ಇಡಿ ದಾಳಿಯಲ್ಲಿ ಸಿಕ್ಕ ಹಣ ಫಲಾನುಭವಿಗಳಿಗೆ ಮರಳಿಸಲು ಕಾನೂನು ತಜ್ಞರೊಂದಿಗೆ ಸಮಾಲೋಚನೆ : ಪಿಎಂ ಮೋದಿ

By Kannadaprabha NewsFirst Published May 7, 2024, 12:25 PM IST
Highlights

ಬಡವರಿಂದ ಭ್ರಷ್ಟಾಚಾರದ ರೂಪದಲ್ಲಿ ಲೂಟಿ ಮಾಡಿ ಸಂಗ್ರಹಿಸಿದ ಹಣವನ್ನು ಮರಳಿ ಬಡವರಿಗೆ ನೀಡುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಜಮಹೇಂದ್ರವರಂ (ಆಂಧ್ರ): ಬಡವರಿಂದ ಭ್ರಷ್ಟಾಚಾರದ ರೂಪದಲ್ಲಿ ಲೂಟಿ ಮಾಡಿ ಸಂಗ್ರಹಿಸಿದ ಹಣವನ್ನು ಮರಳಿ ಬಡವರಿಗೆ ನೀಡುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಜೆಪಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಇದುವರೆಗೆ ಜಾರಿ ನಿರ್ದೇಶನಾಲಯವೊಂದೇ 1.25 ಲಕ್ಷ ಕೋಟಿ ರು. ಭ್ರಷ್ಟರ ಹಣವನ್ನು ಜಪ್ತಿ ಮಾಡಿದೆ. ಇದಕ್ಕೆ ಇತರೆ ಕೇಂದ್ರಿಯ ತನಿಖಾ ಸಂಸ್ಥೆಗಳೂ ಜಪ್ತಿ ಮಾಡಿದ ಹಣ ಸೇರಿಸಿದರೆ ಪ್ರಮಾಣ ಇನ್ನೂ ಹೆಚ್ಚುತ್ತದೆ. ಹೀಗಾಗಿ ಯಾರಿಂದ ಈ ಹಣವನ್ನು ಲೂಟಿ ಮಾಡಲಾಗಿತ್ತೋ ಆ ಹಣವನ್ನು ಮರಳಿ ಅವರಿಗೆ ತಲುಪಿಸುವುದು ಹೇಗೆ ಎಂಬುದರ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಹೇಳಿದರು. ಇದೇ ವೇಳೆ, ಈಗಾಗಲೇ ಅರ್ಹ ಮಾಲೀಕರಿಗೆ 17000 ಕೋಟಿ ರು. ಹಣ ಮರಳಿಸಲಾಗಿದೆ. ಯಾವುದೇ ಬಡ ವ್ಯಕ್ತಿಯ ಹಕ್ಕುಗಳಿಗೆ ಧಕ್ಕೆಯಾಗಲು ಬಿಡುವುದಿಲ್ಲ. ಇದು ಮೋದಿ ಗ್ಯಾರಂಟಿ ಎಂದು ಪ್ರಧಾನಿ ಹೇಳಿದರು.

3 ತಾಸೊಳಗೆ ನಕಲಿ ವಿಡಿಯೋ ತೆಗೆದು ಹಾಕಿ: ಚು. ಆಯೋಗ ಸೂಚನೆ

ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ತಿರುಚಲಾದ ವಿಡಿಯೋ ಘಟನೆ ಹಿನ್ನೆಲೆ ಎಚ್ಚೆತ್ತ ಚುನಾವಣಾ ಆಯೋಗವು, ಯಾವುದೇ ರಾಜಕೀಯ ಪಕ್ಷಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ವಿಡಿಯೋ, ಫೋಟೊಗಳು ನಕಲಿ ಎಂದು ಗೊತ್ತಾದಲ್ಲಿ ಅದನ್ನು ಫೋಸ್ಟ್‌ ಮಾಡಿದ 3 ಗಂಟೆಯೊಳಗೆ ತೆಗೆದುಹಾಕಬೇಕು ಎಂದು ಸೂಚಿಸಿದೆ. ಈ ಬಗ್ಗೆ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿರುವ ಆಯೋಗವು ಬೇಕು ಅಂತಲೇ ನಕಲಿ ವಿಡಿಯೋ ಪೋಸ್ಟ್‌ ಮಾಡಿ ಇತರರಿಗೆ ಹಂಚಿದ್ದಲ್ಲಿ ಅಂತವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.

ಜಾರ್ಖಂಡ್‌ನ ಮನೆ ಕೆಲಸದ ಆಳಿನ ಬಳಿ 30 ಕೋಟಿ ರು.ನಗದು ಪತ್ತೆ..!

ರಾಹುಲ್‌ ವಿರುದ್ಧ ಕ್ರಮಕ್ಕೆ 180 ಶಿಕ್ಷಣ ತಜ್ಞರ ಆಗ್ರಹ

ನವದೆಹಲಿ: ಕೆಲವು ನಿರ್ದಿಷ್ಟ ಸಂಘಟನೆಗಳ ಜೊತೆ (ಆರೆಸ್ಸೆಸ್) ನಂಟು ಹೊಂದಿರುವ ವ್ಯಕ್ತಿಗಳನ್ನೇ ವಿಶ್ವವಿದ್ಯಾಲಯದಲ್ಲಿ ಮಹತ್ವದ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆಯನ್ನು ವಿವಿಧ ವಿವಿಗಳ ಉಪಕುಲಪತಿಗಳು, ಶಿಕ್ಷಣ ತಜ್ಞರು ಕಟುವಾಗಿ ವಿರೋಧಿಸಿದ್ದಾರೆ.

ಈ ಕುರಿತು ಬಹಿರಂಗ ಪತ್ರವೊಂದನ್ನು ಬರೆದಿರುವ 181 ಶಿಕ್ಷಣ ತಜ್ಞರು, ‘ವಿವಿಗಳಿಗೆ ಉಪಕುಲಪತಿಗಳ ನೇಮಕದ ವೇಳೆ ಕಠಿಣ ನಿಯಮ ಪಾಲಿಸಲಾಗುತ್ತದೆ ಮತ್ತು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಅಭ್ಯರ್ಥಿಯ ಶಿಕ್ಷಣದ ಗುಣಮಟ್ಟ, ಅವರ ಸಮಗ್ರತೆ, ಶೈಕ್ಷಣಿಕ ವಿದ್ವತ್‌ ಪರಿಶೀಲಿಸಲಾಗುತ್ತದೆ.’ ಎಂದು ರಾಹುಲ್‌ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇಂಥ ಕ್ರಮಗಳ ಪರಿಣಾಮವೇ ಇದು ದೇಶದ ವಿವಿಗಳು ಜಾಗತಿಕ ರ್‍ಯಾಂಕಿಂಗ್‌ನಲ್ಲಿ ಮೇಲಿನ ಸ್ಥಾನಕ್ಕೆ ಏರುತ್ತಿವೆ, ವಿವಿಗಳಲ್ಲಿ ಉತ್ತಮ ಸಂಶೋಧನೆ ನಡೆಯುತ್ತಿದೆ. ಆದರೂ ಇಂಥ ಹೇಳಿಕೆ ನೀಡಿರುವ ರಾಹುಲ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಚುನಾವಣೆ ಟೈಮ್‌ನಲ್ಲೇ ಅರವಿಂದ್‌ ಕೇಜ್ರಿವಾಲ್‌ ಅರೆಸ್ಟ್‌ ಮಾಡಿದ್ದೇಕೆ? ಇಡಿಗೆ ಪ್ರಶ್ನೆ ಮಾಡಿದ ಸುಪ್ರೀಂ ಕೋರ್ಟ್‌

ಪತ್ರಕ್ಕೆ ಜೆಎನ್‌ಯು ವಿಸಿ ಶಾಂತಿಶ್ರೀ ಪಂಡಿತ್‌, ದೆಹಲಿ ವಿವಿ ವಿಸಿ ವಿ.ಸಿ.ಯೋಗೇಶ್‌, ಎಐಸಿಟಿಇ ಅಧ್ಯಕ್ಷ ಟಿ.ಜಿ. ಸೀತಾರಾಂ ಸೇರಿ ಹಲವು ಸಹಿ ಹಾಕಿದ್ದಾರೆ.ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ‘ಹಿಂದುತ್ವ ಸಂಘಟನೆಯಾದ ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳನ್ನು ವಿವಿಗಳಲ್ಲಿ ಮಹತ್ವದ ಹುದ್ದೆಗೆ ನೇಮಕ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.

click me!