ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿರುವ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣ ಕುರಿತು ಹೆಚ್‌ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪರ ನಾನು ನಿಲ್ಲುತ್ತಿಲ್ಲ. ಆದರೆ ಈ ಪ್ರಕರಣದಲ್ಲಿ ಸರ್ಕಾರ ಸಂತ್ರಸ್ಥೆಯರಿಗೆ ರಕ್ಷಣೆ ನೀಡುವುದಕ್ಕಿಂತ ಪ್ರಚಾರ ಬಯಸಿದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಸರ್ಕಾರದ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ವಿವರ ಇಲ್ಲಿದೆ.
ಬೆಂಗಳೂರು(ಮೇ.07) ಲೋಕಸಭಾ ಚುನಾವಣೆ ನಡುವೆ ವೈರಲ್ ಆಗಿರುವ ಹಾಸನದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣ ಇದೀಗ ಹಲವು ತಿರುಗಳನ್ನು ಪಡೆದುಕೊಳ್ಳುತ್ತಿದೆ. ಮೇ.06ರಂದು ಬಿಜೆಪಿ ನಾಯಕ ದೇವರಾಜೇ ಗೌಡ ಸುದ್ದಿಗೋಷ್ಠಿ ನಡೆಸಿ ಹಲವು ಬಾಂಬ್ ಸಿಡಿಸಿದ ಬೆನ್ನಲ್ಲೇ ಇದೀಗ ಹೆಚ್‌ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಪೆನ್ ಡ್ರೈವ್ ಪ್ರಕರಣ ಕೋಟಿ ಕೋಟಿ ರೂಪಾಯಿಗೆ ನಡೆದಿರುವ ಡೀಲ್ ಆಗಿದೆ. ಇಲ್ಲಿ ಪ್ರಜ್ವಲ್ ರೇವಣ್ಣ ಪರ ವಕಾಲತ್ತು ವಹಿಸಸುತ್ತಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಇಲ್ಲಿ ಸರ್ಕಾರ ಸಂತ್ರಸ್ಥೆಯರಿಗೆ ರಕ್ಷಣೆ ನೀಡುವ ಬದಲು ವ್ಯವಸ್ಥಿತವಾಗಿ ವೀಡಿಯೋ ವೈರಲ್ ಮಾಡಿ ಪ್ರಚಾರ ಬಯಸುತ್ತಿದೆ ಎಂಂದು ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ಪೆನ್ ಡ್ರೈವ್ ಪ್ರಕರಣ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ಜೆಡಿಎಸ್‌ನ ಮೂವರು ಅಭ್ಯರ್ಥಿಗಳು ಸೋಲುತ್ತಾರೆ ಎಂದು ಖಚಿತವಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ಇಷ್ಟು ಧೈರ್ಯವಾಗಿ ಹೇಳಬೇಕಾದರೆ ಇಲ್ಲಿ ಯಾರ ಪಾತ್ರ ಇದೆ ಅನ್ನೋದು ಹೊರಬರಬೇಕಿದೆ ಎಂದು ಹೆಚ್‌ಡಿಕೆ ಪ್ರಶ್ನಿಸಿದ್ದಾರೆ. ಏಪ್ರಿಲ್ 25ರಂದು ಮಹಿಳಾ ಆಯೋಗದ ಮುಖ್ಯಸ್ಥೆ ನಾಗಲಕ್ಷ್ಮಿ ಚೌಧರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರಭಾವಿ ರಾಜಕಾರಣಿಗಳು ಇಂತರ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರದ ಪ್ರಕಾರ ಎಷ್ಟು ಜನ ರಾಜಕಾರಣಿಗಳು ಇದ್ದಾರೆ ಎಂದರ್ಥ? ವಿಶೇಷ ತನಿಖಾ ತಂಡ ರಚನೆ ಮಾಡಲು ಆಗ್ರಹಿಸಿದ್ದರು. ಪತ್ರದಲ್ಲಿ ಎಲ್ಲೂ ಕೂಡ ಪ್ರಜ್ವಲ್ ರೇವಣ್ಣ ಹೆಸರು ಪ್ರಸ್ತಾಪ ಮಾಡಿಲ್ಲ. ಆದರೆ ಸಿಎಂ ಸಿದ್ದರಾಯ್ಯ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಎಂದು ಟ್ವೀಟ್ ಮಾಡಿದ್ದಾರೆ. ದೂರು ಬಂದ ಅದೇ ದಿನ ರಾತ್ರಿ ಎಸ್‌ಐಟಿ ರಚನೆ ಮಾಡಿದ್ದಾರೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ: ವಿಡಿಯೋ ಕಳುಹಿಸಿ ಅಂತಿರಾ ಜೋಕೆ..ಇನ್ಮುಂದೆ ಇದು ಶಿಕ್ಷಾರ್ಹ ಅಪರಾಧ!
ಎಸ್‌ಐಟಿ ಅಂದರೆ ಸ್ಪೆಷಲ್ ಇನ್ವೇಸ್ಟಿಗೇಶನ್ ಟೀಂ ಅಂದುಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಚನ್ ಟೀಂ ಹಾಗೂ ಶಿವಕುಮಾರ್ ಇನ್ಚೆಷ್ಟಿಗೇಷನ್ ಟೀಂ ಅನ್ನೋದು ಅಮೇಲೆ ಗೊತ್ತಾಯಿತು ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಪರ ನಾನಿಲ್ಲ. ಪ್ರಜ್ವಲ್ ಅವರನ್ನು ವಹಿಸಿಕೊಳ್ಳಲಲ್ಲ. ತನಿಖೆ ಪಾರದರ್ಶಕವಾಗಿ ಆಗಲಿ ಅನ್ನೋದು ಆಗ್ರಹ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಗನ್ ತೋರಿಸಿ ಬೆದರಿಸಿ ಅತ್ಯಾಚಾರ ಅಂತ ಮತ್ತೊಂದು ದೂರು ಕೊಟ್ಟಿದ್ದಾರೆ. ಇದು ನಡೆದಿರಬಹುದು, ನಾನು ಇಲ್ಲ ಎಂದು ಹೇಳಲ್ಲ. ಆದರೆ ಮಾಧ್ಯಮಗಲಿಗೆ ಸೋರಿಕೆ ಆಗಿದ್ದು ಹೇಗೆ? ಸಂತ್ರಸ್ಥೆಯರಿಗೆ ರಕ್ಷಣೆ ಕೊಡುವುದುಕ್ಕಿಂತ ಹೆಚ್ಚಾಗಿ ಸರ್ಕಾರ ಇದರಲ್ಲಿ ಪ್ರಚಾರ ಬಯಸುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. 21 ಪೆನ್ ಡ್ರೈವ್ ಬಿಡುಗಡೆ ಆಗಿದೆ. 22 ನೇ ತಾರೀಖು ಚುನಾವಣೆ ಪ್ರಚಾರ ಸಭೆಯಲ್ಲಿ ಪ್ರಜ್ವಲ್ ಜೊತೆ ಆಕೆ ಭಾಗಿ ಆಗಿದ್ದಾಳೆ. ಹೆದರಿಸಿ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಿದಿದರೆ, ಆಕೆ ಪ್ರಚಾರಕ್ಕೆ ಹೇಗೆ ಬರುತ್ತಿದ್ದಳು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಪೆನ್‌ಡ್ರೈವ್ ಹಿನ್ನೆಲೆ ಏನೆಂದು ನಾವು ಬಿಚ್ಚಿಡಬೇಕಾ?: ಡಿ.ಕೆ.ಶಿವಕುಮಾರ್