ಬಿಗ್ ಬಾಸ್ 11ರ ಆರಂಭದಲ್ಲೇ ಭಾರಿ ಚಕಮಕಿಗಳು ನಡೆದಿದೆ. ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ನಡುವೆ ಜಗಳವೇ ನಡೆದು ಹೋಗಿದೆ. ಇದರ ಬೆನ್ನಲ್ಲೇ ಚೈತ್ರಾ ಕುಂದಾಪುರ ಬಿಗ್ ಬಾಸ್ 11ರ ಮೊದಲ ವಾರದಲ್ಲಿ ನೇರ ನಾಮಿನೇಟ್ ಆಗಿದ್ದಾರೆ.
ಬೆಂಗಳೂರು(ಸೆ.30) ಭಾರಿ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿದ್ದ ಬಿಗ್ ಬಾಸ್ 11ನೇ ಆವೃತ್ತಿ ಆರಂಭೊಂಡಿದೆ. ಸ್ವರ್ಗ ಹಾಗೂ ನರಕ ಪರಿಕಲ್ಪನೆಯಲ್ಲಿ ಈ ಬಾರಿಯ ಬಿಗ್ ಬಾಸ್ ಮನೆ ಆರಂಭದಲ್ಲೇ ರಣಾಂಗಣವಾಗುತ್ತಿದೆ. ನರಕದಲ್ಲಿರುವ ಸ್ಪರ್ಧಿ ಚೈತ್ರಾ ಕುಂದಾಪುರ ಈಗಾಗಲೇ ಸ್ವರ್ಗವಾಸಿಗಳಿಗೆ ನರಕ ತೋರಿಸಿದ್ದಾರೆ. ಆರಂಭದಲ್ಲೇ ಬಿಗ್ ಬಾಸ್ ಮನೆಯ ಕಲರ್‌ಫುಲ್ ವಾತಾವರಣ ಬಿಸಿ ಏರಿಸಿದ ಚೈತ್ರಾ ಕುಂದಾಪುರ್ ಇದೀಗ ನಾಮಿನೇಟ್ ಆಗಿದ್ದಾರೆ. ಬಿಗ್ ಬಾಸ್ 11ರ ಮೊದಲ ವಾರದಲ್ಲಿ ನಾಮಿನೇಟ್ ಆದ ಮೊದಲ ಹಾಗೂ ಏಕೈಕ ಸ್ಪರ್ಧಿಯಾಗಿದ್ದಾರೆ.
ಸ್ವರ್ಗವಾಸಿಗಳ ತೀವ್ರ ತಲೆನೋವಿಗೆ ಕಾರಣವಾಗಿದ್ದ ಚೈತ್ರಾ ಕುಂದಾಪರ ಎಲಿಮಿನೇಶನ್‌ಗೆ ಸ್ವರ್ಗವಾಸಿಗಳು ಒಕ್ಕೊರಲಿನಿಂದ ಮತ ಹಾಕಿದ್ದಾರೆ. ಇದರ ಪರಿಣಾಮ ಮೊದಲ ವಾರದ ನಾಮಿನೇಶನ್ ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿರುವ ಏಕೈಕ ಹೆಸರು ಚೈತ್ರಾ ಕುಂದಾಪುರ. ನಾಮಿನೇಶನ್‌ನಲ್ಲಿ ಚೈತ್ರಾ ಕುಂದಾಪರ ಕಾಣಿಸಿಕೊಂಡಿದ್ದಾರೆ ನಿಜ, ಆದರೆ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಆಟಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪರ ವಿರೋಧಗಳಿದ್ದರೂ ಆಟದ ವಿಚಾರದಲ್ಲಿ ಚೈತ್ರಾ ಕುಂದಾಪುರ ಜನರಿಂದ ಹೆಚ್ಚಿನ ಮತಗಳನ್ನು ಪಡೆಯುವ ಸಾಧ್ಯತೆಗಳಿವೆ.
undefined
ಆರಂಭದಲ್ಲೇ ಚೈತ್ರಾ ಕುಂದಾಪರ ಗೂಗ್ಲಿಗೆ ಆರಾಮವಾಗಿದ್ದ ಸ್ವರ್ಗವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೈತ್ರಾ ಮಾತು, ಗೇಮ್ ಪ್ಲಾನ್‌ಗೆ ಸ್ವರ್ವವಾಸಿಗಳು ಕಕ್ಕಾಬಿಕ್ಕಿಯಾಗಿದ್ದರು. ವಿಶೇಷ ಅಂದರೆ ನರಕವಾಸಿಗಳು ಸ್ವರ್ಗವಾಸಿಗಳಿಗಿಂತ ಹೆಚ್ಚಿನ ಖುಷಿ, ಸಂಭ್ರಮದಲ್ಲಿರುವಂತೆ ಕಂಡುಬಂದಿತ್ತು. ಆದರೆ ಸ್ವರ್ಗದಲ್ಲಿದ್ದರೂ ಸ್ವರ್ಗವಾಸಿಗಳು ಮಾತ್ರ ತಲೆನೋವಿನಲ್ಲೇ ದಿನ ದೂಡಿದ್ದಾರೆ.
ಹಣ್ಣು ತೊಳೆದುಕೊಡುವಂತೆ ಉಗ್ರಂ ಮಂಜು ನೀಡಿದ ಆಜ್ಞೆಯಿಂದ ಚೈತ್ರಾ ಕುಂದಾಪುರ ಅಸಮಾಧಾನಗೊಂಡಿದ್ದಾರೆ. ಇಧಕ್ಕೆ ಪ್ರತಿಯಾಗಿ ಚೈತ್ರಾ ಕುಂದಾಪರ ಹಣ್ಣು ತೊಳೆಯುವ ಬದಲು ಹಣ್ಣನ್ನು ಕಚ್ಚಿ ಎಸೆದಿದ್ದಾರೆ. ನಿಯಮ ಮೀರಿದ ಹಾಗೂ ದರ್ಪದ ನಡತೆಗೆ ಉಗ್ರಂ ಮಂಜು ಸೇರಿ ಸ್ವರ್ಗವಾಸಿಗಳು ಗರಂ ಆಗಿದ್ದರು. ಚೈತ್ರಾ ವಿರುದ್ದ ಮುಗಿಬಿದ್ದಿದ್ದರು. ಆದರೆ ಚೈತ್ರಾ ಮುಂದೆ ಮಾತಿನಲ್ಲಿ ಮೀರಿಸಲು ಸಾಧ್ಯವಾಗದೆ ಸುಸ್ತಾಗಿದ್ದಾರೆ. ಇದರ ಪರಿಣಾಮ ಸ್ವರ್ಗವಾಸಿಗಳ ಲಕ್ಷುರಿ ಐಟಂಗೂ ಕತ್ತರಿ ಬಿದ್ದಿದೆ.
ನಾಮಿನೇಶನ್‌ಗೆ ಬಿಗ್‌ಬಾಸ್ ಸೂಚಿಸಿದ ಬೆನ್ನಲ್ಲೇ ಸ್ವರ್ಗವಾಸಿಗಳು ಚೈತ್ರಾ ಕುಂದಾಪುರ ವಿರುದ್ದ ಮತ ಚಲಾಯಿಸಿದ್ದಾರೆ. ಇದರ ಪರಿಣಾಮ ಚೈತ್ರಾ ಕುಂದಾಪುರ ಈ ಆವೃತ್ತಿಯಲ್ಲಿ ಮೊದಲು ನಾಮಿನೇಟ್ ಆಗಿರುವ ಸ್ಪರ್ಧಿಯಾಗಿದ್ದಾರೆ.