Sep 1, 2021, 3:00 PM IST
ಟಾಲಿವುಡ್ ಖ್ಯಾತ ನಟ ನಾಗಾರ್ಜುನ ಇತ್ತೀಚೆಗಷ್ಟೇ 62ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಟನಿಗೆ ಅಭಿಮಾನಿಗಳಿಂದ, ಚಿತ್ರರಂಗದ ಗಣ್ಯರಿಂದ ಶುಭಾಶಯಗಳು ಹರಿದು ಬಂದಿದೆ. ಈ ಸಂದರ್ಭ ಪತ್ನಿ ಅಮಲಾ ಅಕ್ಕಿನೇನಿ, ಅಖಿಲ್ ಹಾಗೂ ನಾಗಚೈತನ್ಯ ತಂದೆಯ ಜೊತೆಗೇ ಇಡೀ ದಿನ ಕಳೆದಿದ್ದಾರೆ.
ಪತಿಯಿಂದ ದೂರವಾಗ್ತಾರಾ ಶಿಲ್ಪಾ ? ಡಿವೋರ್ಸ್ ಚಿಂತನೆ ?
ಆದರೆ ಇದರಲ್ಲಿ ಸಮಂತಾ ಮಿಸ್ ಆಗಿದ್ದಾರೆ. ಸದ್ಯ ವೈರಲ್ ಆಗಿರೋ ಹುಟ್ಟಹಬ್ಬದ ಫೋಟೋಗಳಿಗೆ ಸಮಂತಾ ಎಲ್ಲಿ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಶೂಟಿಂಗ್ ಕಾರಣದಿಂದ ಸಮಂತಾ ವಿದೇಶದಲ್ಲಿದ್ದ ಕಾರಣ ಶೂಟಿಂಗ್ನಲ್ಲಿ ಭಾಗಿಯಾಗಿಲ್ಲ ಎನ್ನಲಾಗಿದೆ.