ತಿರುಪತಿ ಲಡ್ಡು ವಿವಾದ: ಪವನ್‌ ಕಲ್ಯಾಣ್‌ 11 ದಿನ ಉಪವಾಸ ವ್ರತ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ಲಡ್ಡು ವಿತರಿಸಿದ್ದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಲುವಾಗಿ ಜನಸೇನಾ ಪಕ್ಷದ ಅಧ್ಯಕ್ಷ, ಆಂಧ್ರಪ್ರದೇಶದ ಡಿಸಿಎಂ ಪವನ್‌ ಕಲ್ಯಾಣ್‌ 11 ದಿನಗಳ ‘ಪ್ರಾಯಶ್ಚಿತ್ತ ದೀಕ್ಷೆ’ (ಉಪವಾಸ ವ್ರತ) ಆರಂಭಿಸಿದ್ದಾರೆ.


ಗುಂಟೂರು (ಸೆ.23): ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ಲಡ್ಡು ವಿತರಿಸಿದ್ದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಲುವಾಗಿ ಜನಸೇನಾ ಪಕ್ಷದ ಅಧ್ಯಕ್ಷ, ಆಂಧ್ರಪ್ರದೇಶದ ಡಿಸಿಎಂ ಪವನ್‌ ಕಲ್ಯಾಣ್‌ 11 ದಿನಗಳ ‘ಪ್ರಾಯಶ್ಚಿತ್ತ ದೀಕ್ಷೆ’ (ಉಪವಾಸ ವ್ರತ) ಆರಂಭಿಸಿದ್ದಾರೆ.

ಗುಂಟೂರು ಜಿಲ್ಲೆಯ ನಂಬೂರಿನ ಶ್ರಿ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ಪ್ರಾಯಶ್ಚಿತ್ತ ಆರಂಭಿಸಿರುವ ಅವರು 11 ದಿನಗಳ ಕಾಲ ಇದರ ಅಂಗವಾಗಿ ಉಪವಾಸ ಆರಂಭಿಸಿದ್ದಾರೆ.

Latest Videos

ತಿರುಪತಿ ಲಡ್ಡು ಅಪವಿತ್ರ..ಇಡೀ ದೇವಸ್ಥಾನ ಶುದ್ದೀಕರಣಕ್ಕೆ ಮುಂದಾದ ಆಂಧ್ರ ಸರ್ಕಾರ!

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಹಿಂದಿನ ಆಡಳಿತಗಾರರಿಂದಾಗಿ ತಿರುಮಲದ ಲಡ್ಡು ಪ್ರಸಾದ ಅಪವಿತ್ರವಾಗಿದೆ. ಈ ಪಾಪವನ್ನು ಗುರುತಿಸುವಲ್ಲಿ ವಿಫಲವಾಗಿದ್ದು ಹಿಂದೂ ಜನಾಂಗಕ್ಕೇ ಕಳಂಕ ತಂದಿದೆ. ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆಯಾಗಿರುವುದು ತಿಳಿದು ಆಘಾತವಾಯಿತು. ಜನರ ಕಲ್ಯಾಣಕ್ಕಾಗಿ ಶ್ರಮಿಸುವ ನನಗೆ ಇದು ಮೊದಲೇ ತಿಳಿಯಲಿಲ್ಲ ಎಂದು ಬೇಸರವಾಗುತ್ತಿದೆ. ಬಾಲಾಜಿಗೆ ಮಾಡಿರುವ ಈ ಅನ್ಯಾಯಕ್ಕೆ ಸನಾತನ ಧರ್ಮದಲ್ಲಿ ನಂಬಿಕೆ ಉಳ್ಳವರೆಲ್ಲ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ನಾನೂ ಕೂಡ 11 ದಿನ ಉಪವಾಸ ಮಾಡಿ, ದೀಕ್ಷೆಯ ಕೊನೆಯ 2 ದಿನ (ಅ.1 ಮತ್ತು 2) ರಂದು ತಿರುಪತಿಗೆ ತೆರಳುವೆ. ದೇವರ ದರ್ಶನ ಪಡೆದು ಕ್ಷಮೆ ಯಾಚಿಸಿ ಪ್ರಾಯಶ್ಚಿತ್ತ ದೀಕ್ಷೆ ಪೂರ್ಣಗೊಳಿಸುವೆ’ ಎಂದಿದ್ದಾರೆ.

ತಿಮ್ಮಪ್ಪನಿಗೂ ಮೋಸ, 'ನಮೋ ವೆಂಕಟೇಶ..' ಎಂದವರಿಗೆ ನಾನ್‌ವೆಜ್‌ ಪ್ರಸಾದ ತಿನ್ನಿಸಿದ ಜಗನ್‌!

ಸರ್ಕಾರದ ನಿಯಂತ್ರಣದಲ್ಲಿ ದೇಗುಲ: ಸದ್ಗುರು ವಿರೋಧ

ನವದೆಹಲಿ: ತಿರುಮಲ ಲಡ್ಡು ವಿವಾದಕ್ಕೆ ಪ್ರತಿಕ್ರಿಯಿಸಿರುವ ಈಶ ಫೌಂಡೇಶನ್‌ನ ಸದ್ಗುರು ಅವರು ಸರ್ಕಾರದ ನಿಯಂತ್ರಣದಲ್ಲಿ ದೇಗುಲಗಳು ಇರುವುದನ್ನು ವಿರೋಧಿಸಿದ್ದಾರೆ.ಟ್ವೀಟ್ ಮಾಡಿರುವ ಅವರು, ‘ದೇವಸ್ಥಾನದ ಪ್ರಸಾದದಲ್ಲಿ ಭಕ್ತರು ದನದ ಮಾಂಸವನ್ನು ಸೇವಿಸುವುದು ಅಸಹ್ಯಕರ. ಅದಕ್ಕಾಗಿಯೇ ದೇವಾಲಯಗಳನ್ನು ಭಕ್ತರು ನಡೆಸಬೇಕು. ಸರ್ಕಾರದ ಆಡಳಿತದಿಂದ ಅಲ್ಲ. ಭಕ್ತಿ ಇಲ್ಲದ ಜಾಗದಲ್ಲಿ ಪಾವಿತ್ರ್ಯತೆ ಇರುವುದಿಲ್ಲ. ಹಿಂದೂ ದೇವಾಲಯಗಳನ್ನು ಭಕ್ತರು ನಡೆಸುವ ಸಮಯ ಬಂದಿದೆ. ಸರ್ಕಾರದ ಆಡಳಿತದಿಂದಲ್ಲ’ ಎಂದಿದ್ದಾರೆ.

click me!