Sep 15, 2022, 9:22 AM IST
ಪೊನ್ನಿಯ ಸೆಲ್ವನ್ ಟೀಸರ್, ಸ್ಟಾರ್ ಕಾಸ್ಟ್, ಮೇಕಿಂಗ್, ಕಂಟೆಂಟ್ ಮೂಲಕವೇ ಸಖತ್ ಸದ್ದು ಮಾಡ್ತಿರೋ ಸಿನಿಮಾ. ಚೋಳರ ಕಥೆಯನ್ನ ಎಳೆಎಳೆಯಾಗಿ ತೆರೆ ಮೇಲೆ ತರುವುದಕ್ಕೆ ನಿರ್ದೇಶಕ ಮಣಿರತ್ನಂ ಸಿದ್ದತೆ ಮಾಡಿಕೊಂಡಿದ್ದು, ಚಿತ್ರ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಇರುವ ಸಮಯದಲ್ಲಿ ಪೊನ್ನಿಯ ಸೆಲ್ವನ್ ಸೀರೆಗಳು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡ್ತಿವೆ. ಸಿನಿಮಾ ಅನ್ನೋದು ಪವರ್ ಫುಲ್ ಮಾಧ್ಯಮ. ಬೇರೆ ಬೇರೆ ರೀತಿಯಲ್ಲಿ ಪ್ರಭಾವ ಬೀರುತ್ತೆ. ಈಗ ಪೊನ್ನಿಯ ಸೆಲ್ವನ್ ಸಿನಿಮಾ ಸೀರೆಗಳ ರೂಪದಲ್ಲಿ ಹೆಣ್ಣು ಮಕ್ಕಳ ಮನಸ್ಸು ಮುಟ್ಟುವ ಜೊತೆಯಲ್ಲಿ ಮನೆ ಮನೆಗೂ ಗಲ್ಲಿ ಗಲ್ಲಿಗೂ ಸಿನಿಮಾ ಸೀರೆ ಮೂಲಕ ಪ್ರಚಾರ ಆಗಲಿದೆ. ಪೊನ್ನಿಯಿನ್ ಸೆಲ್ವನ್ ರೇಷ್ಮೆ ಸೀರೆಯ ಬಾರ್ಡರ್‌ನಲ್ಲಿ ತ್ರಿಶಾ-ಐಶ್ವರ್ಯ, ವಿಕ್ರಮ್, ಕಾರ್ತಿ, ಜಯಂ ರವಿ ಸೇರಿದಂತೆ ಪೊನ್ನಿಯ ಸೆಲ್ವನ್ ಚಿತ್ರತಂಡದ ಕೆಲವರ ಫೋಟೋವನ್ನು ಸೀರೆ ಮೇಲೆ ಚಿತ್ರಿಸಲಾಗಿದೆ. ಇದರ ಬೆಲೆ ರೂ. 2,100 ರೂಪಾಯಿಗಳಿವೆ ಹಾಗಾಗಿ ಅಭಿಮಾನಿಗಳು ಸೀರೆಯನ್ನ ಕೊಂಡು ತಮ್ಮ ಫೇವರೇಟ್ ಸ್ಟಾರ್ ಇರೋ ಸ್ಯಾರಿ ಉಟ್ಟಿಕೊಳ್ಳಬಹುದು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment