ಜಮಖಂಡಿ ನಗರದ ರಸ್ತೆಯೊಂದರಲ್ಲಿ ಮೊಸಳೆಯ ಸಂಚಾರದ ವಿಡಿಯೋ ಭಾರೀ ವೈರಲ್ ಆಗಿದೆ. ಜಮಖಂಡಿಯಲ್ಲಿ ಕಳೆದ ರಾತ್ರಿ ಭಾರಿ ಮಳೆಯಾಗಿದೆ. ಮಳೆಯಿಂದ ಜಲಾವೃತಗೊಂಡ ರಸ್ತೆಯಲ್ಲಿ ಮೊಸಳೆ ಸಂಚಾರ ನಡೆಸಿದೆ.
ಬಾಗಲಕೋಟೆ(ಸೆ.24): ರಾತ್ರಿ ಸುರಿದ ಮಳೆಗೆ ಮೊಸಳೆಯೊಂದು ನಡುರಸ್ತೆಯಲ್ಲೇ ಸಂಚರಿಸಿದ ಘಟನೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಇಂದು(ಮಂಗಳವಾರ) ನಡೆದಿದೆ. ನಡುರಸ್ತೆಯಲ್ಲೇ ಮೊಸಳೆ ಬಂದಿದ್ದರಿಂದ ಜನರು ಭಯಭೀತರಾಗಿದ್ದಾರೆ.
ಜಮಖಂಡಿ ನಗರದ ರಸ್ತೆಯೊಂದರಲ್ಲಿ ಮೊಸಳೆಯ ಸಂಚಾರದ ವಿಡಿಯೋ ಭಾರೀ ವೈರಲ್ ಆಗಿದೆ. ಜಮಖಂಡಿಯಲ್ಲಿ ಕಳೆದ ರಾತ್ರಿ ಭಾರಿ ಮಳೆಯಾಗಿದೆ. ಮಳೆಯಿಂದ ಜಲಾವೃತಗೊಂಡ ರಸ್ತೆಯಲ್ಲಿ ಮೊಸಳೆ ಸಂಚಾರ ನಡೆಸಿದೆ.
undefined
ವಿಶ್ವದ ಅತೀ ಹಿರಿಯ ಮೊಸಳೆ ಹೆನ್ರಿ : 700 ಕೆಜಿ ತೂಗುವ ಈತನಿಗೆ 10 ಸಾವಿರ ಮಕ್ಕಳು, 6 ಜನ ಪತ್ನಿಯರು
ನಗರದ ಲಕ್ಕನ ಕೆರೆಯಲ್ಲಿರುವ ಮೊಸಳೆ ಹೊರ ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕಳೆದ ಹಲವು ತಿಂಗಳುಗಳಿಂದ ಲಕ್ಕನ ಕೆರೆಯಲ್ಲಿ ಮೊಸಳೆ ಇದೆ. ಮೊಸಳೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸಿದ್ದರೂ ಮೊಸಳೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ರಸ್ತೆಯಲ್ಲಿ ಮೊಸಳೆ ಸಂಚಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.