ಬೆಂಗಳೂರು: ಬನಶಂಕರಿ ದೇಗುಲ ಹುಂಡಿಗೆ ಒಂದೇ ತಿಂಗಳಲ್ಲಿ ಬರೋಬ್ಬರಿ 44 ಲಕ್ಷ ಸಂಗ್ರಹ..!

Published : May 07, 2024, 12:43 PM IST
ಬೆಂಗಳೂರು: ಬನಶಂಕರಿ ದೇಗುಲ ಹುಂಡಿಗೆ ಒಂದೇ ತಿಂಗಳಲ್ಲಿ  ಬರೋಬ್ಬರಿ 44 ಲಕ್ಷ ಸಂಗ್ರಹ..!

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ ಈ ಬಾರಿ ಒಂದು ತಿಂಗಳು ಎಂಟು ದಿನಗಳಲ್ಲೇ ದೇವಾಲಯದ 13 ಹುಂಡಿಗಳು ಭರ್ತಿಯಾಗಿವೆ.  

ಬೆಂಗಳೂರು(ಮೇ.07):  ನಗರದ ಬನಶಂಕರಿ ದೇವಾಲಯದಲ್ಲಿ ಸೋಮವಾರ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, ಏಪ್ರಿಲ್ ತಿಂಗಳಲ್ಲಿ 44.04 ಲಕ್ಷ ರು.ಗಳಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ. ಇತ್ತೀಚಿನ ದಿನಗಳಲ್ಲಿ ಭಕ್ತರ ಸಂಖ್ಯೆ ಯಲ್ಲಿ ಹೆಚ್ಚಳದಿಂದಾಗಿ ಈ ಬಾರಿ ಒಂದು ತಿಂಗಳು ಎಂಟು ದಿನಗಳಲ್ಲೇ ದೇವಾಲಯದ 13 ಹುಂಡಿಗಳು ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಹುಂಡಿಗಳನ್ನು ತೆರೆದು ಕಾಣಿಕೆ ಹಣ ಎಣಿಕೆ ಮಾಡಲಾಯಿತು.

ಇದೀಗ ಹುಂಡಿ ತೆರೆದು ಎಣಿಕೆ ಮಾಡಿದಾಗ ನೋಟುಗಳು 42,38,4,465 ರು. ಹಾಗೂ ನಾಣ್ಯ 2 44,04,840 2 0 . 1,66,375 ה. ಕಾಣಿಕೆ ಸಂಗ್ರಹವಾಗಿದೆ ಎಂದು ಬನಶಂಕರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ತಿಳಿಸಿದ್ದಾರೆ.

ಮಲೆ ಮಾದಪ್ಪನಿಗೆ 25 ದಿನದಲ್ಲಿ 3.13 ಕೋಟಿ ರೂ. ಕಾಣಿಕೆ ಕೊಟ್ಟ ಭಕ್ತರು; ಅಮೇರಿಕಾ, ನೇಪಾಳ, ಬಾಂಗ್ಲಾ ಕರೆನ್ಸಿ ಪತ್ತೆ

96 ಗ್ರಾಂ ಚಿನ್ನ ಸಂಗ್ರಹ : 

ಹುಂಡಿಗಳಿಂದ 500 ರೂ. ಮುಖಬೆಲೆಯ 16,41,500 ನೋಟುಗಳು, 200 ರು.ನ 1076 ನೋಟುಗಳು, 100 ರು.. 12,29,700 ಹಾಗೂ 50 ರು.ಗಳ 7775 ನೋಟುಗಳು, 20 ರೂ. ಮುಖಬೆಲೆ 21,439 ನೋಟುಗಳು ಸೇರಿ 10, 5, 2 ಹಾಗೂ 1 ರು. ನೋಟು ಹಾಗೂ ನಾಣ್ಯಗಳು. 

ವಿದೇಶಿ ಕರೆನ್ಸಿಗಳು: 

ಕೇವಲ ನೋಟು, ನಾಣ್ಯಗಳೇ ಸಂಗ್ರಹವಾಗಿವೆ. ಜತೆಗೆ, 96 ಗ್ರಾಂ 100 ಮಿಲಿ ಚಿನ್ನ ಹಾಗೂ 573 ಗ್ರಾಂ ಬೆಳ್ಳಿ ಕಾಣಿಕೆ ಸಂಗ್ರಹವಾಗಿದೆ. ಅಲ್ಲದೆ, ಈ ಬಾರಿ 5 ವಿಯೆಟ್ನಾಂ, ಮಲೇಷಿಯಾ, ಯುಎಸ್‌ಎ, ನೇಪಾಳ, ಭೂತಾನ್, ಥೈಲ್ಯಾಂಡ್ ಕರೆನ್ಸಿಗಳು ಕೂಡ ಸಂಗ್ರಹವಾಗಿವೆ. 

PREV
Read more Articles on
click me!

Recommended Stories

ಹೊಸಪೇಟೆಯಲ್ಲಿ ಎಟಿಎಂ ಕಾರ್ಡ್ ಬದಲಿಸಿ ಲಕ್ಷ ಲಕ್ಷ ಪಂಗನಾಮ, ಹಣ ವಿತ್‌ಡ್ರಾ ಮಾಡಲು ಅಪರಿಚಿತರಿಗೆ ಕಾರ್ಡ್ ಕೊಡುವ ಮುನ್ನ ಎಚ್ಚರ!
ಬೆಂಗಳೂರಿನ ಪೋಲಿ ಪಾಪಣ್ಣ ಇನ್ಸ್‌ಪೆಕ್ಟರ್, ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್