ಫೇಸ್‌ಬುಕ್‌ ಮೆಸೆಂಜರ್‌, ಇನ್ಸ್‌ಟಾಗ್ರಾಮ್‌ ಡೌನ್‌? ಮೆಸೇಜ್‌, ಸ್ಟೋರಿ ನೋಡಲಾಗದೆ ಪರದಾಟ!

By Santosh NaikFirst Published Mar 20, 2024, 10:50 PM IST
Highlights


ವಿಶ್ವದ ಕೆಲವು ದೇಶಗಳಲ್ಲಿ ಫೇಸ್‌ಬುಕ್‌ ಮೆಸೆಂಜರ್‌ ಹಾಗೂ ಇನ್ಸ್‌ಟಾಗ್ರಾಮ್‌ ಡೌನ್‌ ಆಗಿರುವ ಬಗ್ಗೆ ಡೌನ್‌ ಡಿಟೆಕ್ಟರ್‌ ವರದಿ ಮಾಡಿದೆ. ಅಮೆರಿಕದಲ್ಲಿ ಇದರ ಪರಿಣಾಮ ಹೆಚ್ಚಾಗಿ ಕಂಡಿದೆ.
 

ನವದೆಹಲಿ (ಮಾ.20): ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ತಾಂತ್ರಿಕ ಸಮಸ್ಯೆ ಕಂಡಿದೆ.  ಯುರೋಪಿಯನ್‌ ಟೈಮ್‌ ಮುಂಜಾನೆ 10.45ರ ಸುಮಾರಿಗೆ ಡೌನ್‌ಡೆಕ್ಟರ್ ಅಪ್ಲಿಕೇಶನ್‌ಗಳು ಈ ಎರಡು ಅಪ್ಲಿಕೇಶನ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವ 1,000 ದೂರುಗಳನ್ನು ಸ್ವೀಕರಿಸಿದೆ. ಅನೇಕ ಯೂಸರ್‌ಗಳು ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ಯೂಸರ್‌ಗಳು ಎರಡೂ ಅಪ್ಲಿಕೇಶನ್‌ಗಳಲ್ಲಿ ಸ್ಟೋರಿಗಳನ್ನು ವೀಕ್ಷಿಸಲು ಮತ್ತು ಸರ್ಚ್‌ ಮಾಡುವಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಹಲವಾರು ಯೂಸರ್‌ಗಳು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಂಡಿದ್ದಾರೆ.

ಫೇಸ್‌ಬುಕ್‌ ಹಾಗೂ ಇನ್ಸ್‌ಟಾಗ್ರಾಮ್‌ಅನ್ನು ಬಳಸಲು ಯಾರಿಗಾದರೂ ಸಮಸ್ಯೆ ಆಗುತ್ತಿದೆಯೇ? ಅಥವಾ ನನಗೆ ಮಾತ್ರವೇ ಈ ಸಮಸ್ಯೆ ಆಗುತ್ತಿದೆಯೇ? ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಫೇಸ್‌ಬುಕ್‌ ಡೌನ್‌ ಆದ ಬಳಿಕ ಸುಖಾಸುಮ್ಮನೆ ಲಾಗ್‌ಔಟ್‌ ಆಗುವ ಸಮಸ್ಯೆ ನಿಮಗೆ ಕಾಡುತ್ತಿದೆಯೇ? ಫೇಸ್‌ಬುಕ್‌ ಬಹಳ ಸಮಸ್ಯೆ ನೀಡಿದೆ ಎಂದು ಇನ್ನೊಬ್ಬ ವ್ಯಕ್ತಿ ಬರೆದುಕೊಂಡಿದ್ದಾರೆ.

ಎಲ್ಲರೂ ಮತ್ತೊಮ್ಮೆ ನೆಮ್ಮದಿಯಾಗಿರಿ, ಫೇಸ್‌ಬುಕ್‌ ಮತ್ತೊಮ್ಮೆ ಡೌನ್‌ ಆಗಿದೆ ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ."ಬೇರೆ ಯಾರಾದರೂ ಫೇಸ್‌ಬುಕ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಯೇ? ನನಗೆ ಸ್ಟೋರಿಗಳನ್ನು ನೋಡಲು ಅಥವಾ ಏನನ್ನೂ ಹುಡುಕಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ. ಅದೇ ರೀತಿ, ಮತ್ತೊಬ್ಬ ಯೂಸರ್‌ "ಫೇಸ್‌ಬುಕ್ ಮತ್ತೆ ಡೌನ್ ಆಗಿದೆಯೇ? ನಾನು ಸ್ಟೋರಿಗಳನ್ನು ಪೋಸ್ಟ್ ಮಾಡಿದ್ದೇನೆ, ಆದರೆ ಅವು ಅಪ್ಲಿಕೇಶನ್ ಅಥವಾ ಮೆಸೆಂಜರ್‌ನಲ್ಲಿ ತೋರಿಸುತ್ತಿಲ್ಲ" ಎಂದು ಹೇಳಿದ್ದಾರೆ.

ಒಂದೇ ರೀತಿ ಪಾಸ್‌ವರ್ಡ್‌ ಬಳಸಿದರೆ ವಂಚನೆ ಫಿಕ್ಸ್‌; ಹುಟ್ಟಿದ ದಿನಾಂಕ, ಹೆಸರು ಬಳಸುವಾಗ ಎಚ್ಚರ!

ಇಲ್ಲಿಯವರೆಗೂ ಮೆಟಾ ಮಾತ್ರ ಅಪ್ಲಿಕೇಶನ್‌ ಡೌನ್‌ ಆಗಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಮಾರ್ಚ್ 5 ರಂದು, ತಾಂತ್ರಿಕ ಸಮಸ್ಯೆಗಳಿಂದ ಜಾಗತಿಕವಾಗಿ ಸಮಸ್ಯೆ ಉಂಟಾಗಿತ್ತು. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿತು. ಆ ಸಮಯದಲ್ಲಿ, ಮೆಟಾ ಸಂವಹನ ನಿರ್ದೇಶಕ ಆಂಡಿ ಸ್ಟೋನ್ ಅವರು ಸ್ಥಗಿತವನ್ನು ಒಪ್ಪಿಕೊಂಡರು ಮತ್ತು ಕಂಪನಿಯು ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಿದೆ ಎಂದು ತಿಳಿಸಿದ್ದರು.

ಫೇಸ್‌ಬುಕ್‌ ಒಳ್ಳೆಯದಲ್ಲ ಅಂತಾನೆ ಮಗ; ಸ್ನೇಹಿತ್‌ನನ್ನು ಆ ಪದಗಳಿಂದ ಟ್ರೋಲ್‌ ಮಾಡಿದ್ದಕ್ಕೆ ತಾಯಿ ಬೇಸರ

click me!