ನಿದ್ರೆ ಮಾಡಿದ್ರೆ 9 ಲಕ್ಷ ಸಿಗುತ್ತೆ, ಸಂಪಾದಿಸಿದ ಬೆಂಗಳೂರಿನ ಮಹಿಳೆ, ಅಷ್ಟಕ್ಕೂ ಸ್ಲೀಪ್‌ ಇಂಟರ್ನ್ಶಿಪ್‌ ಅಂದ್ರೇನು?

By Roopa Hegde  |  First Published Sep 24, 2024, 11:42 AM IST

ನಿದ್ರೆ ಮಾಡಿದ್ರೂ ಹಣ ಸಿಗುತ್ತೆ ಎನ್ನುವ ವಿಚಾರ ಅನೇಕರಿಗೆ ತಿಳಿದಿಲ್ಲ. ಬೆಂಗಳೂರಿನ ಮಹಿಳೆ ಟೈಂ ಟೈಂಗೆ ನಿದ್ರೆ ಮಾಡಿ 9 ಲಕ್ಷ ಗಳಿಸಿದ್ದಾಳೆ. ನಿದ್ರೆ ಮಾಡಿ ಸ್ಪರ್ಧೆ ಗೆಲ್ಲೋದು ಸುಲಭವೇನಲ್ಲ ಎನ್ನುವ ಆಕೆ ಆರಾಮದಾಯಕ ನಿದ್ರೆಗೆ ಟಿಪ್ಸ್ ಕೂಡ ನೀಡಿದ್ದಾರೆ. ಎಲ್ಲಿ ಈ ನಿದ್ರೆ ಸ್ಪರ್ಧೆ ನಡೆಯುತ್ತೆ ಎಂಬ ಡಿಟೇಲ್ಸ್ ಇಲ್ಲಿದೆ. 
 


ನಿದ್ರೆ (sleep) ಮಾಡಿ 9 ಲಕ್ಷ ಸಂಪಾದನೆ ಮಾಡಿದ್ದೇನೆ ಅಂದ್ರೆ ಯಾರ್ ನಂಬ್ತಾರೆ ಹೇಳಿ? ಇದೆಲ್ಲ ಸೋಮಾರಿಗಳು ಹೇಳೋ ಕಥೆ ಅಂತ ನಿರ್ಲಕ್ಷ್ಯ ಮಾಡ್ತೇವೆ. ಆದ್ರೆ ಇದು ನೂರಕ್ಕೆ ನೂರು ಸತ್ಯ. ಬೆಂಗಳೂರಿನ ಮಹಿಳೆಯೊಬ್ಬರು ನಿದ್ರೆ ಮಾಡಿ 9 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾರೆ. ಸಾಯಿಶ್ವರಿ ಪಾಟೀಲ್ (Saiswari Patil) ಬೆಂಗಳೂರಿನವರು. ಅವರು ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿ ಕೆಲಸ ಮಾಡ್ತಿದ್ದಾರೆ. ಅವರು ನಿದ್ರೆ ಮಾಡಿಯೇ 9 ಲಕ್ಷ ಸಂಪಾದನೆ ಮಾಡಿದ್ದಾರೆ. ನಿದ್ರೆ ಮಾಡೋರಿಗೆ ಹಣ ನೀಡಿದ್ರೆ ಎಷ್ಟು ಚೆನ್ನಾಗಿತ್ತು ಎಂಬ ಅವರ ಕನಸು ಈಗ ನನಸಾಗಿದೆ. 

ಕೆಲ ದಿನಗಳ ಹಿಂದೆ ವೇಕ್ ಫಿಟ್ಸ್ ಸ್ಟಾರ್ಟ್ ಅಪ್ ( Wakefit startup) ನಡೆಸಿದ್ದ ಸ್ಲೀಪ್ ಇಂಟರ್ನ್ಶಿಪ್ (Sleep Internship)  ಮೂರನೇ ಸೀಸನ್ ನಡೆದಿದೆ. ಅದ್ರಲ್ಲಿ ಪಾಲೊಂಡಿದ್ದ ಸಾಯಿಶ್ವರಿ ಪಾಟೀಲ್, ಸ್ಲೀಪ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. 

Latest Videos

undefined

ಅಮೆಜಾನ್ನಲ್ಲಿ ಹೆಚ್ಚಾಗ್ತಿದೆ silent sacking, ಉದ್ಯೋಗಿಗಳನ್ನು ಓಡಿಸೋಕೆ ಈ ಟ್ರಿಕ್ ಬೆಸ್ಟ್

ಸ್ಲೀಪ್ ಇಂಟರ್ನ್ಶಿಪ್ ಅಂದ್ರೇನು? ಅದನ್ನು ಹೇಗೆ ಆಯೋಜನೆ ಮಾಡಲಾಗುತ್ತದೆ? : ಸ್ಲೀಪ್ ಇಂಟರ್ನ್ಶಿಪ್ ಬೆಂಗಳೂರಿನಲ್ಲೇ ನಡೆದಿದೆ. ಪ್ರತಿ ದಿನ ಸರಿಯಾಗಿ ನಿದ್ರೆ ಮಾಡದ ಜನರನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ. ಇಲ್ಲಿ ಸ್ಪರ್ಧಿಗಳಿಗೆ ಪ್ರತಿ ದಿನ 8 -9 ಗಂಟೆ ನಿದ್ರೆ ಮಾಡುವ ಟಾಸ್ಕ್ ನೀಡಲಾಗುತ್ತದೆ. ಸಾಯಿಶ್ವರಿ ಪಾಟೀಲ್ ಸೇರಿದಂತೆ 12 ಸ್ಪರ್ಧಿಗಳಿಗೆ ಮಲಗಲು ಉತ್ತಮ ಬೆಡ್ ನೀಡಲಾಗಿತ್ತು. ಸ್ಪರ್ಧಿಗಳ ನಿದ್ರೆಯನ್ನು ಟ್ರ್ಯಾಕ್ ಮಾಡಲು ಸ್ಲೀಪ್ ಟ್ರ್ಯಾಕರ್ ಹಾಕಲಾಗಿತ್ತು. 8 -9 ಗಂಟೆ ಹೇಗೆ ಒಳ್ಳೆ ನಿದ್ರೆ ಮಾಡ್ಬೇಕು ಎನ್ನುವ ಬಗ್ಗೆ ತಜ್ಞರಿಂದ ಸ್ಪರ್ಧಿಗಳಿಗೆ ತರಬೇತಿ ಕೂಡ ನೀಡಲಾಗಿತ್ತು. ಸ್ಪರ್ಧಿಗಳು ತಮ್ಮ ಸಮಸ್ಯೆಯನ್ನು ತಜ್ಞರ ಮುಂದೆ ಹೇಳಿದ್ದಲ್ಲದೆ, ಉತ್ತಮ ನಿದ್ರೆಯ ವಿಧಾನವನ್ನು ತಿಳಿದುಕೊಂಡ್ರು. ಸ್ಪರ್ಧಿಗಳಿಗೆ   ಹಗಲಿನಲ್ಲಿ 20 ನಿಮಿಷಗಳ ಪವರ್ ನ್ಯಾಪ್ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ.  

ಸ್ಲೀಪ್ ಇಂಟರ್ನ್‌ಶಿಪ್ ಆಯ್ಕೆ ಹೀಗೆ ನಡೆಯುತ್ತದೆ : ಸ್ಲೀಪ್ ಇಂಟರ್ನ್ ಶಿಪ್ ಸ್ಪರ್ಧಿಗಳನ್ನು ಕೆಲ ವಿಧಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. 

ಅರ್ಜಿ ಪರಿಶೀಲನೆ : ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಅದನ್ನು ಪರಿಶೀಲನೆ ನಡೆಸಲಾಗುತ್ತದೆ.  
ವಿಡಿಯೋ ರೆಸ್ಯೂಮ್ : ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ನಿದ್ರೆ ಬಗ್ಗೆ ತಮಗಿರುವ ಉತ್ಸಾಹದ ಬಗ್ಗೆ ವಿಡಿಯೋ ಮಾಡಿ ಅದನ್ನು ಕಳುಹಿಸಬೇಕು.
ಸಂದರ್ಶನ : ಅಭ್ಯರ್ಥಿಗಳಿಗೆ ತಮ್ಮ ನಿದ್ರೆಯನ್ನು ಸುಧಾರಿಸಲು ಎಷ್ಟು ಆಸಕ್ತಿ ಇದೆ ಎಂಬುದನ್ನು ಸಂದರ್ಶನದ ಮೂಲಕ ಪತ್ತೆ ಮಾಡಲಾಗುತ್ತದೆ. ಈ ಎಲ್ಲ ಪ್ರೊಸೆಸ್ ನಂತ್ರ ಅಭ್ಯರ್ಥಿಗಳ ಆಯ್ಕೆಯಾಗುತ್ತದೆ. 

ಮೂರು ಋತುಗಳಲ್ಲಿ ಸ್ಲೀಪ್ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ 10 ಲಕ್ಷಕ್ಕೂ ಹೆಚ್ಚು ಅರ್ಜಿ ಬಂದಿತ್ತು. 51 ಇಂಟರ್ನ್‌ಗಳಿಗೆ ಒಟ್ಟೂ 63 ಲಕ್ಷ ಸ್ಟೈಫಂಡ್ ನೀಡಲಾಗಿದೆ. ನಿದ್ರೆ ಮಾಡಿ ಹಣ ಸಂಪಾದನೆ ಮಾಡೋದು ಸುಲಭ ಎನ್ನಿಸಿದ್ರೂ, ಸ್ಪರ್ಧಿಗಳು, ನಿದ್ರೆಯ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿದ್ರೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ನಿದ್ರೆಯಲ್ಲೂ ಶಿಸ್ತು ಪಾಲಿಸುವುದು ಮುಖ್ಯ ಎನ್ನುತ್ತಾರೆ ಸಾಯಿಶ್ವರಿ. ಸರಿಯಾದ ಸಮಯಕ್ಕೆ ಮಲಗುವ ಮತ್ತು ಸರಿಯಾದ ಸಮಯಕ್ಕೆ ಏಳುವ ನಿಯಮ ರೂಢಿಸಿಕೊಳ್ಳಬೇಕು. ಇದ್ರಲ್ಲಿ ಪಾಲ್ಗೊಳ್ಳುವ ಜನರು ತಡರಾತ್ರಿಯವರೆಗೆ ಎಚ್ಚರವಾಗಿರುವಂತಿಲ್ಲ. ಮೊಬೈಲ್, ಸ್ಕ್ರೋಲಿಂಗ್ ನಲ್ಲಿ ಸಮಯ ಕಳೆಯುವಂತಿಲ್ಲ. ಈ ಅಭ್ಯಾಸವನ್ನು ತ್ಯಜಿಸೋದು ಕಷ್ಟವಾದ್ರೂ ಒಳ್ಳೆ ಪ್ರಯೋಜನ ನೀಡುತ್ತದೆ ಎಂದು ಸಾಯಿಶ್ವರಿ ಹೇಳಿದ್ದಾರೆ. 

ಬ್ಯಾಂಕ್ ಗ್ರಾಹಕರೇ ಎಚ್ಚರ... ಈ ಒಂದು ಕೆಲಸ ಮಾಡದಿದ್ದರೆ ಕ್ಲೋಸ್ ಆಗಲಿದೆ ನಿಮ್ಮ ಅಕೌಂಟ್

ಇದ್ರಲ್ಲಿ ಸ್ಪರ್ಧೆ ಇದ್ದ ಕಾರಣ ಸ್ವಲ್ಪ ಒತ್ತಡವುಂಟಾಗಿತ್ತು ಎನ್ನುವ ಸಾಯಿಶ್ವರಿ, ನಂತ್ರ ತಮ್ಮ ನಿದ್ರೆ ಸುಧಾರಿಸಿಕೊಳ್ಳಲು ಯೋಗ, ಸಂಗೀತ, ಮಲಗುವ ಒಂದು ಗಂಟೆ ಮೊದಲು ಸ್ನಾನ ಸೇರಿದಂತೆ ಕೆಲ ಟಿಪ್ಸ್ ಪಾಲನೆ ಮಾಡಿದ್ರಿಂದ ಯಶಸ್ವಿಯಾಗಿರೋದಾಗಿ ತಿಳಿಸಿದ್ದಾರೆ. 

click me!