ಜಾಹೀರಾತಿನಲ್ಲಿ ಅನುಷ್ಕಾ ಶರ್ಮಾ ಎಡವಟ್ಟು-ಟ್ವಿಟರಿಗರಿಂದ ಟ್ರೋಲ್!

First Published 6, Sep 2018, 5:50 PM IST
Highlights

ಆಧುನಿಕ ಯುಗದಲ್ಲಿ ಎಷ್ಟೇ ಅತ್ಯುತಮ ಕೆಲಸ ಮಾಡಿದರೂ ಯಾರು ಗುರುತಿಸಲ್ಲ. ಆದರೆ ಒಂದು ಸಣ್ಣ ಎಡವಟ್ಟು ಮಾತ್ರ ಕ್ಷಣಾರ್ಧದಲ್ಲೇ ಇಡೀ ವಿಶ್ವದಲ್ಲೇ ಸುದ್ದಿಯಾಗುತ್ತೆ. ಇದೀಗ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಇದೇ ರೀತಿ ಸಣ್ಣ ತಪ್ಪು ಮಾಡಿದ್ದಾರೆ. ಅದನ್ನ ಟ್ವಿಟರಿಗರು ಕಂಡು ಹಿಡಿದಿದ್ದಾರೆ.

ಮುಂಬೈ(ಸೆ.06):  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಾಲಿವುಡ್‌ನ ಬಹು ಬೇಡಿಕೆಯ ನಟಿ. ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ದಿಗ್ಗಜರೊಂದಿಗೆ ನಟಿಸಿರುವ ಅನುಷ್ಕಾ ಸದ್ಯ ವರುಣ್ ಧವನ್ ಜೊತೆ ಅಭಿನಯಿಸಿದ ಸುಯಿ ಧಾಗ್ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಾಲಿವುಡ್‌ನಲ್ಲಿ ಮಾತ್ರವಲ್ಲ, ಜಾಹೀರಾತು, ಬ್ರ್ಯಾಂಡ್ ಪ್ರಮೋಶನ್, ಎಂಡೋರ್ಸ್‌ಮೆಂಟ್‌ಗಳಲ್ಲೂ ಅನುಷ್ಕಾ ಶರ್ಮಾ ಸಕ್ರೀಯರಾಗಿದ್ದಾರೆ.  ಆದರೆ ಅನುಷ್ಕಾ ಶರ್ಮಾ ಜಾಹೀರಾತಿನಲ್ಲಿ ಮಾಡಿದ ಸಣ್ಣ ತಪ್ಪನ್ನೂ ಸಾಮಾಜಿಕ ಜಾಲತಾಣ ಬಳಕೆದಾರರು ಕಂಡು ಹಿಡಿದಿದ್ದಾರೆ.

 

 

ಅನುಷ್ಕಾ ಶರ್ಮಾ ಗೂಗಲ್ ಪಿಕ್ಸೆಲ್ ಮೊಬೈಲ್ ಫೋನ್ ಜಾಹೀರಾತಿನ ಭಾಗವಾಗಿ ಟ್ವಿಟರ್‌ನಲ್ಲಿ ಎರಡು ಫೋಟೋ ಅಪ್‌ಲೋಡ್ ಮಾಡಿದ್ದಾರೆ. ಬಳಿಕ ಈ ಚಿತ್ರ ಗೂಗಲ್ ಪಿಕ್ಸೆಲ್ ಮೊಬೈಲ್‌ನಿಂದ ಚಿತ್ರಿಸಿದ್ದು ಅನ್ನೋದನ್ನ ಉಲ್ಲೇಖಿಸಿದ್ದಾರೆ.

ಅನುಷ್ಕಾ ತಮ್ಮ ಟ್ವಿಟರ್‌ನಲ್ಲಿ ಫೋಟೋ ಅಪ್‌ಲೋಡ್ ಮಾಡುತ್ತಿದ್ದಂತೆ, ತಪ್ಪನ್ನ ಕಂಡುಹಿಡಿದಿದ್ದಾರೆ. ಅನುಷ್ಕಾ ಶರ್ಮಾ ಗೂಗಲ್ ಫಿಕ್ಸೆಲ್ ಮೊಬೈಲ್‌ನಿಂದ ತೆಗೆದ ಫೋಟೋ ಅಪ್‌ಲೋಡ್ ಮಾಡಿರುವುದು ಐಫೋನ್‌ನಿಂದ. ಇದನ್ನ ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.

 

 

 

 

 

 

Last Updated 9, Sep 2018, 10:25 PM IST