Katrina Vicky Wedding: ಕೋಡ್ ಹೇಳಿದ್ರೆ ಮಾತ್ರ ಮದುವೆಗೆ ಎಂಟ್ರಿ!

Dec 3, 2021, 4:01 PM IST

ಬಾಲಿವುಡ್ (Bollywood) ಸಿನಿರಂಗದಲ್ಲಿ ಗಣ್ಯರು ಮತ್ತು ಜನರ ಗಮನ ಸೆಳೆಯುತ್ತಿರುವುದು ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಅದ್ಧೂರಿ ಮದುವೆ. ಈ ಮದುವೆ ಕಾರ್ಯಕ್ರಮಕ್ಕೆ ಬರುತ್ತಿರುವ ಜನರಿಗೆ ಹಲವಾರು ಕಂಡಿಷನ್‌ಗಳಿದ್ದು, ಸೀಕ್ರೆಟ್ ಕೋಡ್ (Secret Code) ಕೊಟ್ಟಿದ್ದಾರೆ ಎನ್ನಲಾಗಿದೆ. ಮದುವೆಗೆ ಆಗಮಿಸುವ ಅತಿಥಿಗಳಿಗೆ ಮೊಬೈಲ್ ತರುವುದನ್ನು ಬ್ಯಾನ್ ಮಾಡಲಾಗಿದೆ. ರಾಜಸ್ಥಾನದಲ್ಲಿರುವ Sawai ಮೋಧ್‌ಪುರ್ ಹೊಟೇಲ್‌ನಲ್ಲಿ ಮದುವೆ ಏರ್ಪಾಟು ಮಾಡಲಾಗಿದೆ. 

Katrina Wedding: ಮಾಜಿ ಪ್ರೇಯಸಿ ಮದ್ವೆಗೆ ಸಲ್ಲು ಹೋಗೋಲ್ವಂತೆ!

ದೀಪಾವಳಿ (Diwali) ದಿನದಂದು ಕತ್ರಿನಾ ಮತ್ತು ವಿಕ್ಕಿ ಪ್ರೈವೇಟ್ ಆಗಿ ಎಂಗೇಜ್ ಆಗಿದ್ದರು ಎನ್ನಲಾಗಿದೆ. ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ. ಕತ್ರಿನಾ ಮತ್ತು ವಿಕ್ಕಿ ಮದುವೆ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರ ಬರುತ್ತಿದೆ. ಇಂದು ರಿವೀಲ್ ಆಗಿರುವ ಮಾಹಿತಿ ಪ್ರಕಾರ ಕತ್ರಿನಾ ಮದುವೆ ಆದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆ ಎನ್ನಲಾಗಿದೆ. ಆದರೆ ಮದುವೆ ದಿನಾಂಕ ಬಗ್ಗೆ, ಜನರ ಬಗ್ಗೆ ಯಾವ ಮಾಹಿತಿಯೂ ರಿವೀಲ್ ಮಾಡಿಲ್ಲ.


ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment