ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿ ಕೊಬ್ಬು ಪ್ರಕರಣ: ಎಸ್‌ಐಟಿ ತನಿಖೆಗೆ ಸಿಎಂ ಚಂದ್ರಬಾಬು ಘೋಷಣೆ

By Kannadaprabha NewsFirst Published Sep 23, 2024, 5:13 AM IST
Highlights

ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ತಯಾರಿಕೆಯಲ್ಲಿ ಬಳಸಲಾದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದ ಬಗ್ಗೆ ತನಿಖೆ ನಡೆಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿಶೇಷ ತನಿಖಾ ತಂಡ ರಚಿಸುವುದಾಗಿ ಘೋಷಿಸಿದ್ದಾರೆ.

ಅಮರಾವತಿ (ಸೆ.23): ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ತಯಾರಿಕೆಯಲ್ಲಿ ಬಳಸಲಾದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದ ಬಗ್ಗೆ ತನಿಖೆ ನಡೆಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿಶೇಷ ತನಿಖಾ ತಂಡ ರಚಿಸುವುದಾಗಿ ಘೋಷಿಸಿದ್ದಾರೆ.

ಜೊತೆಗೆ ರಾಜ್ಯದ ಎಲ್ಲಾ ದೇವಸ್ಥಾನಗಳಿಗೆ ತರಿಸಲಾಗುವ ಕಚ್ಚಾವಸ್ತುಗಳ ತಫಾಸಣೆ ಹಾಗೂ ಲೆಕ್ಕಪರಿಶೋಧನೆಗೂ ಆದೇಶಿಸಲಾಗಿದೆ ಎಂದಿದ್ದಾರೆ,
ಭಾನುವಾರ ಸುದ್ದಿಗೋಷ್ಠಿ ನಡೆಸಿದ ನಾಯ್ಡು, ‘ಐಜಿಪಿ ಅಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಇವರು ಸಲ್ಲಿಸುವ ವರದಿಯ ಆಧಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಹಾಗೂ ಇದು ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು.

Latest Videos

ತಿರುಪತಿ ಲಡ್ಡು ಅಪವಿತ್ರ..ಇಡೀ ದೇವಸ್ಥಾನ ಶುದ್ದೀಕರಣಕ್ಕೆ ಮುಂದಾದ ಆಂಧ್ರ ಸರ್ಕಾರ!

ಜುಲೈನಿಂದ ಲಡ್ಡುಗೆ ಕಳಪೆ ತುಪ್ಪ ಬಳಸಿಲ್ಲ: ಟಿಟಿಡಿ

ಹೈದರಾಬಾದ್‌: ತಿರುಪತಿ ತಿಮ್ಮಪ್ಪನ ದೇಗುಲದ ಲಡ್ಡು ಪ್ರಸಾದ ತಯಾರಿಕೆಗೆ ಜುಲೈ ತಿಂಗಳಿನಿಂದ ನಾವು ಕಳಪೆ ತುಪ್ಪ ಬಳಸಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ) ಮಂಡಳಿ ಸ್ಪಷ್ಟನೆ ನೀಡಿದೆ. ತನ್ಮೂಲಕ ಲಡ್ಡು ಪ್ರಸಾದದ ಕುರಿತು ಭಕ್ತರಲ್ಲಿರುವ ಶಂಕೆಯನ್ನು ತೊಡೆದುಹಾಕಲು ಯತ್ನಿಸಿದೆ.ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಸರ್ಕಾರ ಅಧಿಕಾರದಿಂದ ಇಳಿದು ಟಿಡಿಪಿ ನೇತೃತ್ವದ ಚಂದ್ರಬಾಬು ನಾಯ್ಡು ಸರ್ಕಾರ ಈ ವರ್ಷದ ಜೂನ್‌ ತಿಂಗಳಿನಲ್ಲಿ ಅಧಿಕಾರಕ್ಕೆ ಬಂದಿತು. ಬಳಿಕ ಟಿಟಿಡಿ ಆಡಳಿತ ಮಂಡಳಿಯೂ ಬದಲಾಯಿತು.

ಜಗನ್ ಆಡಳಿತದಲ್ಲಿ ತಿರುಮಲ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಸಲಾಗಿತ್ತು: ಸಂಚಲನ ಸೃಷ್ಟಿಸಿದ ಸಿಎಂ ಚಂದ್ರಬಾಬು ನಾಯ್ಡು!

‘ಆಗ ಶಂಕೆಯ ಮೇರೆಗೆ ಲಡ್ಡುಗೆ ಬಳಸಲಾದ ದನದ ಕೊಬ್ಬು, ಹಂದಿ ಕೊಬ್ಬು ಮತ್ತು ಮೀನಿನೆಣ್ಣೆಯ ಅಂಶವಿರುವ ತುಪ್ಪವನ್ನು ಪೂರೈಸುತ್ತಿತ್ತು ಎನ್ನಲಾದ ಎಆರ್‌ ಡೈರಿಯ 10 ಟ್ಯಾಂಕರ್‌ ತುಪ್ಪವನ್ನು ಹೊಸ ಆಡಳಿತ ಮಂಡಳಿಯು ಜುಲೈನಲ್ಲಿ ಪರೀಕ್ಷೆಗೆ ಒಳಪಡಿಸಿತು. ಅವುಗಳ ಪೈಕಿ 4 ಟ್ಯಾಂಕರ್‌ ತುಪ್ಪ ಕಳಪೆಯಾಗಿರುವುದು ಪತ್ತೆಯಾಯಿತು. ಅವುಗಳನ್ನು ವಾಪಸ್‌ ಕಳುಹಿಸಲಾಗಿದೆ. ಬಳಿಕ ಕಳಪೆ ತುಪ್ಪವನ್ನು ಲಡ್ಡು ತಯಾರಿಕೆಗೆ ಬಳಸಿಲ್ಲ’ ಎಂದು ಟಿಟಿಡಿ ಸಿಇಒ ಶ್ಯಾಮಲ ರಾವ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.‘ಜುಲೈ 6ರಂದು ಎರಡು ಕಲಬೆರಕೆ ತುಪ್ಪದ ಟ್ಯಾಂಕರ್‌ ಹಾಗೂ ಜುಲೈ 12ರಂದು ಇನ್ನೆರಡು ಕಲಬೆರಕೆ ತುಪ್ಪದ ಟ್ಯಾಂಕರ್‌ಗಳು ಬಂದಿದ್ದವು. ಟಿಟಿಡಿಯ ಇತಿಹಾಸದಲ್ಲೇ ಮೊದಲ ಬಾರಿ ಹೊರಗಿನ ಪ್ರಯೋಗಾಲಯವೊಂದಕ್ಕೆ (ಗುಜರಾತ್‌ನ ಆನಂದ್‌) ಅದನ್ನು ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ತುಪ್ಪವನ್ನು ಲಡ್ಡು ತಯಾರಿಕೆಗೆ ಬಳಸಿಲ್ಲ. ಆ ಸಮಯದಲ್ಲಿ ಐದು ಕಂಪನಿಗಳು ಟಿಟಿಡಿಗೆ ತುಪ್ಪ ಪೂರೈಸುತ್ತಿದ್ದವು. ಅವುಗಳಲ್ಲಿ ಎಆರ್‌ ಡೈರಿಯ ತುಪ್ಪ ಮಾತ್ರ ಕಳಪೆ ಗುಣಮಟ್ಟದ್ದೆಂದು ಕಂಡುಬಂದಿತ್ತು’ ಎಂದೂ ಹೇಳಿದ್ದಾರೆ.

click me!