ಭಾಗ್ಯಲಕ್ಷ್ಮಿ ಮತ್ತು ಬ್ರಹ್ಮಗಂಟು ಸೀರಿಯಲ್‌ಗಳಲ್ಲಿ ರೋಚಕ ಟ್ವಿಸ್ಟ್ ಸಿಕ್ಕಿದೆ. ನಾಯಕಿಯರ ಬದಲಾವಣೆಗೆ ವೀಕ್ಷಕರಿಂದ ಭಾರಿ ಖುಷಿ ವ್ಯಕ್ತವಾಗುತ್ತಿದೆ.
ಅಲ್ಲಿ ಅಳುಮುಂಜಿ ಭಾಗ್ಯಾ, ಇಲ್ಲಿ ಅಳುಮುಂಜಿ ದೀಪಾ... ಇಬ್ಬರ ಗೆಟಪ್ಪೂ ಚೇಂಜ್ ಆಗೋಗಿದೆ. ಇವರೀಗ ಕೇವಲ ಸಹನಾಶೀಲಮಯಿಗಳು ಎಂದು ಹಣೆಪಟ್ಟಿ ಕಟ್ಟುಕೊಂಡ ಹೆಣ್ಣುಮಕ್ಕಳಲ್ಲ, ಹೆಣ್ಣು ಮುನಿದರೆ ಏನಾಗುತ್ತದೆ ಎಂದು ತೋರಿಸುತ್ತಿರುವವರು. ಇಬ್ಬರ ಗುರಿಯೂ ಒಂದೇ, ಗಂಡನ ಜೊತೆ ಸುಖವಾಗಿ ಬಾಳ್ವೆ ಮಾಡಬೇಕು ಎನ್ನುವುದು, ದಾರಿಗಳು ಬೇರೆ ಬೇರೆಯಷ್ಟೇ. ಭಾಗ್ಯ ಗಂಡನ ವಿರುದ್ಧವೇ ಸಿಡಿದೆದ್ದಿದ್ದರೆ, ದೀಪಾ ಗಂಡನ ಅತ್ತಿಗೆಯ ವಿರುದ್ಧ ಸೊಂಟಕಟ್ಟಿ ನಿಂತಿದ್ದಾಳೆ. ಅಲ್ಲಿಯೂ ಪತ್ನಿಯನ್ನು ಕಂಡರೆ ಗಂಡ ತಾಂಡವ್‌ಗೆ ಆಗಲ್ಲ, ಇಲ್ಲಿ ಚಿರುಗೆ ಆಗಲ್ಲ. ಅಲ್ಲಿಯ ಪತಿ ಪರಸ್ತ್ರೀ ವಶಕ್ಕೆ ಒಳಗಾಗಿದ್ದರೆ, ಇಲ್ಲಿಯ ಪತಿ ಅತ್ತಿಗೆಯ ವ್ಯಾಮೋಹದ ಹಿಡಿತದಲ್ಲಿದ್ದಾನೆ. ಒಟ್ಟಿನಲ್ಲಿ ದಾರಿ ಬೇರೆ ಬೇರೆಯಾದರೂ ಗುರಿಯೊಂದೇ. ಇದು ಸೀರಿಯಲ್ ಪ್ರೇಮಿಗಳಿಗೆ ಹಬ್ಬವನ್ನು ಉಂಟು ಮಾಡುತ್ತಿದೆ.
ಬಹುತೇಕ ಸೀರಿಯಲ್‌ಗಳಲ್ಲಿ ಹೆಣ್ಣೇ ನಾಯಕಿ, ಹೆಣ್ಣೇ ವಿಲನ್. ಸೀರಿಯಲ್ ನೋಡುಗರ ಪೈಕಿ ಮಹಿಳೆಯರದ್ದು ಸಿಂಹಪಾಲು ಎನ್ನುವ ಸಲುವಾಗಿಯೇ ಎಲ್ಲಾ ಸೀರಿಯಲ್‌ಗಳಲ್ಲಿಯೂ ಗಂಡು ಎನ್ನುವುದು ಆಟಕ್ಕುಂಟು, ಲೆಕ್ಕಕ್ಕಿಲ್ಲ ಅಷ್ಟೇ. ಸೀರಿಯಲ್‌ಗಳನ್ನು ಕೇವಲ ಧಾರಾವಾಹಿ ರೂಪದಲ್ಲಿ ನೋಡದೇ ಅದನ್ನುತಮ್ಮ ಜೀವನದ ಪಾತ್ರವೇ ಎಂದು ನೋಡುತ್ತಲೇ ಅದರ ಮೋಹಪಾಶದಲ್ಲಿ ಸಿಲುಕುವ ಬಹುದೊಡ್ಡ ಮಹಿಳಾ ವರ್ಗವಿದೆ. ಇದೇ ಕಾರಣಕ್ಕಾಗಿಯೇ ಭಾಷೆ ಯಾವುದೇ ಇರಲಿ, ಬಹುತೇಕ ಎಲ್ಲಾ ಸೀರಿಯಲ್‌ಗಳಲ್ಲಿಯೂ ಮಹಿಳೆಯರೇ ಪ್ರಧಾನವಾಗಿರುತ್ತಾರೆ. ಆದರೆ ಇಲ್ಲಿ ನಾಯಕಿ ಎನ್ನಿಸಿಕೊಂಡವಳು ಅತೀ ಮುಗ್ಧೆ, ಕುಟುಂಬ ಎಂದರೆ ಜೀವ ಬಿಡುವವಳು, ಅತೀ ಪೆದ್ದು ಎಲ್ಲವೂ ಆಗಿದ್ದರೆ, ಲೇಡಿ ವಿಲನ್‌ಗಳು ಅಗತ್ಯಕ್ಕಿಂತ ಹೆಚ್ಚು ಕ್ರೂರಿಗಳಾಗಿರುತ್ತಾರೆ. ಆದ್ದರಿಂದ ನಾಯಕಿಯರು ಸಿಡಿದೆದ್ದು ಬಿಟ್ಟರು ಎಂದರೆ ವೀಕ್ಷಕರಿಗೆ ಹಬ್ಬವೋ ಹಬ್ಬ.
ಆಗ ಬೆಡ್‌ರೂಮ್, ಈಗ ಬಾತ್‌ರೂಮ್! ಫ್ರೆಂಡ್ ಜೊತೆ ನಿವೇದಿತಾ ಖುಲ್ಲಂ ಖುಲ್ಲಾ ವಿಡಿಯೋಗೆ ನೆಟ್ಟಿಗರು ಶಾಕ್...
ಅದೇ ಹಬ್ಬವನ್ನು ಈಗ ಒಟ್ಟಿಗೇ ಉಣಬಡಿಸುತ್ತಿದೆ ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್ ಮತ್ತು ಜೀ ಕನ್ನಡದ ಬ್ರಹ್ಮಗಂಟು ಸೀರಿಯಲ್. ಗಂಡನ ಅಕ್ರಮ ಸಂಬಂಧ ತಿಳಿದು ಭಾಗ್ಯ ಸಿಡಿದೆದ್ದಿದ್ದಾಳೆ. ಒಂದು ವಾರ ಭಾಗ್ಯ ಮಳೆಯಲ್ಲಿ ಅತ್ತೂ ಅತ್ತೂ ಸುಸ್ತಾಗಿದ್ದನ್ನು ಕಂಡು ಸೋಷಿಯಲ್ ಮೀಡಿಯಾಗಳಲ್ಲಿ ಮೀಮ್ಸ್‌ಗಳ ಸುರಿಮಳೆಯೇ ಆಗಿತ್ತು. ಸೀರಿಯಲ್ ಅನ್ನುದಯವಿಟ್ಟು ಯಾರೂ ನೋಡಬೇಡಿ ಎನ್ನುವಷ್ಟರ ಮಟ್ಟಿಗೆ ವೀಕ್ಷಕರು ರೋಸಿ ಹೋಗಿದ್ದರು. ಇನ್ನು ಬ್ರಹ್ಮಗಂಟು ಸೀರಿಯಲ್‌ನಲ್ಲಿ ದೀಪಾಳ ವಿರುದ್ಧ ಗಂಡನ ಅತ್ತಿಗೆ ಸೌಂದರ್ಯ ಕೊಡುತ್ತಿದ್ದ ಟಾರ್ಚರ್, ಅದ್ಯಾವುದೂ ತಿಳಿಯದ ಗಂಡ ಚಿರುವನ್ನು ನೋಡಿ ಸಾಕಾಗಿ ಹೋಗಿತ್ತು. ಆದರೆ ಇವೆರಡೂ ಸೀರಿಯಲ್‌ಗಳಿಗೆ ಈಗ ಟ್ವಿಸ್ಟ್ ಸಿಕ್ಕಿದೆ.
ಭಾಗ್ಯ ಸಂಪೂರ್ಣ ಬದಲಾಗಿ ಬಿಟ್ಟಿದ್ದಾಳೆ. ಇದಾಗಲೇ ಅವಳು ಗಂಡನ ಪ್ರೀತಿಗಾಗಿ ಬದಲಾಗಿದ್ದಳು. ತನ್ನ ತನವನ್ನೇ ಪಣಕ್ಕಿಟ್ಟು, ಎಸ್‌ಎಸ್‌ಎಲ್‌ಸಿಪರೀಕ್ಷೆ ಬರೆದಳು, ಇಂಗ್ಲಿಷ್, ಡ್ರೈವಿಂಗ್ ಕಲಿತಳು. ಸ್ಟಾರ್ ಹೋಟೆಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಳು. ಆದರೆ ಅದ್ಯಾವುದೂ ಗಂಡನ ಒಲಿಸಿಕೊಳ್ಳಲು ಉಪಯೋಗ ಆಗಲಿಲ್ಲ, ಈಗ ನಗುಮುಖದಿಂದಲೇ, ಗಂಡನನ್ನು ಹೇಗೆ ಸರಿದಾರಿಗೆ ತರುವುದು ಎನ್ನುವುದು ಭಾಗ್ಯಳಿಗೆ ತಿಳಿದಿದೆ. ತಾಂಡವ್‌ನ ನಿಜವಾದ ಬಣ್ಣ ಎಲ್ಲರ ಎದುರೂ ಬಯಲಾಗಿರುವ ಕಾರಣ, ಅವನೂ ಕಮ್ ಕಿಮ್ ಎನ್ನುವಂತಿಲ್ಲ. ಭಾಗ್ಯಳ ವರ್ತನೆ ಸಂಪೂರ್ಣ ಬದಲಾಗಿದ್ದು, ಅದರ ಪ್ರೊಮೋ ಬಿಡುಗಡೆಯಾಗಿದೆ. ಅದೇ ರೀತಿ ಬ್ರಹ್ಮಗಂಟುವಿನಲ್ಲಿ ಸೌಂದರ್ಯಳಿಗೆ ಚಾಲೆಂಜ್ ಮಾಡಿ ದೀಪಾ ಗಂಡನನ್ನೂ ಬದಲಿಸುವ ಪಣ ತೊಟ್ಟಿದ್ದಾಳೆ. ಅವಳು ಆಡಿದ ಒಂದೊಂದು ಮಾತೂ ವೀಕ್ಷಕರಿಗೆ ನಾಟಿದೆ. ಭಲೇ ಭಲೇ ಎನ್ನುತ್ತಿದ್ದಾರೆ!
ಅನುಷಾ ಜೊತೆಗಿನ ಸಂಬಂಧ ಎಂಥದ್ದು? ಮದುವೆ ಮುರಿದು ಬಿದ್ದದ್ದು ಯಾಕೆ? ಬಿಗ್‌ಬಾಸ್ ಧರ್ಮ ಓಪನ್ ಮಾತು ಕೇಳಿ...