ಗೂಗಲ್‌ನಲ್ಲಿ 20 ವರ್ಷ ಪೂರೈಸಿದ ಸುಂದರ್ ಪಿಚೈ, ಈ ಅವಧಿಯಲ್ಲಿ ಒಂದು ಮಾತ್ರ ಬದಲಾಗಿಲ್ಲ ಎಂದ ಸಿಇಒ!

Published : Apr 28, 2024, 03:40 PM ISTUpdated : Apr 28, 2024, 03:41 PM IST
ಗೂಗಲ್‌ನಲ್ಲಿ 20 ವರ್ಷ ಪೂರೈಸಿದ ಸುಂದರ್ ಪಿಚೈ, ಈ ಅವಧಿಯಲ್ಲಿ ಒಂದು ಮಾತ್ರ ಬದಲಾಗಿಲ್ಲ ಎಂದ ಸಿಇಒ!

ಸಾರಾಂಶ

ವಿಶ್ವದ ಟೆಕ್ ದಿಗ್ಗಜ ಗೂಗಲ್‌ ಮುನ್ನಡೆಸುತ್ತಿರುವ ಭಾರತೀಯ ಸಿಇಒ ಸುಂದರ್ ಪಿಚೈ ಇದೀಗ ಗೂಗಲ್ ಸಂಸ್ಥೆಯಲ್ಲಿ 20 ವರ್ಷ ಪೂರೈಸಿದ್ದಾರೆ. ವಿಶೇಷ ಅಂದರೆ ಈ 20 ವರ್ಷದಲ್ಲಿ ಹಲವು ಬದಲಾವಣೆಯಾಗಿದೆ. ಪಿಚೈ ಕೂದಲು ಕೂಡ ಬದಲಾಗಿದೆ. ಆದರೆ ಒಂದು ಮಾತ್ರ ಬದಲಾಗಿಲ್ಲ ಎಂದು ಪಿಚೈ ಹೇಳಿದ್ದಾರೆ.  

ಕ್ಯಾಲಿಫೋರ್ನಿಯಾ(ಏ.28) ಟೆಕ್ ದಿಗ್ಗಜ ಗೂಗಲ್ ಪ್ರತಿ ದಿನ ಹೊಸ ಹೊಸ ತಂತ್ರಜ್ಞಾನದ  ಮೂಲಕ ವಿಸ್ತರಣೆಯಾಗುತ್ತಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್, ಗೂಗಲ್ ಬಾರ್ಡ್  ಸೇರಿದಂತೆ ಹಲವು ಅತ್ಯಾಧುನಿಕ ಟೆಕ್ ಇದೀಗ ಲಭ್ಯವಿದೆ. ಈ ಟೆಕ್ ದಿಗ್ಗಜ ಸಂಸ್ಥೆಯನ್ನು ಮುನ್ನಡೆಸುತ್ತಿರುವುದು ಭಾರತೀಯದ ಮೂಲಕ ಸುಂದರ್ ಪಿಚೈ ಅನ್ನೋದು ನಮಗೆಲ್ಲ ಹೆಮ್ಮೆ. ಇದೀಗ ಸುಂದರ್ ಪಿಚೈ ಗೂಗಲ್ ಸಂಸ್ಥೆಯಲ್ಲಿ 20 ವರ್ಷ ಪೂರೈಸಿದ್ದಾರೆ. 2004ರಲ್ಲಿ ಗೂಗಲ್ ಜೊತೆ ಪಯಣ ಆರಂಭಿಸಿದ ಸುಂದರ್ ಪಿಚೈ ಇದೀಗ ಸಿಇಒ ಆಗಿ ಗೂಗಲ್ ಮುನ್ನಡೆಸುತ್ತಿದ್ದಾರೆ.

20 ವರ್ಷ ಪೂರೈಸಿದ ಸಂಭ್ರವನ್ನು ಪಿಚೈ ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಇದೇ ವೇಳೆ ತಮ್ಮ 20 ವರ್ಷಗಳ ಸುದೀರ್ಘ ಅನುಭವವನ್ನೂ ಬಿಚ್ಚಿಟ್ಟಿದ್ದಾರೆ. ಕಳೆದ 20 ವರ್ಷದಲ್ಲಿ ಹಲವು ಬದಲಾವಣೆಯಾಗಿದೆ. ಪ್ರಮಖವಾಗಿ ತಂತ್ರಜ್ಞಾನದ ಬೆಳವಣಿಗೆ, ವಿಸ್ತಾರ ಪಡೆದುಕೊಂಡಿದೆ. ವಿಶ್ವದ ಎಲ್ಲಾಕಡೆ ಗೂಗಲ್ ಬಳಕೆಯಾಗುತ್ತಿದೆ. ಗೂಗಲ್ ವಿಸ್ತಾರ ಪಡೆದುಕೊಂಡಿದೆ. ನನ್ನ ಕೂದಲು ಕೂಡ ಬದಲಾಗಿದೆ. ಆದರೆ ಕೆಲಸ ಮಾಡುವ ಥ್ರಿಲ್ ಬದಲಾಗಿಲ್ಲ. ಕಳೆದ 20 ವರ್ಷದಿಂದ ಅದೆ ಥ್ರಿಲ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಪಿಚೈ ಹೇಳಿದ್ದಾರೆ.

'ಕೆಲಸದ ಸ್ಥಳದಲ್ಲಿ ರಾಜಕೀಯಕ್ಕೆ ಇಳಿಯಬೇಡಿ..' 28 ಉದ್ಯೋಗಿಗಳ ವಜಾ ಬಳಿಕ ಗೂಗಲ್‌ ಸಿಇಒ ಸುಂದರ್‌ ಪಿಚೈ ಪತ್ರ

2004ರಲ್ಲಿ ಸುಂದರ್ ಪೈಚಿ ಗೂಗಲ್ ಜೊತೆ ಪಯಣ ಆರಂಭಿಸಿದ್ದರು. ಗೂಗಲ್‌ನ ಮಿಕ್‌ಕಿನ್ಸೆ ಅಂಡ್ ಕಂಪನಿ ಜೊತೆ ಕೆಲಸ ಆರಂಭಿಸಿದ ಪಿಚೈ, ಗೂಗಲ್ ಕ್ರೋಮ್ ಹಾಗೂ ಕ್ರೋಮ್ ಒಎಸ್ ಪರಿಚಯಿಸಿದ ಕೀರ್ತಿಗೂ ಪಾತ್ರರಾಗಿದ್ದಾರೆ. ಗೂಗಲ್ ಡ್ರೈವ್ ಮೂಲಕ ಜಗತ್ತಿನ ಡೇಟಾ ಸುರಕ್ಷತೆಗೆ ಹೊಸ ಆಯಾಮ ನೀಡಿದ ಪಿಚೈ, ಹಲವು ಹೊಸತನದ ಮೂಲಕ ಗಮನಸೆಳೆದಿದ್ದಾರೆ. 

 

 

 ಪ್ರಾಡಕ್ಟ್ ಹೆಡ್ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ಪಿಚೈ 2015ರಲ್ಲಿ ಗೂಗಲ್ ಸಿಇಒ ಆಗಿ ನೇಮಕಗೊಂಡರು. 2015ರಿಂದ ಗೂಗಲ್ ಸಿಇಒ ಆಗಿರುವ ಪಿಚೈ, ಗೂಗಲ್ ಸಂಸ್ಥೆಯನ್ನು ಮತ್ತಷ್ಟು ಬೆಳೆಸಿದ್ದಾರೆ. ಇದೇ ವೇಳೆ ಹಲವು ಸವಾಲುಗಳನ್ನು ಪಿಚೈ ಎದುರಿಸಿದ್ದಾರೆ. ಜಾಗತಿಕ ಆರ್ಥಿಕ ಹಿಂಜರಿತ , ಕೋವಿಡ್ ಸೇರಿದಂತೆ ಹಲವು ಸವಾಲುಗಳ ನಡುವೆ ಗೂಗಲ್ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಉದ್ಯೋಗ ಕಡಿತ ಸೇರಿದಂತೆ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

Good Habits : ದಿನದ ಆರಂಭವನ್ನು ಹೀಗೆ ಶುರು ಮಾಡ್ತಾರೆ ಗೂಗಲ್ ಸಿಇಒ!
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್