ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಆಟೋದಲ್ಲಿ ಕುಳಿತಲ್ಲೇ ಹಠಾತ್ ಸಾವಿಗೀಡಾಗಿದ್ದು, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಸಾವುಗಳ ಬಗ್ಗೆ ಕಳವಳ ವ್ಯಕ್ತವಾಗಿದೆ. ಜನ ಸಾಮಾನ್ಯರ ಸಾವಿಗೆ ಸರ್ಕಾರ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು (ಸೆ.24): ರಾಜ್ಯ ಸರ್ಕಾರದಿಂದ ಜನಸಾಮಾನ್ಯರ ಸಾವಿಗೆ ಕವಡೆ ಕಾಸಿನ ಕಿಮ್ಮತ್ತೂ ಸಿಗುತ್ತಿಲ್ಲ. ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಆಟೋದಲ್ಲಿ ಕುಳಿತುಕೊಂಡ ಚಾಲಕ ಕುಳಿತಲ್ಲಿಯೇ ಹಠಾತ್ ಸಾವಿಗೀಡಾಗಿರುವ ದುರ್ಘಟನೆ ಸಂಭವಿಸಿದೆ. ಇತ್ತೀಚೆಗೆ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ಹಠಾತ್ ಕುಸಿದು ಬಿದ್ದು ಸಾವಿಗೀಡಾಗಿದ್ದರು. ಇಂತಹ ಅನೇಕ ಘಟನೆಗಳು ನಡೆಯುತ್ತಿದ್ದರೂ, ಜನರ ಸಾವಿಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಸರ್ಕಾರ ನಿರ್ಲಕ್ಷ್ಯವಹಿಸಿದೆ.
ರಾಜ್ಯದಲ್ಲಿ ಕೋವಿಡ್ ನಂತರದ ಅವಧಿಯಲ್ಲಿ ಬೀದಿ ಬೀದಿಗಳಲ್ಲಿ, ಸಭೆ-ಸಮಾರಂಭಗಳಲ್ಲಿ, ಮದುವೆ ಮಂಟಪಗಳಲ್ಲಿ, ಶಾಲೆ-ಕಾಲೇಜುಗಳಲ್ಲಿ, ಆಟೋ-ಕಾರು-ಬಸ್ಸುಗಳಲ್ಲಿ, ಅಂಗಡಿ-ಮುಂಗಟ್ಟುಗಳಲ್ಲಿ, ವ್ಯಾಪಾರಿ ಸ್ಥಳಗಳಲ್ಲಿ ಜನರು ಹಠಾತ್ತನೇ ಕುಸಿತು ಸಾವನ್ನಪ್ಪುತ್ತಿರುವ ಘಟನೆಗಳು ತೀವ್ರವಾಗಿವೆ. ಆದರೂ, ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೇ ಕಿಂಚಿತ್ತೂ ಕವಡೆ ಕಾಸಿನ ಕಿಮ್ಮತ್ತನ್ನೂ ಜನ ಸಾಮಾನ್ಯರ ಸಾವಿಗೆ ನೀಡುತ್ತಿಲ್ಲ. ಜನ ಸಾಮಾನ್ಯರು ಬೀದಿ ಬೀದಿಯಲ್ಲಿ ಸಾವಿಗೀಡಾಗುತ್ತಿದ್ದರೂ, ರಾಜ್ಯ ಸರ್ಕಾರದ ಸಚಿವರು ರಾಜಕೀಯ ಮಾತನಾಡುತ್ತಾರೇ ವಿನಃ ಜನರ ಸಾವಿನ ಬಗ್ಗೆ ಎಲ್ಲಿಯೂ ತುಟಿ -ಪಿಟಿಕ್ ಎಂದಿಲ್ಲ.
Bengaluru Fridge Murder: ಮಹಾಲಕ್ಷ್ಮಿಯನ್ನು 30 ಪೀಸ್ ಮಾಡಿ ತಮ್ಮನಿಗೆ ಕರೆ ಮಾಡಿದ್ದ ಹಂತಕ..!
ಬೆಂಗಳೂರಿನ ಕಲಾಸಿಪಾಳ್ಯದ ಬಳಿ ಆಟೋದಲ್ಲಿ ಕುಳಿತಿರುವಾಗಲೇ ಚಾಲಕ ಮೃತಪಟ್ಟಿದ್ದಾನೆ. ರಾತ್ರಿ ಆಟೋ ಓಡಿಸಿ ಬಂದ ಚಾಲಕ ಒಂದು ಸ್ಥಳದಲ್ಲಿ ಆಟೋ ನಿಲ್ಲಿಸಿ ಅದರಲ್ಲಿಯೇ ಕುಳಿತಿದ್ದಾನೆ. ಬೆಳಗ್ಗೆ ಕಸ ಗುಡಿಸಲು ಬಂದಿದ್ದ ಪೌರ ಕಾರ್ಮಿಕರು, ಈ ವೇಳೆ ಆಟೋ ತೆಗೆಯುವಂತೆ ಹೇಳಿದ್ದಾರೆ. ಆದರೆ ಆಟೋ ಚಾಲಕ ಮಾತನಾಡುತ್ತಿರಲಿಲ್ಲ. ಮುಟ್ಟಿ ನೋಡಿದಾಗ ಸಾವನ್ನಪ್ಪಿರೋದು ಗೊತ್ತಾಗಿದೆ. ಸ್ಥಳಕ್ಕೆ ಕಲಾಸಿಪಾಳ್ಯ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ. ಹೃದಯಾಘಾತದಿಂದ ಚಾಲಕ ಸಾವನ್ನಪ್ಪಿರೊ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಚಾಲಕನ ಯಾರು, ಎಷ್ಟೊತ್ತು ಕಾರ್ಯ ನಿರ್ವಹಿಸಿದ್ದನು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಮಾಧ್ಯಮಗಳ ಮುಂದೆ ಲೈವ್‌ನಲ್ಲೇ ಹೃದಯಾಘಾತ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಕ್ಯಾಮೆರಾಗಳ ಮುಂದೆ ಮೈಕ್ ಹಿಡಿದು ಮಾತನಾಡುತ್ತಿದ್ದ ರವಿಚಂದ್ರನ್ ಅವರಿಗೆ ಒಮ್ಮೆ ಹೃದಯಾಘಾತ ಆಗಿದ್ದು, ಶಾಕ್ ಹೊಡೆದವರಂತೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಅವರಿಗೆ ಸಾವರಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಕೈಯಲ್ಲಿದ್ದ ಮೈಕ್ ಅನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಲೇ ತಾವು ಕುಳಿತ ಚೇರಿನಿಂದ ಮುಂಭಾಗಕ್ಕೆ ಕುಸಿದು ಬಿದ್ದಿದ್ದಾರೆ. ಅಲ್ಲಿದ್ದವರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಮೃತಪಟ್ಟಿದ್ದರು.
ಮಡಿಕೇರಿ ವ್ಯಾಪಾರಿ ಕುಳಿತಲ್ಲೇ ಪ್ರಾಣಬಿಟ್ಟ; ಒಂದು ಕ್ಷಣದಲ್ಲಿ ಜೀವ ಹೊತ್ತೊಯ್ದ ಜವರಾಯ
ಮೃತ ಸಿ.ಕೆ ರವಿಚಂದ್ರನ್ ಅವರು ಕೋಲಾರದ ಚಿಂತಾಮಣಿ ಮೂಲದವರಾಗಿದ್ದು, ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಜೊತೆ ಓಡನಾಟ ಹೊಂದಿದ್ದರು. ಜೊತೆಗೆ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಹ ಓಡಾನಾಟ ಇತ್ತು. ಇತ್ತಿಚ್ಚಿಗೆಷ್ಟೆ ಕಾಂಗ್ರೆಸ್ ಸೇರಿಕೊಂಡಿದ್ದ ರವಿಚಂದ್ರನ್, ಪ್ರಚಾರ ಸಮಿತಿ ಸದಸ್ಯರಾಗಿದ್ದರು. ಬೆಂಗಳೂರು ನಗರದ ಆರ್.ಆರ್. ನಗರದ ಚನ್ನಸಂದ್ರದಲ್ಲಿ ವಾಸವಾಗಿದ್ದರು. ಅಮ್ಮ ಕಾನ್ವೆಂಟ್ ಎಂಬ ಸ್ಕೂಲ್ ನಡೆಸುತ್ತಿದ್ದರು. ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಕೊಟ್ಟ ಹಿನ್ನಲೆಯಲ್ಲಿ ಇಂದು ಕುರುಬ ಸಂಘದಿಂದ ಸುದ್ದಿಗೋಷ್ಠಿ ಕರೆದಿದ್ದು, ಮಾತನಾಡುವಾಗಲೇ ಕುಸಿದುಬಿದ್ದು ದುರ್ಘಟನೆ ಸಂಭವಿಸಿದೆ.