ಅರೆರೆ... ಇಷ್ಟು ಬೇಗ ಶ್ರೀರಸ್ತು ಶುಭಮಸ್ತು ಮುಗಿದು ಬಿಡುತ್ತಾ? ಸೀರಿಯಲ್‌ನಲ್ಲಿ ಇದೇನಿದು ಹೊಸ ಟ್ವಿಸ್ಟ್‌?

By Suvarna News  |  First Published May 3, 2024, 12:57 PM IST

ಶ್ರೀರಸ್ತು ಶುಭಮಸ್ತು ಸೀರಿಯಲ್‌ಗೆ ಭಾರಿ ಟ್ವಿಸ್ಟ್‌ ಸಿಕ್ಕಿದೆ. ಶಾರ್ವರಿ ಸತ್ಯ ಹೇಳಲು ಒಪ್ಪಿಕೊಂಡಿದ್ದಾಳೆ. ಹಾಗಿದ್ದರೆ ಮುಂದೇನು? 
 


ಪ್ರತಿಯೊಂದು ಸೀರಿಯಲ್‌ಗಳಿಗೂ ಒಂದು ರಹಸ್ಯ ಇಟ್ಟಿರಲಾಗುತ್ತದೆ. ಆ ರಹಸ್ಯ ಗೊತ್ತಾಗಿಬಿಟ್ಟರೆ ಆ ಸೀರಿಯಲ್‌ ಮುಗಿದಂತೆಯೇ. ಆ ಗುಟ್ಟು ಪ್ರೇಕ್ಷಕರಿಗೆ ತಿಳಿದಿದ್ದರೂ ಧಾರಾವಾಹಿಯ ಮನೆ ಮಂದಿಗೆ ತಿಳಿಯಲು ಕೆಲವೊಮ್ಮೆ 8-10 ವರ್ಷಗಳಾಗುವುದೂ ಉಂಟು! ಆದರೆ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಈಗಲೇ ಭಾರಿ ಟ್ವಿಸ್ಟ್‌ ಕೊಡಲಾಗಿದ್ದು, ಇದರ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಇಷ್ಟು ಬೇಗ ಧಾರಾವಾಹಿಯನ್ನು ಮುಗಿಸಿಬಿಡ್ತಾರಾ ಎಂದು ಅಭಿಮಾನಿಗಳ ಅಚ್ಚರಿಯಿಂದ ಕೇಳುತ್ತಿದ್ದಾರೆ.

ಅಷ್ಟಕ್ಕೂ ಇಲ್ಲಿ ಶಾರ್ವರಿಯದ್ದೇ ಸೀಕ್ರೇಟ್‌. ಗಂಡನ ಅಣ್ಣ ಮಾಧವ್​, ಆತನ ಮೊದಲ ಪತ್ನಿ ಸುಮತಿ ಮತ್ತು ಮಕ್ಕಳನ್ನು ಸರ್ವನಾಶ ಮಾಡಲು ಭೀಕರ ಆ್ಯಕ್ಸಿಡೆಂಟ್​ ಮಾಡಿಸಿದ್ದಾಳೆ ಶಾರ್ವರಿ. ಆದರೆ ಆಕೆಯನ್ನು ಎಲ್ಲರೂ ದೇವರ ರೀತಿಯಲ್ಲಿ ಗೌರವಿಸುತ್ತಿದ್ದಾರೆ. ಈ ವಿಷಯ  ಗಂಡ ಮಹೇಶ್​ಗೆ ಬಿಟ್ಟು ಯಾರಿಗೂ ಗೊತ್ತಿಲ್ಲ. ಇದೊಂದೇ ರಹಸ್ಯವನ್ನೇ ಸೀರಿಯಲ್‌ನಲ್ಲಿ ಎಳೆಯುತ್ತಾ ಬರಲಾಗಿದೆ. ಉಳಿದ ದೃಶ್ಯಗಳೆಲ್ಲವೂ ಸೈಡ್‌ ಕಥೆಗಳಷ್ಟೇ. ಈ ಅಪಘಾತವನ್ನು ತಮ್ಮ ತಂದೆಯೇ ಮಾಡಿಸಿದ್ದಾನೆ ಎನ್ನುವ ಕಾರಣಕ್ಕೆ ಅವಿ ಮತ್ತು ಅಭಿ ತಂದೆಯ ವಿರುದ್ಧ ತಿರುಗಿಬಿದ್ದಿದ್ದು, ಚಿಕ್ಕಮ್ಮ ಶಾರ್ವರಿಯೇ ಸರ್ವಸ್ವ ಎಂದುಕೊಂಡಿದ್ದಾರೆ. ಇದೇ ಕಾರಣಕ್ಕೆ ಶಾರ್ವರಿಯ ಗುಟ್ಟು ರಟ್ಟಾದರೆ ಅಲ್ಲಿ ಕಥೆ ಮುಗಿದಂತೆ. ಅದು ಅಷ್ಟು ಸುಲಭವೂ ಅಲ್ಲ ಬಿಡಿ.

Tap to resize

Latest Videos

ಬಿಂಕದ ಸಿಂಗಾರಿ ಎಂದ ಶ್ರೀರಸ್ತು ಶುಭಮಸ್ತು ಸೊಸೆಯಂದಿರು: ಅಲ್ಲೂ ಹೀಗೆ ಇರೋಕೆ ಏನಾಗತ್ತೆ ಕೇಳಿದ ಫ್ಯಾನ್ಸ್​...

ಆದರೆ ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ತುಳಸಿ ಪೂಜೆ ಮುಗಿಸುತ್ತಿದ್ದಂತೆಯೇ ಸಂಪೂರ್ಣ ಸತ್ಯವನ್ನು ಒಪ್ಪಿಕೊಳ್ಳುವಂತೆ ಮಹೇಶ್‌ ಪತ್ನಿಗೆ ಹೇಳಿದ್ದಾನೆ. ಅಷ್ಟಕ್ಕೂ  ಅಚ್ಚರಿಯ ವಿಷಯ ಏನೆಂದರೆ, ಈಕೆ ಆ್ಯಕ್ಸಿಡೆಂಟ್​ ಮಾಡಿಸಿದ್ದು,  ಮಾಧವ್​ ಪತ್ನಿ ಸುಮತಿಗೆ ಮನೆಯಲ್ಲಿ ಎಲ್ಲರೂ ರಿಸ್​ಪೆಕ್ಟ್​ ಕೊಡುತ್ತಾರೆ ಎನ್ನುವ ಕಾರಣಕ್ಕಂತೆ! ಅವಳ ಮುಂದೆಯೇ ತಲೆಬಾಗಿ ಎಲ್ಲರೂ ಮರ್ಯಾದೆ ಕೊಡುತ್ತಾರೆ, ನಾನೂ ಆ ಮನೆಯ ಸೊಸೆ. ಆದರೆ ನನಗೆ ಯಾರೂ ಮರ್ಯಾದೆ ಕೊಡುತ್ತಿರಲಿಲ್ಲ. ಅದಕ್ಕಾಗಿ ಕೊಲೆ ಮಾಡಿಸಿದೆ ಎಂದು ಎಷ್ಟು ಸಲೀಸಾಗಿ ಹಿಂದೆ ಒಪ್ಪಿಕೊಂಡಿದ್ದಳು.

ಪೂಜೆ ಮುಗಿಯುತ್ತಿದ್ದಂತೆಯೇ ಶಾರ್ವರಿ ನಾನು ಸತ್ಯವನ್ನು ಹೇಳಬೇಕಿದೆ. ಎಲ್ಲರ ಎದುರು ಸತ್ಯ ಹೇಳುತ್ತಿದ್ದೇನೆ ಎಂದು ಹೇಳಿದ್ದಾಳೆ. ಅದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಶಾರ್ವರಿ ನಿಜಕ್ಕೂ ಸತ್ಯ ನುಡಿದರೆ ಸೀರಿಯಲ್‌ ಮುಗಿದಂತೆಯೇ, ಅದು ಖಂಡಿತ ಸಾಧ್ಯವಿಲ್ಲ. ಅವಳು ಬೇರೆ ಏನನ್ನೋ ಹೇಳುತ್ತಾಳೆ, ಅಥವಾ ಅವರು ಹೇಳುವ ಮಧ್ಯಯಲ್ಲಿ ಇನ್ನೇನೋ ನಡೆದು ಅವಳು ಈ ವಿಷಯವನ್ನು ಹೇಳಲು ಆಗುವುದಿಲ್ಲ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ. ಅಷ್ಟಕ್ಕೂ ಆಗುವುದೇನು? ಸೀರಿಯಲ್‌ನಲ್ಲಿ ತಿಳಿಯಬೇಕಿದೆಯಷ್ಟೇ.
 

ಒಡೆದ ಹಾಲಲ್ಲೂ ಸಿಹಿ ಮಾಡ್ಬೋದಲ್ವಾ? ಪುಟ್ಟಕ್ಕನ ಸಂಸಾರದ ಟಿಪ್ಸ್​ ಈಗಿನ ಕಾಲಕ್ಕೂ ಸರಿಹೊಂದುತ್ತಾ?

click me!