ಭಾರತೀಯ ಚಿತ್ರರಂಗದಲ್ಲಿ ರೆಕಾರ್ಡ್ ಬರೆಯಲು ಯಶ್ ಸಜ್ಜು: ಮೂರು ಪಾರ್ಟ್​​ನಲ್ಲಿ ಬರಲಿದೆ 'ರಾಮಾಯಣ'

May 16, 2024, 4:54 PM IST

ರಾಮಾಯಣ.. ರಾಕಿಂಗ್ ಸ್ಟಾರ್ ಯಶ್​ ನಿರ್ಮಾಣದ ಸಿನಿಮಾ. ಕೆಜಿಎಫ್​​ನ ರಾಕಿ ರಾವಣನಾಗಿ ಅಬ್ಬರಿಸೋ ಚಿತ್ರ. ಭರತೀಯ ಪರಂಪರೆಯನ್ನ ಇಡೀ ವಿಶ್ವಕ್ಕೆ ತೆರೆದಿಡಲು ಸಿದ್ಧವಾಗುತ್ತಿರೋ ಪ್ಯಾನ್​ ವರ್ಲ್ಡ್​ ಮೂವಿ. ಈ ಸಿನಿಮಾದಿಂದ ಯಶ್​​ ದೊಡ್ಡ ರೆಕಾರ್ಡ್​ ಒಂದನ್ನ ಬರೆಯಲು ಸಜ್ಜಾಗಿದ್ದಾರೆ. ಅದು ರಾಮಾಯಣ ನಿರ್ಮಾಣಕ್ಕೆ ಖರ್ಚು ಮಾಡೋ ಹಣದ ವಿಷಯದಲ್ಲಿ. ಹಾಗಾದ್ರೆ ರಾಮಾಯಣ ಎಷ್ಟು ಕೋಟಿ ಬಂಡವಾಳದಲ್ಲಿ ನಿರ್ಮಾಣ ಆಗುತ್ತೆ ಗೊತ್ತಾ..? ಅದನ್ನ ಕೇಳಿದ್ರೆ ನೀವು ಆಶ್ಚರ್ಯ ಪಡೋದರಲ್ಲಿ ನೋ ಡೌಟ್. ಇಷ್ಟು ದಿನ ರಾಮಾಯಣ ಭಾರತದ ಬಿಗ್ ಬಜೆಟ್ ಸಿನಿಮಾ ಅಂತ ಮಾತ್ರ ಟಾಕ್ ಆಗುತ್ತಿತ್ತು. 

ಆದ್ರೆ ಈ ಸಿನಿಮಾದಲ್ಲಿ ಯಶ್​ ನಿರ್ಮಾಪಕ ಆಗಿ ಬಂದ ಮೇಲೆ ಇದರ ಗಾತ್ರ ಹೆಚ್ಚಾಯ್ತು. ರಾಮಾಯಣ ಬಜೆಟ್ ಎಷ್ಟು ಕೋಟಿ ಇರುತ್ತೆ ಅನ್ನೋ ಚರ್ಚೆ ಶುರುವಾಯ್ತು. ಯಾಕಂದ್ರೆ ಯಶ್​ ತನ್ನ ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ಸ್​​​ ಮೂಲಕ ನಿರ್ಮಾಪಕ ನಮಿತ್​ ಮಲ್ಹೋತ್ರಾ ಜೊತೆ ಸೇರಿ ರಾಮಾಯಣವನ್ನ ಪ್ರಪಂಚಕ್ಕೆ ತೋರಿಸಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಈ ಸಿನಿಮಾಗೆ 835 ಕೋಟಿ ಬಂಡವಾಳ ಹೂಡೂದಕ್ಕೆ ಯಶ್​ ಹಾಗು  ನಮಿತ್ ಮಲ್ಹೋತ್ರಾ ನಿರ್ಧರಿಸಿದ್ದಾರೆ ಅಂತ ಸುದ್ದಿಯಾಗಿದೆ. ರಾಮಾಯಣ ನಿರ್ಮಾಣ ಸುಮ್ಮನೆ ಮಾತಲ್ಲ. 

ಎಲ್ಲಾ ಹೊಸ ಟೆಕ್ನಾಲಜಿಯನ್ನ ಬಳಸಿ ರಾಮಾಯಣದ ಪ್ರಪಂಚವನ್ನ ರಿಯಲಿಸ್ಟಿಕ್ ಆಗಿ ತೆರೆದಿಡೋ ಜವಾಬ್ಧಾರಿ ನಿರ್ದೇಶಕ ನಿತೀಶ್ ತಿವಾತಿ ಮೇಲಿದೆ. ರಾಮಾಯಣದ ಕಥೆಯನ್ನು ಅದ್ಭುತ ದೃಶ್ಯ ವೈಭವದೊಂದಿಗೆ ಪ್ರೇಕ್ಷಕರಿಗೆ ತೋರಿಸಲು ಚಿತ್ರತಂಡ ನಿರ್ಧರಿಸಿದೆ. ಆ ಕಾರಣಕ್ಕಾಗಿ ಇಷ್ಟು ದೊಡ್ಡ ಬಜೆಟ್​ನಲ್ಲಿ ಸಿನಿಮಾ ಮಾಡಲಾಗುತ್ತಿದೆ. ಅಷ್ಟೆ ಅಲ್ಲ ರಾಮಾಯಣ ಕಥೆಯನ್ನ ಒಂದೇ ಪಾರ್ಟ್​​ನಲ್ಲಿ ಹೇಳೋಕೆ ಆಗಲ್ಲ. ಹೀಗಾಗಿ ಮೂರು ಪಾರ್ಟ್​ ಮಾಡಿ ತೆರೆಗೆ ತರುತ್ತಿದ್ದಾರೆ. ಈ ಮೂರು ಪಾರ್ಟ್​​ಗೆ ಸೇರಿ ಒಟ್ಟು 835 ಕೋಟಿ ಬಂಡವಾಳ ಅಂತ ಅಂದಾಜಿಸಲಾಗಿದೆ. 

ಈಗಾಗ್ಲೆ ರಾಮಾಯಣ ಮೊದಲ ಪಾರ್ಟ್​​ನ ಕೆಲಸ ಶುರುವಾಗಿದ್ದು, ರಾಮನ ಅವತಾರ ತಾಳಿರೋ ರಣಬೀರ್ ಕಪೂರ್​​​ ಹಾಗು ಸೀತೆಯಾಗಿರೋ ಸಾಯಿ ಪಲ್ಲವಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. 2022ರಲ್ಲಿ ಬಿಡುಗಡೆ ಆದ ‘ಬ್ರಹ್ಮಾಸ್ತ್ರ’ ಸಿನಿಮಾಗೆ 450 ಕೋಟಿ ರೂಪಾಯಿ ಬಜೆಟ್​ ಸುರಿಯಲಾಗಿತ್ತು. ಅದು ಬಾಲಿವುಡ್​ನಲ್ಲಿ ಈವರೆಗಿನ ಅತಿ ದೊಡ್ಡ ಬಜೆಟ್​ನ ಸಿನಿಮಾ ಎನಿಸಿಕೊಂಡಿತ್ತು. ಆ ಸಿನಿಮಾದಲ್ಲೂ ರಣಬೀರ್ ಕಪೂರ್​ ಹೀರೋ ಆಗಿದ್ದರು. ಈಗ ಯಶ್​​​ ಜೊತೆ ರಾಮಾಯಣದಲ್ಲಿ ರಾಮ ಆಗಿರೋ ರಣಬೀರ್ ಕಪೂರ್​​​​ ಮತ್ತೊಮ್ಮೆ ರಾಮಾಯಣದಲ್ಲಿ ಬಿಗ್ ಬಜೆಟ್​ ಸಿನಿಮಾದಲ್ಲಿ ಮಿಂಚಲಿದ್ದಾರೆ. ವಿಶೇಷ ಅಂದ್ರೆ ಇದು ಭಾರತೀಯ ಚಿತ್ರರಂಗದ 835 ಕೋಟಿಯ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆ ಪಡೆಯಲಿದೆ.