ಇನ್ಮುಂದೆ ದೇಶದ 10 ನಗರಗಳ BSNL ಬಳಕೆದಾರರ ಲೈಫ್ ಫುಲ್ ಜಿಂಗಾಲಾಲಾ

By Mahmad Rafik  |  First Published Nov 23, 2024, 9:23 PM IST

BSNL ಭಾರತದ 10 ನಗರಗಳಲ್ಲಿ ತನ್ನ 4G ಮತ್ತು 5G ನೆಟ್‌ವರ್ಕ್‌ಗಳನ್ನು ವಿಸ್ತರಿಸಿದೆ. ವಾರಣಾಸಿ, ಪುಣೆ, ಚಂಡೀಗಢ ಸೇರಿದಂತೆ 10 ನಗರಗಳಲ್ಲಿ ಬಳಕೆದಾರರಿಗೆ ಉತ್ತಮ ಇಂಟರ್ನೆಟ್ ವೇಗ ಮತ್ತು ಹೊಸ ಸೌಲಭ್ಯಗಳು ಲಭ್ಯವಾಗಲಿವೆ.


ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆ ಡಿಜಿಟಲ್ ಇಂಡಿಯಾದತ್ತ ಮಹತ್ವದ ಹೆಜ್ಜೆಯನ್ನು ಒಂದೊಂದಾಗಿ ಇರಿಸುತ್ತಿರೋದು ಎಲ್ಲರ ಗಮನಕ್ಕೆ ಬಂದಿರುತ್ತದೆ. ಖಾಸಗಿ ಕಂಪನಿಗಳಿಗೆ ಟಕ್ಕರ್ ಕೊಡುತ್ತಾ ಹೊಸ ಪ್ಲಾನ್‌ಗಳನ್ನು ಘೋಷಣೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚು ಜನರಿಗೆ ಹೈ ಸ್ಪೀಡ್ ಇಂಟರ್‌ನೆಟ್‌ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್ ಕ್ಷಿಪ್ರವಾಗಿ ಕೆಲಸ ಮಾಡುತ್ತಿದೆ. ಬಿಎಸ್‌ಎನ್‌ಎಲ್ 4G ಮತ್ತು 5G ನೆಟ್‌ವರ್ಕ್ ಜೊತೆಯಲ್ಲಿ ಗ್ರಾಮೀಣ ಮತ್ತು ನಗರ ಭಾಗದಲ್ಲಿನ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ, ವೇಗದ ಇಂಟರ್‌ನೆಟ್ ಒದಗಿಸುವ ಗುರಿಯನ್ನು ಹೊಂದಿದೆ. 

ಕಳೆದ ಆರೇಳು ತಿಂಗಳಿನಿಂದ ಇಂಟರ್‌ನೆಟ್ ಜೊತೆಯಲ್ಲಿ ಕಾಲಿಂಗ್ ಗುಣಮಟ್ಟದಲ್ಲಿಯೂ ಸುಧಾರಣೆ ಕಂಡು ಬಂದಿದೆ ಎಂಬುವುದು ಬಿಎಸ್ಎನ್‌ಎಲ್ ಬಳಕೆದಾರರ ಮಾತು. 4G ಮತ್ತು 5G ನೆಟ್‌ವರ್ಕ್ ಟವರ್ ಅಳವಡಿಕೆಯೊಂದಿಗೆ ಆಕರ್ಷಕ ಪ್ಲಾನ್‌ಗಳನ್ನು ಲಾಂಚ್ ಮಾಡುತ್ತಿದೆ. ಈ ಪ್ಲಾನ್‌ನಲ್ಲಿ ಅನ್‌ಲಿಮಟೆಡ್ ಡೇಟಾ ಪ್ಯಾಕ್‌ನಲ್ಲಿ ದಿನದ ಲಿಮಿಟ್ ಮುಕ್ತಾಯವಾದ್ರೂ ಉಚಿತ ಇಂಟರ್‌ನೆಟ್ ಸೌಲಭ್ಯವನ್ನು ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ನೀಡುತ್ತಿದೆ.

Latest Videos

undefined

ಕೆಲವು ಪ್ಲಾನ್‌ಗಳಲ್ಲಿ 5G ಆಕ್ಸೆಸ್ ಸಹ ಒಳಗೊಂಡಿದೆ.  5G ಸರ್ವಿಸ್ ನೀಡುವದರ ಜೊತೆ ಹೊಸ ಬಳಕೆದಾರರನ್ನು ಬಿಎಸ್ಎನ್ಎಲ್ ಆಕರ್ಷಿಸುತ್ತಿದೆ. ಲಕ್ಷ ಲಕ್ಷ  ಬಳಕೆದಾರರನ್ನು ತನ್ನತ್ತ ಸೆಳೆಯುವಲ್ಲಿ ಬಿಎಸ್‌ಎನ್‌ಎಲ್ ಕಾರ್ಯೋನ್ಮುಖವಾಗಿ ಕೆಲಸ ಮಾಡುತ್ತಿದೆ. ಬೆಲೆ ಏರಿಕೆಯಿಂದ ಪ್ರತಿ ತಿಂಗಳು ಖಾಸಗಿ ಕಂಪನಿಗಳಾದ ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಕಳೆದುಕೊಳ್ಳುತ್ತಿರುವ ಬಳಕೆದಾರರು ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ. ಈ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳಿಗೆ ದೊಡ್ಡಮಟ್ಟದ ಸ್ಪರ್ಧೆಯನ್ನು ನೀಡುತ್ತಿದೆ.

ಇದನ್ನೂ ಓದಿ: 1 ಜನವರಿ 2025ರಿಂದ ಟೆಲಿಕಾಂ ನಿಯಮಗಳಲ್ಲಿ ದೊಡ್ಡ ಬದಲಾವಣೆ; Jio, Airtel, Voda ಮತ್ತು BSNL ಗ್ರಾಹಕರ ಪರಿಣಾಮ?

BSNLನ ಈ ವಿಸ್ತರಣೆಯು ಭಾರತದಲ್ಲಿ ಟೆಲಿಕಾಂ ವಲಯವನ್ನು ಬಲಪಡಿಸೋದರ ಜೊತೆಗೆ ತನ್ನ ವ್ಯಾಪ್ತಿಯನ್ನು ಸಹ ವಿಸ್ತರಿಸಿಕೊಳ್ಳುತ್ತದೆ. ದೇಶಾದ್ಯಂತ ಇಂಟರ್‌ನೆಟ್ ಕ್ಷೇತ್ರವೂ ಸಹ ಬಿಎಸ್‌ಎನ್ಎಲ್ ನಿಂದ ಕ್ಷಿಪ್ರ ವೇಗದಿಂದ ಬೆಳವಣಿಗೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೀಗ ಬಿಎಸ್‌ಎನ್‌ಎಲ್ 10 ನಗರದ ಬಳಕೆದಾರರಿಗೆ ಗುಡ್‌ನ್ಯೂಸ್ ನೀಡಿದೆ. 10 ನಗರಗಳಲ್ಲಿ BSNL ತನ್ನ 4G ಮತ್ತು 5G ನೆಟ್‌ವರ್ಕ್‌ನ್ನು ವಿಸ್ತರಿಸಿದೆ.

10 ನಗರಗಳ ಹೆಸರು: ವಾರಣಾಸಿ, ಪುಣೆ, ಚಂಡೀಗಢ, ಸೂರತ್, ಜೈಪುರ, ನಾಗ್ಪುರ, ಪಾಟ್ನಾ, ಭೋಪಾಲ್, ಇಂದೋರ್ ಮತ್ತು ವಿಶಾಖಪಟ್ಟಣಂ

ಈ 10 ನಗರಗಳಲ್ಲಿನ BSNL ಬಳಕೆದಾರರು ಈಗ ಉತ್ತಮ ಇಂಟರ್ನೆಟ್ ವೇಗ ಮತ್ತು ಹೊಸ ಸೌಲಭ್ಯಗಳನ್ನು ಪಡೆಯುತ್ತಾರೆ. ಇದು ಆನ್‌ಲೈನ್ ಸಂಪರ್ಕದ ಅನುಭವವನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ವಿವೋದಿಂದ ಹೊಸ 5G ಸ್ಮಾರ್ಟ್‌ಫೋನ್; 128GB ಸ್ಫೋರೇಜ್ ಜೊತೆ ಸಿಗುತ್ತೆ DSLR ಗುಣಮಟ್ಟದ ಕ್ಯಾಮೆರಾ

click me!