
ಸ್ಯಾನ್ ಫ್ರಾನ್ಸಿಸ್ಕೋ(ಮೇ.11) ಮ್ಯಾಟ್ರಿಮೋನಿಯಲ್ಲಿ ಯಾರ ಜೊತೆ ಡೇಟ್ ಮಾಡಬೇಕು, ಯಾರು ನಮಗೆ ಸೂಕ್ತವಾಗುತ್ತಾರೆ ಅನ್ನೋದು ಹುಡುಕುವುದು ತಲೆನೋವಿನ ಕೆಲಸ. ಇದೀಗ ನಮ್ಮ ಅಭಿರುಚಿ, ಆಸಕ್ತಿಗೆ ತಕ್ಕಂತೆ ಸಂಗಾತಿಗಳ ಹುಡುಕಲು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಸಂಗಾತಿ ಹುಡುಕಲು AI ನೆರವು ಪಡೆದ ಹಲವು ಉದಾಹರಣೆಗಳಿವೆ. ಈ ಕುರಿತು ಬಂಬಲ್ ಸಂಸ್ಥಾಪಕಿ ಮಾತಿಗೆ ಭಾರತೀಯರು ನಮ್ಮಲ್ಲಿ ಶತಮಾನಗಳ ಹಿಂದಿನಿಂದಲೇ ಎಐ ಮ್ಯಾಚಿಂಗ್ ಚಾಲ್ತಿಯಲ್ಲಿದೆ ಎಂದಿದ್ದಾರೆ. ಇದೀಗ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಲು ನೆರವಾಗುತ್ತದೆ. ಆದರೆ ಈ ಪದ್ಧತಿ ಭಾರತದಲ್ಲಿ ತಾಯಂದಿರು ಮಾಡುತ್ತಾರೆ. ತಮ್ಮ ಮಗ ಅಥವಾ ಮಗಳಿಗೆ ಯಾರು ಸೂಕ್ತ ಎಂದು ಹಲವು ಮಟ್ಟದಲ್ಲಿ ಪರಿಷ್ಕರಣೆ, ಮ್ಯಾಚಿಂಗ್ ನಡೆಸಿ ಕೊನೆಯಲ್ಲಿ ಉಳಿದ ವರ ಅಥವಾ ವಧುವಿನ ವಿವರಗಳನ್ನು ಹೇಳಲಾಗುತ್ತದೆ. ಜಗತ್ತು ಸಂಗಾತಿ ಹುಡುಕಲು ಎಐ ವ್ಯವಸ್ಥೆ ನರೆವು ಈಗ ಪಡೆದುಕೊಳ್ಳುತ್ತಿದ್ದದರೆ, ಭಾರತ ಎಎಐ ವ್ಯವಸ್ಥೆಯನ್ನು ಅನಾಧಿಕಾಲದಿಂದಲೂ ಪಡೆಯುತ್ತಿದೆ ಎಂದಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಯೋಜಿಸಿದ ಬ್ಲೂಮ್‍ಬರ್ಗ್ ಗ್ಲೋಬಲ್ ಟೆಕ್ ಸಮ್ಮಿಟ್‌ನಲ್ಲಿ ಮಾತನಾಡಿದ ಡೇಟಿಂಗ್ ಆ್ಯಪ್ ಆಗಿರುವ ಬಂಬಲ್ ಸಂಸ್ಥಾಪಕಿ ವಿಟ್ನಿ ವೂಲ್ಫ್ ಹರ್ಡ್ ತಂತ್ರಜ್ಞಾನದ ಬಳಕೆ ಹಾಗೂ ಉಪಯೋಗ ಕುರಿತು ಮಾತನಾಡಿದ್ದಾರೆ. ಈ ವೇಳೆ ತಮ್ಮ ಡೇಟಿಂಗ್ ಆ್ಯಪ್‌ನಲ್ಲಿ ಎಐ ತಂತ್ರಜ್ಞಾನ ಬಳಸಲಾಗುತ್ತಿದೆ. ಸುಧಾರಿತ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಯುವತಿರು ಸುಲಭವಾಗಿ ಸಾವಿರಾರು ಮಂದಿಯಲ್ಲಿ ತಮ್ಮ ಅಭಿರುಚಿಗೆ ತಕ್ಕಂತೆ, ಸೂಕ್ತವಾಗಿರುವ ಸಂಗಾತಿಯನ್ನು ಹುಡುಕಬಹುದು. ಮುಂದಿನ ದಿನಗಳಲ್ಲಿ ಯಾರ ಜೊತೆಗೆ ಡೇಟ್ ಮಾಡಬೇಕು, ಯಾರ ಜೊತೆಗೆ ಮದುವೆ ಮಾಡಬೇಕು ಅನ್ನೋದನ್ನು ಎಐ ನಿರ್ಧರಿಸುತ್ತದೆ ಎಂದು ವಿಟ್ನಿ ವೂಲ್ಫ್ ಹರ್ಡ್ ಹೇಳಿದ್ದಾರೆ.
ಚಾಟ್‌ಜಿಪಿಟಿ ನೆರವಿನಿಂದ ಡೇಟಿಂಗ್ ಆ್ಯಪ್‌ನಲ್ಲಿ ಹುಡುಗಿ ಪಟಾಯಿಸಿ ಮದುವೆಯಾದ ಟೆಕ್ಕಿ!
ಎಐನಿಂದ ನಿಮಗೆ ಯಾರು ಸೂಕ್ತ ಅನ್ನೋದನ್ನು ಸುಲಭವಾಗಿ ನಿರ್ಧರಿಸಲಾಗುತ್ತದೆ. ನೀವು ಎಲ್ಲರ ಜೊತೆ ಮಾತನಾಡಬೇಕಿಲ್ಲ. ಎಲ್ಲರ ಪ್ರೊಫೈಲ್ ಪರೀಶಿಲಿಸಬೇಕಿಲ್ಲ. ಈ ಕೆಲಸವನ್ನು ಎಐ ಮಾಡಲಿದೆ ಎಂದಿದ್ದಾರೆ. ಆದರೆ ಬಂಬಲ್ ಸಂಸ್ಥಾಪಕಿ ಮಾತಿಗೆ ಭಾರತೀಯರು ಈ ಪದ್ಧತಿ ನಮ್ಮಲ್ಲಿ ಅನಾಧಿಕಾಲದಿಂದಲೂ ತಾಯಂದಿರು, ಕುಟುಂಬದಲ್ಲಿನ ಕೆಲ ಮಹಿಳೆಯರು ಮಾಡುತ್ತಾರೆ. ಇವರು ಸಾಕಷ್ಟು ಬಾರಿ ಫಿಲ್ಟರ್ ಮಾಡಿ ಕೊನೆಯಲ್ಲಿ ಒಂದೆರಡು ಆಯ್ಕೆಯನ್ನು ಹುಡುಗ ಅಥವಾ ಹುಡುಗಿಗೆ ನೀಡುತ್ತಾರೆ. ಶತ ಶತಮಾನಗಳ ಹಿಂದಿನಿಂದಲೇ ಭಾರತದಲ್ಲಿ ಎಎಐ ವ್ಯವಸ್ಥೆ ಜಾರಿಯಲ್ಲಿದೆ ಎಂದಿದ್ದಾರೆ.
ಡೇಟಿಂಗ್, ಮ್ಯಾರೇಜ್‌ನಲ್ಲಿ ಜಗತ್ತು ಈಗ ಎಐ ಬಳಕೆ ಮಾಡುತ್ತಿದೆ. ಆದರೆ ಭಾರತದಲ್ಲಿ ಎಎಂ(AM) ಚಾಲ್ತಿಯಲ್ಲಿದೆ. ಇದು ಶತ ಶತಮಾನಗಳ ಹಿಂದಿನ ಅದ್ಭುತ ವ್ಯವಸ್ಥೆ. ವಿಶ್ವ ಇದೀಗ ಎಐ ಬಳಸುತ್ತಿದ್ದರೆ ಭಾರತ AM( ಆರೇಂಜ್ ಮ್ಯಾರೇಜ್) ಹಿಂದಿನಿಂದಲೂ ಬಳಸುತ್ತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಪೊರ್ನ್ ಇಂಡಸ್ಟ್ರಿಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ತದ್ರೂಪಿ ಸೃಷ್ಟಿಸಿದ ಅಡಲ್ಟ್ ನಟಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.