1 ಜನವರಿ 2025ರಿಂದ ಟೆಲಿಕಾಂ ನಿಯಮಗಳಲ್ಲಿ ದೊಡ್ಡ ಬದಲಾವಣೆ; Jio, Airtel, Voda ಮತ್ತು BSNL ಗ್ರಾಹಕರ ಪರಿಣಾಮ?

By Mahmad Rafik  |  First Published Nov 23, 2024, 5:13 PM IST

ಜನವರಿ 1, 2025 ರಿಂದ ಟೆಲಿಕಾಂ ಕಂಪನಿಗಳಿಗೆ ಹೊಸ 'ರೈಟ್ ಆಫ್ ವೇ' ನಿಯಮ ಜಾರಿಗೆ ಬರಲಿದೆ. ಈ ನಿಯಮದ ಪ್ರಕಾರ, ಆಪ್ಟಿಕಲ್ ಫೈಬರ್ ಲೈನ್ ಮತ್ತು ಮೊಬೈಲ್ ಟವರ್ ಅಳವಡಿಕೆಗೆ ಆದ್ಯತೆ ನೀಡಬೇಕು ಮತ್ತು ಸೇವೆಯ ಗುಣಮಟ್ಟ ಸುಧಾರಿಸಬೇಕು.


ನವದೆಹಲಿ: 1ನೇ ಜನವರಿ 2025ರಿಂದ ಟೆಲಿಕಾಂ ಕಂಪನಿಗಳ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಆಗಲಿವೆ. ಕೆಲವು ದಿನಗಳ ಹಿಂದೆ ದೂರ ಸಂಚಾರ ವಿಭಾಗ ಕೆಲವು ಹೊಸ ನಿಯಮಗಳನ್ನು ತಂದಿತ್ತು. ಈ ನಿಯಮಗಳಲ್ಲಿ ಕೆಲವು ಈ  ವರ್ಷ, ಒಂದಿಷ್ಟು ಮುಂದಿನ ವರ್ಷದ ಮೊದಲ ದಿನದಿಂದಲೇ ಕಾರ್ಯರೂಪಕ್ಕೆ ಬರಲಿದ್ದು, ಸರ್ಕಾರಿ ಕಂಪನಿ ಬಿಎಸ್‌ಎನ್‌ಎಲ್ ಸೇರಿದಂತೆ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ಪಾಲನೆ ಮಾಡಬೇಕು. 

ರೈಟ್ ಆಫ್ ವೇ (RoW) ಎಂಬ ನಿಯಮ 1 ಜನರಿ 2025ರಿಂದಲೇ ಜಾರಿಗೆ ಬರಲಿದೆ. ಈ ನಿಯಮವನ್ನು ಸೆಪ್ಟೆಂಬರ್‌ನಲ್ಲಿಯ ಟೆಲಿಕಾ ಆಕ್ಟ್‌ನಲ್ಲಿಯೇ ತಂದಿತ್ತು. ಆದರೆ ಈ  ನಿಯಮ  ಜನವರಿಯಿಂದ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಎಲ್ಲಾ ಟೆಲಿಕಾಂ ಕಂಪನಿಗಳು ಕಡ್ಡಾಯವಾಗಿ  ರೈಟ್ ಆಫ್ ವೇ  ನಿಯಮವನ್ನು ಪಾಲಿಸಬೇಕು ಎಂದು  ಟ್ರಾಯ್ ಖಡಕ್ ಆಗಿ ಹೇಳಿದೆ.

Tap to resize

Latest Videos

undefined

ಏನಿದು ರೈಟ್ ಆಫ್ ವೇ?
ಹೊಸ ನಿಯಮದ ಪ್ರಕಾರ, ಎಲ್ಲಾ ಟೆಲಿಕಾಂ ಕಂಪನಿಗಳು ಆಫ್ಟಿಕಲ್ ಫೈಬರ್ ಲೈನ್ ಮತ್ತು ಹೊಸ ಮೊಬೈಲ್ ಟವನ್ ಅಳಡಿಕಗೆ ಆದ್ಯತೆ ನೀಡಬೇಕು. ರೈಟ್ ಆಫ್ ವೇ ನಿಯಮ  ಜಾರಿಗೆ ಬರೋದಕ್ಕೂ ಮುನ್ನ ಕಂಪನಿಗಳು  ತಮ್ಮ ಎಲ್ಲಾ ಸೇವೆಗಳ  ಗುಣಮಟ್ಟತೆಯನ್ನು ಸುಧಾರಿಸಿಕೊಳ್ಳಬೇಕು. Jio, Airtel, Voda, BSNL ನಂತಹ ಟೆಲಿಕಾಂ ಕಂಪನಿಗಳು ಹೊಸ ಮೊಬೈಲ್ ಟವರ್‌ಗಳನ್ನು ಎಲ್ಲಿ ಸ್ಥಾಪಿಸಬಹುದು ಎಂಬುದನ್ನು ಹೊಸ ನಿಯಮವು ಹೇಳುತ್ತದೆ. ಈ  ನಿಯಮದಿಂದ ಟೆಲಿಕಾಂ ಕಂಪನಿಗಳ ನಡುವಿನ ಟವರ್ ಅಳವಡಿಕೆ ಸಂಬಂಧಿಸಿದ ಗಲಾಟೆಯನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ವಿವೋದಿಂದ ಬರ್ತಿದೆ ಮಿನಿ 5G ಸ್ಮಾರ್ಟ್‌ಫೋನ್; 250MP ಕ್ಯಾಮೆರಾ, 6000mAh ಬ್ಯಾಟರಿ

ಈ ಮೊದಲು ಮೊಬೈಲ್ ಟವರ್‌ಗಳನ್ನು ಅಳವಡಿಸಲು ಕಂಪನಿಗಳು ಹಲವೆಡೆ ಅನುಮತಿ ಪಡೆಯಬೇಕಿತ್ತು, ಆದರೆ ಈಗ ರೈಟ್ ಆಫ್ ವೇ ನಿಯಮದಿಂದ ಒಂದೇ ಸ್ಥಳದಿಂದ ಅನುಮತಿ ಪಡೆಯಬೇಕಿದೆ. ಸಾರ್ವಜನಿಕರು ಮತ್ತು ಕಂಪನಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿಯಮಗಳನ್ನು ಮಾಡಲಾಗಿದೆ ಎಂದು ಟ್ರಾಯ್ ಹೇಳಿದೆ.

ಹೊಸ RoW ನಿಯಮವು ಪಾರದರ್ಶಕತೆ ಮತ್ತು ದಕ್ಷತೆಯನ್ನು ಒದಗಿಸಲು ಡಿಜಿಟಲ್ ದಾಖಲೆಗಳನ್ನು ನಿರ್ವಹಿಸುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಕೆಲವು ದಿನಗಳ ಹಿಂದೆ, ಟೆಲಿಕಾಂ ಆಪರೇಟರ್‌ಗಳು ರೋ ನಿಯಮಗಳನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಈ ನಿಯಮದಿಂದ ಪಾರದರ್ಶಕತೆ ಬರಲಿದ್ದು, ದಕ್ಷತೆಯೂ ಸುಧಾರಿಸಲಿದೆ. ಈ ದಿನಗಳಲ್ಲಿ ರಿಲಯನ್ಸ್ ಜಿಯೋ ಮತ್ತು ಸ್ಟಾರ್‌ಲಿಂಕ್ ಚರ್ಚೆಯಲ್ಲಿದೆ. ಸ್ಪೆಕ್ಟ್ರಂ ಹಂಚಿಕೆಗೆ ಹರಾಜು ಆಗಬೇಕು ಎಂದು ಜಿಯೋ ಮತ್ತು ಏರ್‌ಟೆಲ್ ಹೇಳುತ್ತಿವೆ. ಆದರೆ ಸ್ಪೆಕ್ಟ್ರಂ ಹಂಚಿಕೆಗೆ ಯಾವುದೇ ಹರಾಜು ಇಲ್ಲ ಎಂದು ಸರ್ಕಾರ ಹೇಳುತ್ತಿದೆ.

ಇದನ್ನೂ ಓದಿTATA-BSNL ಜೊತೆಯಾಗಿ ಲಾಂಚ್ ಮಾಡ್ತಿದೆ 108MP, 256GB ಸ್ಟೋರೇಜ್‌ವುಳ್ಳ 5G ಸ್ಮಾರ್ಟ್‌ಫೋನ್: ಬೆಲೆ ಎಷ್ಟು?

click me!