'ಯಾವನ್ರೀ ಅವನು ಮೆಂಟಲ್ ಕೇಸ್?' ಡಿಕೆಶಿ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್ ಎಂದ ರಾಜುಗೌಡ ಮೇಲೆ ಡಿಸಿಎಂ ಗರಂ

By Ravi Janekal  |  First Published May 3, 2024, 12:41 PM IST

ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯರ ಸಿಡಿಯನ್ನು ಡಿಕೆ ಶಿವಕುಮಾರ ಬಿಡುಗಡೆ ಮಾಡಿದರೆ ಅಚ್ಚರಿ ಪಡಬೇಕಿಲ್ಲ ಎಂಬ ರಾಜೂಗೌಡರ ಹೇಳಿಕೆಗೆ ಗರಂ ಆದ ಡಿಸಿಎಂ, ಯಾರೋ ಅವನ್ಯಾವನ್ರೀ ರಾಜೂಗೌಡ ಅನ್ನೋನು ಮಾತಾಡಿದ್ದಾನಲ್ಲ, ಅವನು ಒಬ್ಬ ಮೆಂಟಲ್ ಕೇಸ್ ಅವನ ಮಾತುಗಳಿಗೆ ಮಹತ್ವ ಇಲ್ಲ ಎಂದು ಗರಂ ಆದರು.


ಬಾಗಲಕೋಟೆ (ಮೇ.3): ಪ್ರಜ್ವಲ್ ರೇಪ್ ಬಗ್ಗೆ ಪೇಪರ್‌ನಲ್ಲಿ ನೋಡಿದ್ದೇನೆ. ಅದರ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ಅವರಿಗೆ ನಾವು ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ಕುಮಾರಣ್ಣ ಕೂಡ ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ. ಬಿಜೆಪಿಯವ್ರು ಸಹ ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಬೇಕು ಅಂತಾ ಕುಮಾರಣ್ಣ ಹೇಳಿದ್ದಾರೆ, ಅಮಿತ್ ಶಾ ಅವರೂ ಹೇಳಿದ್ದಾರೆ. ಇದರಲ್ಲಿ ನಾವು ಭಾಗಿಯಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಇಂದು ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿಕೆಶಿ ಸಿಡಿ ತಯಾರಿಸೋದರಲ್ಲಿ ನಿಸ್ಸೀಮರು ಎಂಬ ಮಾಜಿ ಶಾಸಕ ರಾಜುಗೌಡ ಹೇಳಿದ್ದಾರೆ. ಬಹಳ ಸಂತೋಷ, ನನ್ನ ಆಗಾಗ ಬಿಜೆಪಿಯವ್ರು, ದಳದವ್ರು ನೆನಪಿಸಿಕೊಳ್ತಾರೆ. ಅವ್ರೆಲ್ಲ ನೆನಪಿಸಿಕೊಳ್ಳಲೇಬೇಕು. ಯಾಕೆಂದರೆ ನಾನು ಒಂದು ಪಕ್ಷದ ಅಧ್ಯಕ್ಷ, ಕ್ಯಾಪ್ಟನ್. ನನ್ನನ್ನು ನೆನಪಿಸಿಕೊಳ್ಳದೆ ಇನ್ಯಾರನ್ನು ನೆನಪಿಸಿಕೊಳ್ತಾರೆ ಎಂದು ಪ್ರಶ್ನಿಸಿದರು.

Tap to resize

Latest Videos

undefined

ಡಿಕೆಶಿ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್, ಸಿದ್ದರಾಮಣ್ಣ ನೀವು ಸ್ವಲ್ಪ ಹುಷಾರಾಗಿರಿ ಎಂದ ರಾಜೂಗೌಡ!

ನಾವು ಕೂಡ ಬಿಜೆಪಿಯವ್ರು ಏನೇ ಮಾಡಿದ್ರೂ, ಮೋದಿ ಹಾಗೂ ಬಿಜೆಪಿ ನಾಯಕರನ್ನೇ ಅಟ್ಯಾಕ್ ಮಾಡೋದು. ನಾನು, ಸಿದ್ದರಾಮಯ್ಯ ಒಂದು ಪ್ರಶ್ನೆ ಕೇಳುತ್ತಿದ್ದೇವೆ. ಬಿಜೆಪಿ ಲೀಡರ್ ಗಳು ಯಾಕೆ ಸಂತ್ರಸ್ತ ಕುಟುಂಬ ಭೇಟಿ ಮಾಡ್ತಿಲ್ಲ? ಯಾಕೆ  ಹೆಣ್ಣುಮಕ್ಕಳಿಗೆ ಸಾಂತ್ವಾನ ಹೇಳಲಿಕ್ಕೆ ಹೋಗ್ತಿಲ್ಲ. ಎಲ್ಲಿ ಹೋದ ಸಿಟಿ ರವಿ, ಎಲ್ಲಿ ಹೋದ್ರು ಶೋಭಕ್ಕ, ಎಲ್ಲಿ ಹೋದ್ರು‌ ಬೊಮ್ಮಾಯಿ? ಪ್ರಲ್ಹಾದ್ ಜೋಶಿನೂ ಮಾತಾಡ್ತಿಲ್ಲ ಯಾಕೆ ಎಂದು ಕಿಡಿಕಾರಿದರು. 

ಮಧ್ಯಾಹ್ನ 12.30ರೊಳಗೆ ಎನ್‌ಡಿಎ 400ರ ಗಡಿ ದಾಟಲಿದೆ: ಶಾ ವಿಶ್ವಾಸ

ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯರ ಸಿಡಿಯನ್ನು ಡಿಕೆ ಶಿವಕುಮಾರ ಬಿಡುಗಡೆ ಮಾಡಿದರೆ ಅಚ್ಚರಿ ಪಡಬೇಕಿಲ್ಲ ಎಂಬ ರಾಜೂಗೌಡರ ಹೇಳಿಕೆಗೆ ಗರಂ ಆದ ಡಿಸಿಎಂ, ಯಾರೋ ಅವನ್ಯಾವನ್ರೀ ರಾಜೂಗೌಡ ಅನ್ನೋನು ಮಾತಾಡಿದ್ದಾನಲ್ಲ, ಅವನು ಒಬ್ಬ ಮೆಂಟಲ್ ಕೇಸ್ ಅವನ ಮಾತುಗಳಿಗೆ ಮಹತ್ವ ಇಲ್ಲ ಎಂದು ತಿರುಗೇಟು ನೀಡಿದರು.

click me!