ಸೂರ್ಯ, ಚಂದ್ರರ ಮೊದಲ ಚಿತ್ರ ಸೆರೆಹಿಡಿದ ಪಾಕಿಸ್ತಾನದ 'ಮೂನ್ ಆರ್ಬಿಟರ್'!

By Kannadaprabha NewsFirst Published May 11, 2024, 10:31 AM IST
Highlights

ಚೀನಾದ ಚಂದ್ರ ಮಿಷನ್ ಭಾಗವಾಗಿ ಉಡಾವ ಣೆಯಾದ ಕೆಲವೇ ದಿನಗಳಲ್ಲಿ ಅದರ ಜತೆ ತೆರಳಿದ್ದ ಪಾಕಿಸ್ತಾನದ ಅರ್ಬಿಟರ್, ಚಂದ್ರನ ಹಾಗೂ ಸೂರ್ಯನ ಮೊದಲ ಚಿತ್ರವನ್ನು ಯಶಸ್ವಿಯಾಗಿ ಸೆರೆ ಹಿಡಿದಿದೆ. 

ಇಸ್ಲಾಮಾಬಾದ್ (ಮೇ.11): ಚೀನಾದ ಚಂದ್ರ ಮಿಷನ್ ಭಾಗವಾಗಿ ಉಡಾವ ಣೆಯಾದ ಕೆಲವೇ ದಿನಗಳಲ್ಲಿ ಅದರ ಜತೆ ತೆರಳಿದ್ದ ಪಾಕಿಸ್ತಾನದ ಅರ್ಬಿಟರ್, ಚಂದ್ರನ ಹಾಗೂ ಸೂರ್ಯನ ಮೊದಲ ಚಿತ್ರವನ್ನು ಯಶಸ್ವಿಯಾಗಿ ಸೆರೆ ಹಿಡಿದಿದೆ. ಚೀನಾದ ಚಾಂಗ್-ಇ-6 ಯೋಜನೆಯ ಭಾಗವಾಗಿ ಅದರ ಜತೆ ತೆರಳಿದ್ದ ಪಾಕಿಸ್ತಾನದ ಮಿನಿ ಉಪಗ್ರಹ 'ಐಕ್ಯೂಬ್-ಕರ್ಮ', ಈ ಫೋಟೋ ಕಳುಹಿಸಿದೆ. ಮೇ 3 ರಂದುಚೀನಾ ಮಾಡಲಾಗಿತ್ತು. ಉಡಾವಣೆ ಚೀನಾದ ರಾಷ್ಟ್ರೀಯ ಬಾಹ್ಯಾ ಕಾಶ ಸಂಸ್ಥೆ (ಸಿಎನ್‌ಎಸ್‌ಎ) ಈ ಮಿಷನ್ ಯಶಸ್ವಿಯಾದ ಚಿತ್ರವನ್ನು ಅನಾವರಣಗೊಳಿಸಿದೆ ಎಂದು ಪಾಕ್‌ನ ಬಾಹ್ಯಾಕಾಶ ಸಂಸ್ಥೆ ಸುಪಾರ್ಕೋ ಹೇಳಿದೆ. ಮೇ 8 ರಂದು ಪಾಕಿಸ್ತಾನದ ಕಾಲಮಾನದ ಪ್ರಕಾರ, ಮಧ್ಯಾಹ್ನ 1.14ಕ್ಕೆ ಪಾಕಿಸ್ತಾನದ ಕ್ಯೂಬ್‌ಸ್ಯಾಟ್ ಪೇಲೋಡ್, ಚಂದ್ರನ ಬಿಂದುವಿನ ಕಕ್ಷೆ ಯಲ್ಲಿ ಬೇರ್ಪಟ್ಟು ಚಿತ್ರಗಳನ್ನು ಕಳಿಸಿದೆ ಎಂದು ಅದು ಹೇಳಿಕೊಂಡಿದೆ.

ಚಂದ್ರನ ಮೇಲಿಳಿದ ಜಪಾನ್‌ ವ್ಯೋಮನೌಕೆ: ಭಾರತದ ಚಂದ್ರಯಾನ-3 ಯೋಜನೆಯ ಬಳಿಕ ಚಂದ್ರನ ಅಧ್ಯಯನಕ್ಕೆ ಜಪಾನ್‌ ಉಡಾವಣೆ ಮಾಡಿದ್ದ ಅತಿ ಚಿಕ್ಕ ಲ್ಯಾಂಡರ್‌ ಶುಕ್ರವಾರ ಚಂದ್ರನ ಮೇಲೆ ಲ್ಯಾಂಡ್‌ ಆಗಿದೆ ಎಂದು ಜಪಾನ್‌ ಹೇಳಿದೆ. ಈ ಮೂಲಕ ಚಂದ್ರನ ಮೇಲೆ ಲ್ಯಾಂಡರ್‌ ಇಳಿಸಿದ ಜಗತ್ತಿನ 5ನೇ ದೇಶ ಎಂಬ ಕೀರ್ತಿಗೆ ಜಪಾನ್‌ ಪಾತ್ರವಾಗಿದೆ. ಈ ಲ್ಯಾಂಡರನ್ನು ಇಳಿಸಲು ಜಪಾನ್‌ ಚಂದ್ರನ ಸಮಭಾಜಕ ವೃತ್ತದ ಬಳಿ ಕೇವಲ 100 ಮೀ. ಸ್ಥಳವನ್ನು ಮಾತ್ರ ನಿಗದಿ ಮಾಡಿತ್ತು. ಇದು ಪಿನ್‌ ಪಾಯಿಂಟ್‌ ಲ್ಯಾಂಡಿಂಗ್‌ ಆಗಿದ್ದು, ಈ ರೀತಿ ಲ್ಯಾಂಡಿಂಗ್‌ ಮಾಡಿದ ಮೊದಲ ದೇಶ ಎಂಬ ಖ್ಯಾತಿಯನ್ನು ಜಪಾನ್‌ ಪಡೆದುಕೊಂಡಿದೆ. 

Latest Videos

ಜಪಾನಿನ ಏರೋಸ್ಪೇಸ್‌ ಎಕ್ಸ್‌ಪ್ಲೋರೇಶನ್‌ ಏಜೆನ್ಸಿ (ಜಾಕ್ಸಾ) 2023ರ ಸೆ.7ರಂದು ತೆನೆಗಾಶೀಮಾ ಸ್ಪೇಸ್‌ ಸೆಂಟರ್‌ನಿಂದ ಚಂದ್ರನ ಅಧ್ಯಯನಕ್ಕೆ ರಾಕೆಟ್‌ ಹಾರಿಸಿತ್ತು. ಇದು ಅತ್ಯಂತ ಚಿಕ್ಕ ಲ್ಯಾಂಡರನ್ನು ಹೊಂದಿದ್ದು, ಇದಕ್ಕೆ ಸ್ಮಾರ್ಟ್‌ ಲ್ಯಾಂಡರ್‌ ಫಾರ್‌ ಇನ್‌ವೆಸ್ಟಿಗೇಟಿಂಗ್‌ ಮೂನ್‌ ಎಂದು ಹೆಸರಿಡಲಾಗಿದೆ. ಇದು ಚಂದ್ರನ ಮೇಲೆ ಲ್ಯಾಂಡ್‌ ಮಾಡಲು ಜಪಾನ್‌ ಕೈಗೊಳ್ಳುತ್ತಿರುವ 3ನೇ ಪ್ರಯತ್ನವಾಗಿದ್ದು, ಈ ಮೊದಲಿನ 2 ಯೋಜನೆಗಳಲ್ಲಿ ಜಾಕ್ಸಾ ವಿಫಲಗೊಂಡಿತ್ತು. ಈವರೆಗೆ ಅಮೆರಿಕ, ರಷ್ಯಾ, ಚೀನಾ ಮತ್ತು ಭಾರತ ದೇಶಗಳು ಮಾತ್ರ ಯಶಸ್ವಿಯಾಗಿ ಚಂದ್ರನ ಮೇಲೆ ತಮ್ಮ ಲ್ಯಾಂಡರ್‌ಗಳನ್ನು ಇಳಿಸಿವೆ.

ಚಂದ್ರನ ಮೇಲೆ ಏಲಿಯನ್‌ಗಳ ನೌಕೆ ಕಂಡ ನಾಸಾದ ಎಲ್‌ಆರ್‌ಓ ನೌಕೆ?

ಚಂದ್ರಯಾನ-3 ಉಪಕರಣವೀಗ ಲೊಕೇಶನ್‌ ಮಾರ್ಕರ್‌: ಭಾರತೀಯ ಬಾಹ್ಯಾಕಾಶ ಸಂಶೋಧನಾ ಹಾರಿಸಿದ್ದ ಚಂದ್ರಯಾನ ನೌಕೆ 3ರಲ್ಲಿದ್ದ ಉಪಕರಣವೊಂದು ಇದೀಗ ದಕ್ಷಿಣ ಧ್ರುವದಲ್ಲಿ ಸ್ಥಳ ಗುರುತು ಬಿಂದುವಾಗಿ (ಲೊಕೇಶನ್‌ ಮಾರ್ಕರ್‌) ಹೊರಹೊಮ್ಮಿದೆ. ಈ ಕುರಿತು ಮಾಹಿತಿ ನೀಡಿರುವ ಇಸ್ರೋ, ಕಳೆದ ಜು.14ರಂದು ಹಾರಿಸಲ್ಪಟ್ಟು, ಜು.23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿದ್ದ ನೌಕೆಯಲ್ಲಿನ ‘ದ ಲೇಸರ್‌ ರೆಟ್ರೋರಿಫ್ಲೆಕ್ಟರ್‌ ಅರ್ರೇ’ (ಎಲ್‌ಆರ್‌ಎ) ಉಪಕರಣವು ದಕ್ಷಿಣ ಧ್ರುವದಲ್ಲಿ ಹೊಸ ಸ್ಥಳ ಗುರುತು ಬಿಂದುವಾಗಿ ಸೇವೆ ನೀಡಲು ಆರಂಭಿಸಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾರಿಬಿಟ್ಟಿರುವ ಲೂನಾರ್‌ ರಿಕಾನ್ಸೆಸ್‌ ಆರ್ಬಿಟರ್‌ ನೌಕೆಯು, ಕಳೆದ ಡಿ.12ರಂದು ಎಲ್‌ಆರ್‌ಎನಿಂದ ಹೊರಹೊಮ್ಮಿದ ಸಿಗ್ನಲ್‌ಗಳನ್ನು ಯಶಸ್ವಿಯಾಗಿ ಸ್ವೀಕರಿಸಿದೆ’ ಎಂದು ಮಾಹಿತಿ ನೀಡಿದೆ.

click me!