೆಗೆ ಕಾರಣವಾಗಬಹುದು, ಹಾಗೂ ಜೇಕ್ ಫುಡ್ ಗಳನ್ನು ಅತಿಯಾಗಿ ಸೇವಿಸಬಾರದು ಎಂದು ತಿಳಿಸಿದರು. ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧ ಕಾಯಿಲೆಗಳು ಜಾಸ್ತಿ ಆಗುತ್ತಾ ಇವೆ , ಕಾರಣ ನಾವು ತೆಗೆದುಕೊಳ್ಳುವ ಆಹಾರ ಇರಬಹುದು, ಹೃದಯ ಸಂಬಂಧ ಯಾವುದೇ ಕಾಯಿಲೆ ಇದ್ದರೆ ತಕ್ಷಣ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳಿ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ