ರಾಮ್ ಚರಣ್-ಉಪಾಸನ ಮಗುವಿಗೆ ದುಬಾರಿ ಗಿಫ್ಟ್ ಕೊಟ್ಟ ಅಲ್ಲು ಅರ್ಜುನ್: ಏನದು?

Aug 4, 2023, 4:18 PM IST

ಇತ್ತೀಚೆಗಷ್ಟೇ ನಟ ರಾಮ್ ಚರಣ್ ಹಾಗೂ ಉಪಾಸನಾ ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಮಹಾಲಕ್ಷ್ಮಿ ಮೆಗಾಸ್ಟಾರ್ ಮನೆಗೆ ಎಂಟ್ರಿಕೊಟ್ಟಿದ್ದು, ಇಡೀ ಫ್ಯಾಮಿಲಿಯಲ್ಲಿ ಸಂತಸ ಮನೆ ಮಾಡಿದೆ. ಅಲ್ಲು ಅರ್ಜುನ್ ದಂಪತಿ ರಾಮ್ ಚರಣ್ ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ. ಜೂನ್ 20 ರಂದು ಉಪಾಸನಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಿಹಿ ಸುದ್ದಿ ಕೇಳಿ ಅಭಿಮಾನಿಗಳು ಕೂಡ ಮೆಗಾ ಫ್ಯಾಮಿಲಿ ಜೊತೆ ಸಂಭ್ರಮಿಸಿದರು. ರಾಮ್ ಚರಣ್ ದಂಪತಿ ಮಗುವಿಗೆ ಕ್ಲೀಂಕಾರ ಎಂದು ನಾಮಕರಣ ಮಾಡಿದ್ದಾರೆ. ಕ್ಲೀಂಕಾರಗೆ ಬನ್ನಿ ದಂಪತಿ ನೇಮ್ ಪ್ಲೇಟ್ ಗಿಫ್ಟ್ ನೀಡಿದ್ದಾರಂತೆ. 

ಅಲ್ಲು ಅರ್ಜುನ್ ಈ ನಾಮ ಫಲಕದಲ್ಲಿರುವ ಅಕ್ಷರಗಳನ್ನು ಚಿನ್ನದಿಂದ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ನೇಮ್ ಪ್ಲೇಟ್ ಸುತ್ತಲೂ ವಜ್ರಗಳಿಂದ ಡಿಸೈನ್ ಮಾಡಿಸಿದ್ದಾರೆ ಎನ್ನುವ ಸುದ್ದಿ ಕೂಡ ವೈರಲ್ ಆಗಿದೆ. ಮತ್ತೊಂದು ವರದಿ ಪ್ರಕಾರ ಬಂಗಾರದ ಬಟ್ಟಲನ್ನು ಕೂಡ ಅಲ್ಲೂ ಅರ್ಜುನ್ ದಂಪತಿ ಗಿಫ್ಟ್ ನೀಡಿದ್ದಾರೆನ್ನಲಾಗಿದೆ. ಇನ್ನು ಇತ್ತೀಚೆಗಷ್ಟೆ ಎನ್ಟಿಆರ್  ರಾಮ್ಚರಣ್ ಪುತ್ರಿಗೆ ಕ್ಲ್ಯಾರಾ ಹೆಸರಿರೋ ಬಂಗಾರದ ಡಾಲರ್ನ್ನು ಗಿಫ್ಟ್ ಮಾಡಿದ್ದರು ಇದೀಗ ಅಲ್ಲೂ ಅರ್ಜುನ್ ದಂಪತಿ ನೇಮ್ ಪ್ಲೇಟ್ ಗಿಫ್ಟ್ ಮಾಡಿದ್ದಾರೆನ್ನಲಾಗಿದೆ.