ತುಮಕೂರು ರೈತರಿಗೆ ಇಲ್ಲಿದೆ ಗುಡ್ ನ್ಯೂಸ್ !

By Kannadaprabha News  |  First Published May 7, 2024, 12:45 PM IST

ರಾಜ್ಯ ಸರ್ಕಾರ ಬರಗಾಲ ಪೀಡಿತ ಪ್ರದೇಶ ಘೋಷಣೆ ಹಿನ್ನಲೆ ತಾಲೂಕಿನ ಕ್ಯಾಮೇನಹಳ್ಳಿಯಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ ಎಂದು ಮಧುಗಿರಿ ಉಪವಿಭಾಗಾಧಿಕಾರಿ ಗುಟ್ಟೂರು ಶಿವಪ್ಪ ಹೇಳಿದರು.


  ಹೊಳವನಹಳ್ಳಿ :  ರಾಜ್ಯ ಸರ್ಕಾರ ಬರಗಾಲ ಪೀಡಿತ ಪ್ರದೇಶ ಘೋಷಣೆ ಹಿನ್ನಲೆ ತಾಲೂಕಿನ ಕ್ಯಾಮೇನಹಳ್ಳಿಯಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ ಎಂದು ಮಧುಗಿರಿ ಉಪವಿಭಾಗಾಧಿಕಾರಿ ಗುಟ್ಟೂರು ಶಿವಪ್ಪ ಹೇಳಿದರು.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಅವರಣದಲ್ಲಿ ಜಿಲ್ಲಾ ಆಡಳಿತ, ತಾಲೂಕು ಆಡಳಿತ ಕೊರಟಗೆರೆ ವತಿಯಿಂದವಿತರಣೆ ಮಾಡಿ ಮಾತನಾಡಿದರು. ಜಿಲ್ಲಾಧಿಕಾರಿಗಳ ಆದೇಶದಂತೆ ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣ, ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಅವರಣದಲ್ಲಿ ಬ್ಯಾಂಕ್ ತೆರೆಯಲಾಗಿದ್ದು, ತಾಲೂಕಿನ ಎಲ್ಲ ಹೋಬಳಿ ರೈತರು ತಮ್ಮ ಸಮೀಪದ ಮೇವು ಬ್ಯಾಂಕ್‌ಗೆ ಹೋಗಿ ಮೇವು ತೆಗೆದುಕೊಳ್ಳಬಹುದು. ಕೆ.ಜಿಗೆ 2 ರು. ದರ ನಿಗದಿಯಾಗಿದ್ದು, ಒಂದು ಗೆ ಆರು ಕೆ.ಜಿಯಂತೆ ಒಂದು ವಾರಕ್ಕೆ ಒಮ್ಮೆ ರೈತರು ಮೇವು ತೆಗೆದುಕೊಳ್ಳಬೇಕು ಎಂದು ಹೇಳಿದರು.

Latest Videos

undefined

ತುಮಕೂರು ಪಶುಪಾಲನ ಉಪನಿರ್ದೇಶಕ ಡಾ.ಜಿ.ಗಿರೀಶ್‌ಬಾಬು ಮಾತನಾಡಿ, ಬರಗಾಲದ ಹಿನ್ನಲೆ ಜಿಲ್ಲೆಯಲ್ಲಿ ರಾಸುಗಳಿಗೆ ಮೇವು ಕೊರತೆಯಾಗದಂತೆ ಈಗಾಗಲೇ ಮೇವು ಬೆಳೆಯಲು ಬಿತ್ತನೆ ಬೀಜವನ್ನು ಇಲಾಖೆಯ ಕಚೇರಿಯಲ್ಲಿ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 12 ಮೇವು ಬ್ಯಾಂಕ್ ತೆರೆಯಲಾಗಿದೆ. ಮೇವು ತೆಗೆದುಕೊಳ್ಳುವ ರೈತರು ನಮ್ಮ ಕಚೇರಿಯಲ್ಲಿ ಕೂಪನ್ ಕಾರ್ಡ್ ವಿತರಣೆ ಮಾಡಲಾಗುತ್ತಿದ್ದು, ಎಲ್ಲ ರೈತರಿಗೂ ಮೇವು ವಿತರಣೆ ಮಾಡಲಾಗುವುದು ಎಂದರು.

ತಹಸೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಮನುಷ್ಯನಿಗೆ ಆಹಾರ ಎಷ್ಟು ಮುಖ್ಯನೋ ಅದರಂತೆ ರಾಸುಗಳಿಗೆ ಮೇವು ಅಷ್ಟೇ ಮುಖ್ಯವಾಗುತ್ತದೆ. ಪ್ರತಿ ರೈತರಿಗೆ ಒಂದು ವಾರಕ್ಕೆ ಆಗುವಷ್ಟು ಮೇವುವನ್ನ ನೀಡಲಾಗುತ್ತಿದೆ. ತಾಲೂಕಿನ ಎಲ್ಲ ಹೋಬಳಿಯ ರೈತರು ಹತ್ತಿರದ ಮೇವು ಬ್ಯಾಂಕ್‌ಗಳಲ್ಲಿ ಮೇವು ಪಡೆಯಬಹುದು ಎಂದು ತಿಳಿಸಿದರು.

ಪಶು ಸಂಗೋಪನೆ ವೈದ್ಯ ದತ್ತಣ್ಣ, ಕಂದಾಯ ನಿರೀಕ್ಷಕ ಅಧಿಕಾರಿ ಜಯಪ್ರಕಾಶ್, ಪಿಡಿಒ ರವಿಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಭಾನುರಕಾಶ್, ಸಲ್ಮಾನ್, ಬಸವರಾಜು, ಜಯನಂದ್, ಸಣ್ಣರಂಗಪ್ಪ, ಮೂರ್ತಿ, ರಂಗಪ್ಪ, ಲೋಕೇಶ್, ರಘು ಸೇರಿದಂತೆ ಇತರರು ಇದ್ದರು.

click me!