Fact Check: ಕನ್ನಡ ಕಲಿತಿದ್ದ, ಮೋದಿ ಮೆಚ್ಚಿದ್ದ ಬಿಜೆಪಿ ಲಡಾಖ್‌ ಸಂಸದಗೆ ಕಾಂಗ್ರೆಸ್‌ ಟೆಕೆಟ್ ಕೊಟ್ಟಿದ್ದು ಹೌದಾ?

By Suvarna News  |  First Published May 3, 2024, 12:40 PM IST

 ಲಡಾಖ್‌ ಕ್ಷೇತಕ್ಕೆ ತನ್ನ ಅಭ್ಯರ್ಥಿಯಾಗಿ ಹಾಲಿ ಬಿಜೆಪಿ ಸಂಸದ ತ್ಸೇರಿಂಗ್‌ ನ್ಯಾಮಗಲ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ಗಾಗೆ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಸೇರಿ, ಸುದ್ದಿ ಸಂಸ್ಥೆಗಳು ಸುದ್ದಿ ಮಾಡಿದ್ದು,  ಕಾಂಗ್ರೆಸ್ ಅಭ್ಯರ್ಥಿಯ ಹೆಸರೂ ಒಂದೇ ಆಗಿದ್ದರಿಂದ  ಈ ಗೊಂದಲ ಸೃಷ್ಟಿಯಾಗಿದೆ. 


ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಲಡಾಖ್‌ ಕ್ಷೇತಕ್ಕೆ ತನ್ನ ಅಭ್ಯರ್ಥಿಯಾಗಿ ಹಾಲಿ ಬಿಜೆಪಿ ಸಂಸದ ತ್ಸೇರಿಂಗ್‌ ನ್ಯಾಮಗಲ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾ ಹಾಗೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ, ಖುದ್ದು ಬಿಜೆಪಿ ಸಂಸದ ತ್ಸೇರಿಂಗ್ ಹಾಗೂ ಹಲವು ಬಿಜೆಪಿ ನಾಯಕರು ಟ್ವೀಟ್ ಮಾಡಿ ಈ ಗೊಂದಲಕ್ಕೆ ತೆರೆ ಎಳೆದಿದ್ದು, ಇದೇ ಹೆಸರಿರುವ ಬೇರೆ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಬಿಜೆಪಿ ಈ ಬಾರಿ ತ್ಸೇರಿಂಗ್‌ಗೆ ಟಿಕೆಟ್‌ ನಿರಾಕರಿಸಿ ತಾಶಿ ಗ್ಯಾಲ್‌ಸನ್‌ಗೆ ಟಿಕೆಟ್‌ ನೀಡಿತ್ತು. ಅದರ ಬೆನ್ನಲ್ಲೇ ಬಿಜೆಪಿ ಸಂಸದಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ, ಎಂಬ ಸುದ್ದಿಯೊಂದು ಹರಿದಾಡಿತ್ತು. ಈ ಹಿಂದೆ ಬಿಜೆಪಿ ಸರ್ಕಾರ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದ ವೇಳೆ ಸರ್ಕಾರವನ್ನು ಬೆಂಬಲಿಸಿ ತ್ಸೇರಿಂಗ್‌ ಮಾಡಿದ ಭಾಷಣ ಭಾರೀ ವೈರಲ್‌ ಆಗಿತ್ತು. ಈ ಭಾಷಣವನ್ನೇ ಉದಾಹರಿಸಿ ಮೋದಿ ವಿಪಕ್ಷಗಳ ನಾಯಕರಿಗೆ ಟಾಂಗ್‌ ನೀಡಿದ್ದರಿಂದ ಬಿಜೆಪಿ ಸಂಸದನಿಗೆ ಟಿಕೆಟ್ ನೀಡಿದ್ದಾರೆಂಬ ಸುದ್ದಿ ಸಹಜವಾಗಿ ಮಾಧ್ಯಮಗಳನ್ನು ಆಕರ್ಷಿಸಿತ್ತು. 

ಆರ್ಟಿಕಲ್ 370 ರದ್ದಾಗಿದ್ದಕ್ಕೆ ಶ್ಲಾಘಿಸಿದ್ದ ತ್ಸೇರಿಂಗ್
ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ಹಾಗೂ 35-A ರದ್ದು ಮಾಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವನ್ನು ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ವ್ಯಾಪಕವಾಗಿ ಶ್ಲಾಘಿಸಿದ್ದರು. ಆರ್ಟಿಕಲ್ 370 ರದ್ದಾಗಿ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಮಾತನಾಡಿದ ಜಮ್ಯಾಂಗ್, ಕಳೆದ 71 ವರ್ಷಗಳಲ್ಲಿ ಲಡಾಖ್ ಪ್ರಾಂತ್ಯಕ್ಕೆ ಸಿಗದಿದ್ದ ಸೌಲಭ್ಯ, ಮೂಲ ಸೌಕರ್ಯ, ಸ್ಥಾನಮಾನ ಕಳೆದೊಂದು ವರ್ಷದಲ್ಲಿ ಲಡಾಖ್‌ಗೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಲಡಾಖ್ ಅಭಿವೃದ್ಧಿಯತ್ತ ಸಾಗುತ್ತಿದೆ. 7 ದಶಕಗಳಿಂದ ಕತ್ತಲಲ್ಲಿ ಸಾಗಿದ್ದ ಲಡಾಖ್‌ನ ಎಲ್ಲೆಡೆ ಬೆಳಕು ಚೆಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದರು.

Tap to resize

Latest Videos

ಕಳೆದ ವರ್ಷ ಹಾಗೂ ಪ್ರಸಕ್ತ ಬಜೆಟ್‌  ಮೂಲಕ ಒಟ್ಟು ಲಡಾಖ್ ಪ್ರಾಂತ್ಯಕ್ಕೆ 11,000 ಕೋಟಿ ರೂಪಾಯಿ ಸಿಕ್ಕಿದೆ. ವಿಶೇಷ ಅಭಿವೃದ್ಧಿ ಪ್ಯಾಕೇಜ್ ಯೋಜನೆಯಡಿ ಈ ಹಣ ಬಿಡುಗಡೆ ಮಾಡಲಾಗಿದೆ.  ಲೆಹ್ ಅಭಿವೃದ್ಧಿಗೆ 250 ಕೋಟಿ ರೂಪಾಯಿ ಹಾಗೂ ಕಾರ್ಗಿಲ್ ಅಭಿವೃದ್ಧಿಗೆ 250 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇನ್ನು ಮೆಡಿಕಲ್ ಕಾಲೇಜು, ವಿಶ್ವಿ ವಿದ್ಯಾಲಯ, ಹೊಟೆಲ್ ಮ್ಯಾನೇಜ್ಮೆಂಟ್ ಸೇರಿದಂತ ಪ್ರತಿ ಕ್ಷೇತ್ರಗಳು ಅಭಿವೃದ್ಧಿಯತ್ತ ಮುಖ ಮಾಡಿದೆ ಎಂದು ಜಮ್ಯಾಂಗ್ ಹೇಳಿದ್ದರು.

'ಕೇಂದ್ರದಲ್ಲಿ ತ್ರಿಮೂರ್ತಿಗಳು ಇರುವವರೆಗೆ ಯಾರೂ ಭಯಪಡಬೇಕಾಗಿಲ್ಲ'

ಕನ್ನಡ ಕಲಿತಿದ್ದ ಜಮ್ಯಾಂಗ್ ತ್ಸೆರಿಂಗ್:
2020ರಲ್ಲಿ ಯುವ ನಾಯಕ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರನ್ನು  ಬಿಜೆಪಿ ಲಡಾಕ್‌ನ ಪಕ್ಷದ ಅಧ್ಯಕ್ಷನಾಗಿ ನೇಮಕ ಮಾಡಿತ್ತು.  ಅಲ್ಲದೇ ಈ ಯುವ ಸಂಸದ ಹಾಲಿ ಮೈಸೂರು ಸಂಸದ ಬಿಜೆಪಿಯಿಂದ ಟಿಕೆಟ್ ವಂಚಿತರಗಿರುವ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಅವರೊಂದಿಗೆ ಸೇರಿ ಕನ್ನಡ ಕಲಿತಿದ್ದರು. ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರಿಗಾಗಿ ಕನ್ನಡ ಕಲಿತಿದ್ದೇನೆ ಎಂದಿದ್ದ ತ್ಸೆರಿಂಗ್ ಬಿಜೆಪಿ ಸೇರ್ಕೊಳ್ಳಿ ಎಂದು  ಹೇಳಿದ್ದರು.

ರಾಹುಲ್ ಆರೋಪಕ್ಕೆ ತಿರುಗೇಟು
2020ರಲ್ಲಿ ಇಂಡೋ ಚೀನಾ ಗಡಿಯಲ್ಲಿ ಚೀನಿ ಸೇನೆ ಅತಿಕ್ರಮಣ ಮಾಡಿ ಭಾರತದ ನೆಲವನ್ನು ಕಬಳಿಸಿದ್ದು, ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್‌ನಲ್ಲಿ ಆಗ್ರಹಿಸಿದ್ದರು. ಈ ವೇಳೆ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದ ಲಡಾಖ್ ಬಿಜೆಪಿ ಸಂಸದರಾಗಿದ್ದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್, ಸಾಕ್ಷಿ ಸಮೇತ ಭಾರತದ ನೆಲ ಸುರಕ್ಷಿತವಾಗಿರುವುದನ್ನು ಸಾಬೀತುಪಡಿಸಿದ್ದರು. ಲಡಾಖ್‌ನ ಒಂದಿಂಚೂ ಭೂಮಿಯೂ ಚೀನಿಯರ ಪಾಲಾಗಿಲ್ಲ ಎಂದು ತಿರುಗೇಟು ನೀಡಿದ್ದರು. ಇವರ ಭಾಷಣದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.  ಹೀಗಿರುವಾಗ ಅವರಿಗೆ ಬಿಜೆಪಿ ಟಿಕೆಟ್ ಏಕೆ ನಿರಾಕರಿಸಿತ್ತು ಎಂಬ ವಿಚಾರ ನಿಗೂಢವಾಗಿದೆ. ಆದರೆ, ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದು ಸುಳ್ಳೆಂಬುದು ಸ್ಪಷ್ಟವಾಗಿದೆ.

⚠️ Same Name Different People 👇🏻

Pic 1 (Left) ✋🏻: Jamyang Tsering Namgyal a congress councillor and Candidate from Congress Laddakh

Pic 2 (Right) 🪷: Jamyang Tsering Namgyal. A sitting BJP MP of Laddakh pic.twitter.com/UwNPzDclbi

— Pooja Sangwan ( Modi Ka Parivar ) (@ThePerilousGirl)

ಆನ್ ದೇಶ್ ಕೀ, ಶಾನ್ ದೇಶ್ ಕೀ, ದೇಶ್ ಕೀ ಹಮ್ ಸಂತಾನ್:ಕಿಚ್ಚು ಹಚ್ಚಿದ ಜಮಿಯಾಂಗ್!

ಜಮ್ಮು ಕಾಶ್ಮೀರದ ಭಾಗವಾಗಿದ್ದ ಲಡಾಕ್ ಈಗ ಕೇಂದ್ರಾಳಿತ ಪ್ರದೇಶವಾಗಿದ್ದು, ಭೌಗೋಳಿಕವಾಗಿ ಲಡಾಖ್ ಇಡೀ ಭಾರತದಲ್ಲಿಯೇ ಅತಿದೊಡ್ಡ ಸಂಸತ್ ಕ್ಷೇತ್ರವಾಗಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಜಮ್ಮು ಕಾಶ್ಮೀರದ ಭಾಗವಾಗಿದ್ದ ಲಡಾಕ್ ಅನ್ನು  ವಿಭಜನೆ ಮಾಡಿ ಕೇಂದ್ರಾಡಳಿತ ಪ್ರದೇಶ ಮಾಡಲಾಗಿದೆ. 

Jamyang Tsering, BJP MP from Ladakh in Lok Sabha on : What will be lost with this decision? Sirf do pariwar rozi-roti khoyenge aur Kashmir ka bhavishya ujjwal hone wala hai. pic.twitter.com/Jb4AMLQnOa

— ANI (@ANI)

 

click me!