Panchang: ಇಂದು ಶ್ರೀಹರಿಗೆ ಲಕ್ಷ ತುಳಸಿ ಅರ್ಚನೆಯಿಂದ ವಿಷ್ಣು ಸಾನಿಧ್ಯ

Nov 6, 2022, 10:09 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಭಾನುವಾರ, ತ್ರಯೋದಶಿ ತಿಥಿ, ರೇವತಿ ನಕ್ಷತ್ರ.

ಈ ದಿನ ತ್ರಯೋದಶಿ ಇದ್ದರೂ ಇಂದು ವೈಕುಂಠ ಚತುರ್ದಶಿ ಆಚರಿಸಲಾಗುತ್ತದೆ. ಏಕೆಂದರೆ, ಇಂದು ಸಂಜೆ ಚತುರ್ದಶಿ ತಿಥಿ ಆರಂಭವಾಗಿರುತ್ತದೆ. ಆ ಸಮಯ ಉಪವಾಸವಿದ್ದು ಹರಿಸ್ಮರಣೆ ಮಾಡಬೇಕು. ತುಳಸಿಯ ಸಮೀಪದಲ್ಲಿ ಮಂಟಪ ಸ್ಥಾಪನೆ ಮಾಡಿ ಅಲ್ಲಿ ಕಳಸವಿಟ್ಟು ಅಲ್ಲಿ ಶ್ರೀಹರಿಯನ್ನು ಆಹ್ವಾನಿಸಿ ಪೂಜಿಸಬೇಕು.. ಈ ಪೂಜೆ ಹೇಗಿರಬೇಕು, ಇದರಿಂದ ಏನು ಫಲ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ. ದಿನವಿಶೇಷದ ಜೊತೆಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರವನ್ನೂ, ದ್ವಾದಶ ರಾಶಿಗಳ ಇಂದಿನ ಫಲವನ್ನೂ ತಿಳಿಸಿಕೊಡುತ್ತಾರೆ.