Ugadi 2022: ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ 'ಸುವರ್ಣ ಯುಗಾದಿ'

Apr 4, 2022, 7:27 PM IST

ಬೆಂಗಳೂರು (ಏ.04): ಯುಗಾದಿ ಹಬ್ಬದಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಕಚೇರಿಯಲ್ಲಿ ಸಂಭ್ರಮದ ವಾತಾವರಣ. ಈ ಸಂಭ್ರಮದಲ್ಲಿ ಕಚೇರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುವರ್ಣ ಕಚೇರಿಯ ಸಿಬ್ಬಂದಿ ವರ್ಗ ಖುಷಿಯಿಂದ ಭಾಗವಹಿಸಿದ್ದಾರೆ. ವಿಶೇಷವಾಗಿ ಬಾಲ್ಯದಲ್ಲಿ ಶಾಲೆಯಲ್ಲಿ ಆಟವಾಡಿದಂತಹ  ಕೆಲವೊಂದು ಆಟಗಳನ್ನು ಸಿಬ್ಬಂದಿ ವರ್ಗ ಆಡಿದ್ದು, ಎಲ್ಲರೂ ಖುಷಿಯಲ್ಲಿ ಮಿಂದೆದಿದ್ದಾರೆ. ಮಾತ್ರವಲ್ಲದೇ ಆಟದಲ್ಲಿ ಆಡಿ ಗೆದ್ದಂತಹವರಿಗೆ ಉಡುಗೊರೆಯನ್ನು ಸಹ ನೀಡಲಾಗಿದೆ. ನೀವು ಕೂಡಾ ಈ ಮನರಂಜನಾತ್ಮಕ ವಿಡಿಯೋವನ್ನು ವೀಕ್ಷಿಸಿ.