ಹಿಂದೆ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಗೊಂಬೆ ಮತ್ತು ಚಿನ್ನು ಪಾತ್ರದಲ್ಲಿ ನಟಿಸಿದ್ದ ನೇಹಾ ಗೌಡ ಮತ್ತು ಕವಿತಾ ಗೌಡ, ತಮ್ಮ ತಾಯ್ತನವನ್ನು ಎಂಜಾಯ್ ಮಾಡ್ತಿದ್ದಾರೆ. ಕವಿತಾ ಗೌಡ ಈಗಾಗಲೇ ಗಂಡುಮಗುವಿಗೆ ತಾಯಿಯಾಗಿದ್ರೆ, ನೇಹಾ ತುಂಬು ಗರ್ಭಿಣಿಯಾಗಿದ್ದಾರೆ. ಇದರ ನಡುವೆ ಲಚ್ಚಿ ಪಾತ್ರದಲ್ಲಿ ನಟಿಸಿದ್ದ ಇನ್ನೋರ್ವ ನಟಿ ತೀರ್ಥ ಯಾತ್ರೆ ಮಾಡ್ತಿದ್ದಾರೆ.
ಹೌದು, ಕವಿತಾ ಗೌಡ ಲಕ್ಷ್ಮೀ ಬಾರಮ್ಮ ಧಾರಾವಾಹಿಯಿಂದ ಹೊರ ನಡೆದ ಬಳಿಕ ಚಿನ್ನು ಪಾತ್ರಕ್ಕೆ ಜೀವ ತುಂಬಿದ ನಟಿ ರಶ್ಮಿ ಪ್ರಭಾಕರ್ (Rashmi Prabhakar) ಇದೀಗ ತಮ್ಮ ಪತಿ ಹಾಗೂ ಫ್ಯಾಮಿಲಿ ಜೊತೆ ವಾರಣಾಸಿ, ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ.
ವಾರಣಾಸಿಗೆ ಕುಟುಂಬ ಸಮೇತ ತೆರಳಿರುವ ರಶ್ಮಿ ಅಲ್ಲಿನ ಮೂಲೆ ಮೂಲೆಗೂ ಭೇಟಿ ನೀಡಿ, ಕಾಶಿಯ (Kashi) ಸೌಂದರ್ಯವನ್ನು, ಸಂಸ್ಕೃತಿಯನ್ನು, ಆಚರಣೆಯ ಬಗ್ಗೆ ತಿಳಿದುಕೊಂಡಿದ್ದಾರೆ. ಕಾಶಿಯ ಸುಂದರ ತಾಣಗಳ ಫೋಟೊಗಳನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲಿನ ಅನುಭವದ ಬಗ್ಗೆ ತಮ್ಮ ಇನ್’ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ರಶ್ಮಿ ಮೊದಲು ನಾನು ಕಾಶಿ ಅಂದ್ರೆ, ಕಾಶಿ ವಿಶ್ವನಾಥ, ಕಾಶಿ ಘಾಟ್ ಅಷ್ಟೇ ಅಂತ ತಿಳ್ಕೊಂಡಿದ್ದೆ, ಆದ್ರೆ ಅಲ್ಲಿ ತುಂಬಾನೆ ಇದೆ. ಕಾಶಿ ಅಂದ್ರೆ ಫುಲ್ ಆಫ್ ಕಲರ್ಸ್ ಎಂದು ಬರೆದುಕೊಂಡಿದ್ದಾರೆ.
ರಶ್ಮಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social Media) ವಾರಣಾಸಿಯ ಸುಂದರ ತಾಣಗಳು, ವಿವಿಧ ಬಗೆಯ ಆಹಾರಗಳು, ಅಲ್ಲಿನ ಸಿಹಿ ತಿನಿಸುಗಳು, ಘಾಟ್ಸ್, ವಿವಿಧ ದೇವಾಲಯಗಳು, ದೋಣಿ ವಿಹಾರ ಮಾಡಿ ಸಂಭ್ರಮಿಸಿದ್ದಾರೆ. ತಮ್ಮ ಸಂಭ್ರಮವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ, ತಮಿಳು ಮತ್ತು ತೆಲುಗು ಸೀರಿಯಲ್ ಗಳಲ್ಲಿ ಹೆಸರು ಮಾಡಿರುವ ನಟಿ ರಶ್ಮಿ ಪ್ರಭಾಕರ್, ಸದ್ಯಕ್ಕೆ ಎಲ್ಲದರಿಂದಲೂ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿ ಜೊತೆ ಎಂಜಾಯ್ ಮಾಡ್ತಿದ್ದಾರೆ. ರಶ್ಮಿ ಕೊನೆಯದಾಗಿ ತಮಿಳಿನ ಕನ್ನೈ ಕಲೈಮಾಲೆ ಸೀರಿಯಲ್ ನಲ್ಲಿ ನಟಿಸಿದ್ದರು. ಇನ್ನು ಮುಂದೆ ಕನ್ನಡ ಸೀರಿಯಲ್ ಗಳಲ್ಲಿ ಮಾತ್ರ ನಟಿಸೋದು ಅಂತಾನೂ ಹೇಳಿದ್ದರು ನಟಿ.
ಕನ್ನಡ ಸೀರಿಯಲ್ ನಲ್ಲಿ ಮಾತ್ರವಲ್ಲದೇ ಕನ್ನಡ ಸಿನಿಮಾಗಳಲ್ಲೂ ನಟಿಸಿರುವ ರಶ್ಮಿ ಪ್ರಭಾಕರ್ ಬಿಬಿ5 ಮತ್ತು ಮಹಾಕಾವ್ಯ ಎನ್ನುವ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೇ ಕನ್ನಡ ರಿಯಾಲಿಟಿ ಶೋಗಳಲ್ಲೂ ರಶ್ಮಿ ಮಿಂಚಿದ್ದರು. ಝೀ ಕನ್ನಡದ ರಿಯಾಲಿಟಿ ಶೋ ಸೂಪರ್ ಕ್ವೀನ್ ನಲ್ಲಿ ಭಾಗವಹಿಸಿ, ಸೂಪರ್ ಕ್ವೀನ್ (Super Queen) ಪಟ್ಟವನ್ನು ಸಹ ರಶ್ಮಿ ಮುಡಿಗೇರಿಸಿಕೊಂಡಿದ್ದರು.