ಭಾರತ ಸೇರಿದಂತೆ ವಿಶ್ವದಾದ್ಯಂತ ಎಲಾನ್‌ ಮಸ್ಕ್‌ ಮಾಲೀಕತ್ವದ ಎಕ್ಸ್‌ ಡೌನ್‌!

By Santosh Naik  |  First Published Dec 21, 2023, 12:35 PM IST


ಎಲಾನ್‌ ಮಸ್ಕ್‌ ಮಾಲೀಕತ್ವದ ಎಕ್ಸ್‌ ವಿಶ್ವದಾದ್ಯಂತ ಗುರುವಾರ ಡೌಮ್‌ ಆಗಿದೆ. ಬಳಕೆದಾರರಿಗೆ ಟ್ವೀಟ್‌ ಲೋಡ್‌ ಆಗಲು ಕೂಡ ಸಾಧ್ಯವಾಗಲಿಲ್ಲ.


ನವದೆಹಲಿ (ಡಿ.21): ಎಲಾನ್‌ ಮಸ್ಕ್‌ ಮಾಲೀಕತ್ವದ ಎಕ್ಸ್‌ (ಹಿಂದಿನ ಟ್ವಿಟರ್‌) ಗುರುವಾರ ಜಾಗತಿಕವಾಗಿ ದೊಡ್ಡ ಪ್ರಮಾಣದ ಸಮಸ್ಯೆ ಎದುರಿಸಿದೆ. ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳ ಬಳಕೆದಾರರು ತಮ್ಮ ಟ್ವಿಟರ್‌ ಪೇಜ್‌ ಲೋಡ್‌ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರೊಫೈಲ್‌, ಟ್ವೀಟ್‌ ಹಾಗೂ ಯಾವುದೇ ಸಂಗತಿಯನ್ನು ಟ್ವಿಟರ್‌ನಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದಿದ್ದಾರೆ. ಔಟ್ಟೇಜ್ ಮಾನಿಟರ್ ವೆಬ್‌ಸೈಟ್ ಡೌನ್‌ಡಿಟೆಕ್ಟರ್ ಪ್ರಕಾರ, ಶೇಕಡಾ 64 ಕ್ಕಿಂತ ಹೆಚ್ಚು ಜನರು ಅಪ್ಲಿಕೇಶನ್ ಬಳಸುವಾಗ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ, ವೆಬ್‌ಸೈಟ್ ಬಳಸುವಾಗ ಶೇಕಡಾ 29 ಮತ್ತು ಸರ್ವರ್ ಸಂಪರ್ಕದೊಂದಿಗೆ ಶೇಕಡಾ 7 ರಷ್ಟು ಜನರು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಭಾರತದಲ್ಲಿ, ದೆಹಲಿ, ಮುಂಬೈ, ಅಹಮದಾಬಾದ್, ಪಾಟ್ನಾ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಲ್ಲಿನ ಎಕ್ಸ್ ಬಳಕೆದಾರರು ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನೊಂದಿಗೆ ಪ್ರಮುಖವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಟ್ವಿಟರ್‌ನಲ್ಲಿಯೇ ಅನೇಕ ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. "ಬೇರೆ ಯಾರಿಗಾದರೂ ಟ್ವಿಟರ್‌ನಲ್ಲಿ ಸಮಸ್ಯೆ ಇದೆಯೇ? ಗ್ಲಿಚ್‌ಗಳು? ನಮ್ಮ ಟ್ವೀಟ್‌ಗಳು ಮತ್ತು ಇತರರ ಟ್ವೀಟ್‌ಗಳು ಕಾಣಿಸುತ್ತಿಲ್ಲವೇ? ನಂತರ ಓದಲು ನೂರಾರು ಲೇಖನಗಳನ್ನು ಬುಕ್‌ಮಾರ್ಕ್ ಮಾಡಿದಂತೆ ನಾನು ಕೂಡ ಹೊಂದಿದ್ದೇನೆ. ಎಲ್ಲಾ ನಾಪತ್ತೆಯಾಗಿದೆ' ಎಂದು ಬಳಕೆದಾರರು ಬರೆದಿದ್ದಾರೆ.

ನನ್ನ ಟ್ವಿಟರ್‌ ಖಾತೆ ಫ್ಲಿಪ್‌ ಆಗುತ್ತಿದೆ. ಮೊಬೈಲ್‌ನಲ್ಲೂ ಟ್ವಿಟರ್‌ ಲೋಡ್‌ ಮಾಡಲು ಸಾಧ್ಯವಾಗುತ್ತಿಲ್ಲ. ಯಾರಿಗಾದರೂ ಈ ರೀತಿಯ ಸಮಸ್ಯೆ ಕಾಣುತ್ತಿದೆಯೇ ಎಂದು ಇನ್ನೊಬ್ಬ ಬಳಕೆದಾರರು ಪೋಸ್ಟ್‌ ಮಾಡಿದ್ದಾರೆ.

Latest Videos

undefined

Throwback 2023 ಟ್ವಿಟರ್ ಲೋಗೋ ಬದಲಾವಣೆ, ಪಾಕಿಸ್ತಾನಕ್ಕೆ ಸಾಲ ಘೋಷಣೆ; ಅಚ್ಚರಿ ನೀಡಿದ ಜುಲೈ!

ನಾನು ಯಾರ ರಿಪ್ಲೈಗಳನ್ನು ನೋಡಲು ಕೂಡ ಸಾಧ್ಯವಾಗುತ್ತಿದೆ. ನಾನೇನಾದರೂ ಟ್ವಿಟರ್‌ ಜೈಲಿನಲ್ಲಿದ್ದೇನೆಯೇ? ಅಥವಾ ಎಲ್ಲರಿಗೂ ಇದೇ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿದ್ದೇವೆ. ಟ್ವಿಟರ್‌ ಡೌನ್‌ ಆಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ನಷ್ಟದಲ್ಲಿ ಎಕ್ಸ್‌: ಹಳೆಯ ಟ್ವಿಟ್ಟರ್‌ ಹ್ಯಾಂಡಲ್‌ಗಳನ್ನೇ 50,000 ಡಾಲರ್‌ಗೆ ಮಾರಾಟ ಮಾಡ್ತಿರೋ ಎಲಾನ್‌ ಮಸ್ಕ್!

click me!