ಭತ್ತ ಕುಟ್ಟಿ, ಮೊರ ಹಿಡಿದು ವಿದ್ಯಾರ್ಥಿನಿಯರ ಜೊತೆ ಭವಾನಿ ರೇವಣ್ಣ ಸಂಕ್ರಾತಿ ಸಡಗರ

Jan 15, 2020, 5:02 PM IST

ಹಾಸನ (ಜ. 15):  ಇಂದು ನಾಡಿನಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ.  ಹೊಳೆನರಸೀಪುರದಲ್ಲಿ ಕಾಲೇಜು ವಿದ್ಯಾರ್ಥಿನಿಯರ ಜೊತೆ ಭವಾನಿ ರೇವಣ್ಣ ಸಂಕ್ರಾತಿ ಸಡಗರದಿಂದ ಆಚರಿಸಿದ್ದಾರೆ. ಹೆಂಗಳೆಯರ ಜೊತೆ ಒನಕೆ ಹಿಡಿದು ಭತ್ತ ಕುಟ್ಟಿ, ಮೊರ ಹಿಡಿದು ಹೊಟ್ಟ ತೂರಿ ಸಂಭ್ರಮಿಸಿದ್ಧಾರೆ. 

ಗಾಳಿಪಟ ಹಾರಿಸಿ ಇಂದು ಬಾನಿಗೆಲ್ಲಾ ಹಬ್ಬ ಮಾಡಿದ ಸೇಂಟ್ ಜೋಸೆಫ್ ಶಾಲೆ ಮಕ್ಕಳು

ಮಕ್ಕಳಿಂದ ಎಳ್ಳು ಬೆಲ್ಲ , ಅರಿಶಿನ ಕುಂಕುಮ ಸ್ವೀಕರಿಸಿ ಶುಭ ಕೋರಿದರು.  ಸೀರೆಯುಟ್ಟು ಅಂದವಾಗಿ ಬಂದಿದ್ದ ವಿದ್ಯಾರ್ಥಿನಿಯರು ಹಳ್ಳಿಯ ಸೊಬಗನ್ನು ಕಾಲೇಜು ಆವರಣದಲ್ಲಿ ಸೃಷ್ಟಿಸಿದ್ದರು. ಬಣ್ಣ ಬಣ್ಣದ ರಂಗೋಲಿಯಿಂದ ಕಾಲೇಜು ಆವರಣದ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದರು. ಎತ್ತಿನ ಗಾಡಿ, ಹಳ್ಳಿಯಲ್ಲಿನ ಮನೆಗಳ ಮಾದರಿ ಸಂಕ್ರಾಂತಿ ಸಂಭ್ರಮಕ್ಕೆ ಸಾಕ್ಷಿಯಾಯಿತು. ಭವಾನಿ ರೇವಣ್ಣ ,ಜೋಡೆತ್ತುಗಳಿಗೆ ಪೂಜೆ ಮಾಡಿ ಕಬ್ಬು, ಎಳ್ಳು, ಬೆಲ್ಲವನ್ನು ತಿನ್ನಿಸಿದರು. ಮಕ್ಕಳ ಸಂಕ್ರಾಂತಿ ಸಡಗರಕ್ಕೆ ಪಾರವೇ ಇರಲಿಲ್ಲ. ಆ ಸಂಭ್ರಮ ಹೀಗಿತ್ತು ನೋಡಿ!