ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮೀ ಭೀಕರ ಹತ್ಯೆಗೆ ಅನೈತಿಕ ಸಂಬಂಧ ಕಾರಣವಿರಬಹುದು ಎಂದು ಶಂಕಿಸಿರುವ ಪೊಲೀಸರು, ಈ ಸಂಬಂಧ ಮೃತಳ ಸ್ನೇಹಿತನೊಬ್ಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಬೆಂಗಳೂರು (ಸೆ.23) : ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮೀ ಭೀಕರ ಹತ್ಯೆಗೆ ಅನೈತಿಕ ಸಂಬಂಧ ಕಾರಣವಿರಬಹುದು ಎಂದು ಶಂಕಿಸಿರುವ ಪೊಲೀಸರು, ಈ ಸಂಬಂಧ ಮೃತಳ ಸ್ನೇಹಿತನೊಬ್ಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಮೃತಳ ಮನೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಆಕೆಯ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಹಂತಕನ ಸುಳಿವು ಪೊಲೀಸರಿಗೆ ಸಿಕ್ಕಿದೆ. ಈ ಕೃತ್ಯವನ್ನು ಮೃತಳ ಆತ್ಮೀಯ ಸ್ನೇಹಿತನೇ ನಡೆಸಿರುವುದು ಖಚಿತವಾಗಿದ್ದು, ಶಂಕೆ ಮೇರೆಗೆ ಆಕೆಯ ಆಪ್ತ ಒಡನಾಡಿಗಳನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
undefined
Bengaluru Fridge Murder: ಸೂಟ್‌ಕೇಸ್‌ನಲ್ಲಿ ಡೆಡ್ ಬಾಡಿ ಸಾಗಿಸಲು ಪ್ಲ್ಯಾನ್ ಮಾಡಿದ್ದ ಹಂತಕ!
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಮ್ಮ ಪತಿಯಿಂದ ಒಂಬತ್ತು ತಿಂಗಳ ಹಿಂದೆಯೇ ಪ್ರತ್ಯೇಕವಾಗಿದ್ದ ಮಹಾಲಕ್ಷ್ಮೀ, ನಂತರ ವೈಯಾಲಿಕಾವಲ್ ಸಮೀಪ ಪ್ರತಿಷ್ಠಿತ ಮಾರಾಟ ಮಳಿಗೆಯಲ್ಲಿ ಸೇಲ್ಸ್ ಗರ್ಲ್ಸ್ ಆಗಿದ್ದಳು. ಆ ವೇಳೆ ಆಕೆಗೆ ಯುವಕನ ಜತೆ ಸ್ನೇಹ ಬೆಳೆದಿತ್ತು. ಈ ಸ್ನೇಹದಲ್ಲಿ ಮೂಡಿದ ಮನಸ್ತಾಪವೇ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ತನ್ನ ಪತಿಯಿಂದ ದೂರವಾಗಿದ್ದ ಕಾರಣಕ್ಕೆ ಮಹಾಲಕ್ಷ್ಮೀ ಜತೆ ಆಕೆಯ ಪೋಷಕರು ಸಹ ಮುನಿಸಿಕೊಂಡಿದ್ದರು. ಹೀಗಾಗಿ ವೈಯಾಲಿಕಾವಲ್‌ನಲ್ಲಿ ಆಕೆ ಏಕಾಂಗಿಯಾಗಿ ನೆಲೆಸಿದ್ದಳು. ತನ್ನ ಸಹೋದ್ಯೋಗಿಗಳ ಜತೆ ಖುಷಿಯಿಂದಲೇ ಇದ್ದ ಆಕೆ, ತನ್ನ ವೈಯಕ್ತಿಕ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಸೆ.12ರಂದು ಆಕೆಯ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಅಂದು ಆಕೆಯ ಮನೆಗೆ ಬಂದಿರುವ ಪರಿಚಿತನಿಂದಲೇ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಸಾವಿಗೂ ಮುನ್ನ ಗಲಾಟೆ?
ಮಹಾಲಕ್ಷ್ಮೀ ಮನೆಗೆ ಬಲವಂತವಾಗಿ ಆರೋಪಿ ಪ್ರವೇಶಿಸಿಲ್ಲ. ಅಲ್ಲದೆ ಹತ್ಯೆಗೂ ಮುನ್ನ ತನ್ನ ಮೇಲೆ ಹಲ್ಲೆ ನಡೆಸಲು ಮುಂದಾದ ಆರೋಪಿಗೆ ಮಹಾಲಕ್ಷ್ಮೀ ಪ್ರತಿರೋಧ ತೋರಿದ್ದಾಳೆ. ಆ ವೇಳೆ ಆತನ ಕೈ ಕಚ್ಚಿ, ಮೈ ಪರಚಿ ಆಕೆ ಗಲಾಟೆ ಮಾಡಿದ್ದಾಳೆ ಎಂಬುದು ಪ್ರಾಥಮಿಕ ಹಂತದ ತನಿಖೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಮಾಂಸ ಕತ್ತರಿಸುವ ಚಾಕು
ತನಗೆ ತೀವ್ರ ಪ್ರತಿರೋಧಿಸಿದ್ದ ಮಹಾಲಕ್ಷ್ಮೀ ಮೇಲೆ ಸಿಟ್ಟಿಗೆದ್ದು ಚಾಕುವಿನಿಂದ ಇರಿದು ಬಳಿಕ ಮಾಂಸ ಕತ್ತರಿಸುವ ಚಾಕುವಿನಿಂದ ಆಕೆಯ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಆರೋಪಿ ಭೀಕರವಾಗಿ ಕೊಂದಿದ್ದಾನೆ ಎನ್ನಲಾಗಿದೆ.
ಬಿಡಿ ಬಿಡಿ ಭಾಗಳ ಆಯ್ದು ಪರೀಕ್ಷೆ
ಮಹಾಲಕ್ಷ್ಮೀ ಮೃತದೇಹವನ್ನು 30ಕ್ಕೂ ಹೆಚ್ಚುಬಾರಿ ತುಂಡಾಗಿಸಿ ಫ್ರಿಜ್ಜ್‌ನಲ್ಲಿಟ್ಟು ಆರೋಪಿ ಪರಾರಿಯಾಗಿದ್ದ. ಈ ಮೃತದೇಹದ ಭಾಗಗಳನ್ನು ಆಯ್ದು ಬಳಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಪೊಲೀಸರು ಕಳುಹಿಸಿದ್ದರು. ಚೀಲದಲ್ಲಿ ತುಂಬಿದ್ದ ದೇಹದ ಬಿಡಿ ಭಾಗಗಳನ್ನು ಮರು ಜೋಡಿಸಿ ಮರಣೋತ್ತರ ಪರೀಕ್ಷೆ ನಡೆಸುವುದು ವೈದ್ಯರಿಗೆ ಸವಾಲಾಗಿತ್ತು ಎಂದು ತಿಳಿದು ಬಂದಿದೆ.
Bengaluru Fridge Murder: ಪೋಸ್ಟ್ ಮಾರ್ಟಮ್‌ಗೆ 59 ಪೀಸ್ ಜೋಡಿಸಿಯೇ ಸುಸ್ತಾದ ವೈದ್ಯರು, ಕೊಲೆಯ ರೀತಿ ಕಂಡು ಶಾಕ್!
ಮೃತದೇಹ ಹಸ್ತಾಂತರ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ಈ ವೇಳೆ ಮೃತಳ ಕುಟುಂಬದವರು ಆಕ್ರಂದನ ಮುಗಿಲು ಮುಟ್ಟಿತು.