ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಅಮೃತ ಮಹೋತ್ಸವ ಯಾತ್ರೆ; ಹುತಾತ್ಮ ಯೋಧರ ನೆನಪಿನಲ್ಲಿ ಕಣ್ಣೀರಾದ ನಿವೃತ್ತ ಸೇನಾಧಿಕಾರಿ

Aug 19, 2022, 5:41 PM IST

ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆ ಯಶಸ್ವಿಯಾಗಿದೆ. ಉತ್ಸಾಹಿ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಭೇಟಿ ನೀಡಲಾಯಿತು. ಈ ಸ್ಮಾರಕ ಕರ್ನಾಟಕ ನಾಗರೀಕರು ಮತ್ತು ನಮ್ಮ ಪ್ರತಿನಿಧಿಯಾದ ಸರ್ಕಾರ ನಮ್ಮೆಲ್ಲರ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ರಕ್ಷಣಾ ಪಡೆಗಳ ಯೋಧರು ಮತ್ತು ಅವರ ಕುಟುಂಬಗಳ ತ್ಯಾಗವನ್ನು ಗೌರವಿಸುವ ನಮ್ಮ ಬದ್ಧತೆಯ ಸಂಕೇತವಾಗಿ ನಿರ್ಮಿಸಲ್ಪಟ್ಟಿದೆ. ಇಂಥಾ ಅನನ್ಯ ಸ್ಮಾರಕಕ್ಕೆ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆ ಯುವ ಉತ್ಸಾಹಿ ಕೆಡೆಟ್‌ಗಳೊಂದಿಗೆ ತಲುಪಿದಾಗ ಸ್ಮಾರಕದ ರೂವಾರಿ ನಿವೃತ್ತ ಏರ್‌ ಕಮಾಂಡರ್ ಎಂ.ಕೆ ಚಂದ್ರಶೇಖರ್ (ವಿಎಂ.ವಿಎಸ್‌ಎಂ) ಮಾರ್ಗದರ್ಶನಕ್ಕೆ ಆಗಮಿಸಿದ್ದರು

ಸ್ವಾತಂತ್ರ್ಯೋತ್ಸವ ಭಾರತದ ಮೊದಲ ಸೈನಿಕ ಸ್ಮಾರಕ ಎಂಬ ಹೆಗ್ಗಳಿಕೆ ಪಡೆದ ರಾಷ್ಟ್ರೀಯ ಸೈನಿಕ ಸ್ಮಾರಕವನ್ನು ಅದರ ರೂವಾರಿ ಮತ್ತು ಭಾರತೀಯ ವಾಯುಪಡೆಯ ನಿವೃತ್ತ  ಪೈಲೆಟ್ ಆದ ಎಂ.ಕೆ ಚಂದ್ರಶೇಖರ್ (ವಿಎಂ.ವಿಎಸ್‌ಎಂ) ಮಾರ್ಗದರ್ಶನದಲ್ಲಿ ವೀಕ್ಷಿಸಲಾಯಿತು. ಏರ್ ಕಮಾಂಡರ್ ಎಂ.ಕೆ ಚಂದ್ರಶೇಖರ್ ಹುತಾತ್ಮ ಸೈನಿಕರಿಗೆ ಪುಷ್ಪ ಸಮರ್ಪಣೆ ಮಾಡಿದರು. 7.5 ಎಕರೆ ವಿಸ್ತೀರ್ಣದಲ್ಲಿರುವ ಹಬ್ಬಿರುವ ಈ ರಾಷ್ಟ್ರೀಯ ಸ್ಮಾರಕ ತನ್ನ ಕೇಂದ್ರದಲ್ಲಿ ದೇಶದಲ್ಲಿ ಎರಡನೇ ಅತಿ ಎತ್ತರದ ಧ್ವಜ ಸ್ತಂಭ ಎಂಬ ಗೌರವ ಪಡೆದ 213 ಅಡಿ ಎತ್ತರದ ಸ್ತಂಭದ ಮೇಲೆ ಎಪ್ಪತ್ತೆರಡು ಅಡಿ ಅಗಲ, ನಲವತ್ತೆಂಟು ಅಡಿ ಎತ್ತರದ ರಾಷ್ಟ್ರಧ್ವಜವನ್ನು ಹೊತ್ತು ನಿಂತಿದೆ. 

India@75: ಏಷ್ಯಾನೆಟ್ ನ್ಯೂಸ್‌ನ ಅಮೃತ ಮಹೋತ್ಸವ ಯಾತ್ರೆ ಕಾರ್ಗಿಲ್‌ನಲ್ಲಿ ಮುಕ್ತಾಯ

ನಿವೃತ್ತ ಏರ್‌ ಕಮಾಂಡರ್ ಎಂ.ಕೆ ಚಂದ್ರಶೇಖರ್ (ವಿಎಂ.ವಿಎಸ್‌ಎಂ) ಹುತಾತ್ಮ ಯೋಧರ ಬಗ್ಗೆ ಮಾತನಾಡುತ್ತಾ ಕಣ್ಣೀರಾದರು. ದೇಶಕ್ಕಾಗಿ ಪ್ರತಿ ಯೋಧರ ತ್ಯಾಗವೂ ಸ್ಮರಿಸುವಂಥದ್ದು ಎಂದು ಕೊಂಡಾಡಿದರು.  ಯುವ ಉತ್ಸಾಹಿ ಕೆಡೆಟ್‌ಗಳಿಗೆ ಶುಭ ಹಾರೈಸಿದರು.