ಏಲಿಯನ್ ಸುಳಿವು ಪತ್ತೆ, 124 ಬೆಳಕಿನ ವರ್ಷ ದೂರದಲ್ಲಿನ ಈ ಪ್ಲಾನೆಟ್ ಕುರಿತು ಸಂಶೋಧನೆ ಆರಂಭ!

Published : Apr 28, 2024, 09:18 PM IST
ಏಲಿಯನ್ ಸುಳಿವು ಪತ್ತೆ, 124 ಬೆಳಕಿನ ವರ್ಷ ದೂರದಲ್ಲಿನ ಈ ಪ್ಲಾನೆಟ್ ಕುರಿತು ಸಂಶೋಧನೆ ಆರಂಭ!

ಸಾರಾಂಶ

ಅನ್ಯಗ್ರಹ ಜೀವಿ ಇರುವಿಕೆ ಕುರಿತು ಹಲವು ಅಧ್ಯಯನಗಳು ನಡೆದಿದೆ. ಇದರ ನಡುವೆ ಹಲವು ವಿಡಿಯೋಗಳು ಕೂಡ ಜಗತ್ತನ್ನೇ ನಿಬ್ಬೆಗೆರಗಾಗಿಸಿದೆ. ಏಲಿಯನ್ ಇರುವಿಕೆ ನಿಜ-ಸುಳ್ಳುಗಳ ನಡುವೆ ಇದೀಗ ಮತ್ತೊಂದು ಬಲವಾದ ಸಾಕ್ಷ್ಯ ಲಭ್ಯವಾಗಿದೆ. ಭೂಮಿಯಿಂದ 124 ಬೆಳಕಿನ ವರ್ಷ ದೂರದಲ್ಲಿರುವ ಈ ಏಲಿಯನ್ ಇರುವಿಕೆ ಮಹತ್ವದ ಸುಳಿವು ಪತ್ತೆಯಾಗಿದ್ದು ಹೇಗೆ?

ವಾಶಿಂಗ್ಟನ್ ಡಿಸಿ(ಏ.28) ಏಲಿಯನ್ಸ್ ಕುರಿತು ಹಲವು ಕತೆಗಳಿವೆ. ಅದಕ್ಕಿಂತ ರೋಚಕ ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಇದರ ಜೊತೆಗೆ ಏಲಿಯನ್ ಇರುವಿಕೆ ಕುರಿತು ವಿಜ್ಞಾನಿಗಳ ಸಂಶೋಧನೆ, ವಿವಿಧ ಭಾಗದಲ್ಲಿ ನಡೆದಿರುವ ಘಟನೆಗಳು ಜಗತ್ತನ್ನೇ ಬೆರಗುಗೊಳಿಸಿದೆ. ಇದರ ನಡುವೆ ಅನ್ಯಗ್ರಹ ಜೀವಿಗಳ ಇರುವಿಕೆ ಸುಳ್ಳು ಅನ್ನೋ ವಾದವೂ ಅಷ್ಟೇ ಪ್ರಬಲವಾಗಿದೆ. ಈ ಸತ್ಯ-ಮಿಥ್ಯಗಳ ನಡುವೆ ಇದೀಗ ಜಗತ್ತಿನ ದೃಷ್ಠಿಕೋನವೇ ಬದಲಾಯಿಸುವ ಮಾಹಿತಿ ಹೊರಬಿದ್ದಿದೆ. ಅನ್ಯಗ್ರಹ ಜೀವಿಗಳ ಇರುವಿಕೆ ಸುಳಿವು ಪತ್ತೆಯಾಗಿದೆ. ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್(JWST) ನಡೆಸಿದ ಸಂಶೋಧನಾ ಅಧ್ಯಯನದಲ್ಲಿ ಮತ್ತೊಂದು ಗ್ರಹದಲ್ಲಿ ಏಲಿಯನ್ಸ್ ಇರುವಿಕೆ ಪತ್ತೆಯಾಗಿದೆ.

ಭೂಮಿಯಿಂದ 124 ಬೆಳಕಿನ ವರ್ಷ ದೂರದಲ್ಲಿರುವ ಗ್ರಹದಲ್ಲಿ ಏಲಿಯನ್ಸ್ ಉಪಸ್ಥಿತಿ ಕುರಿತ ಮಹತ್ವದ ಸುಳಿವು ಸಿಕ್ಕಿದೆ. K2-18B ಅನ್ನೋ  ಗ್ರಹದಲ್ಲಿ ಈ ಏಲಿಯನ್ಸ್ ಉಪಸ್ಥಿತಿ ಇದೆ ಅನ್ನೋದು JWST ಅಧ್ಯಯನ ಸಂಶೋಧನೆಯಲ್ಲಿ ಪತ್ತೆಯಾಗಿದೆ. ಅನ್ಯಗ್ರಹಗಳಿರುವ ಗ್ರಹ ಭೂಮಿಯಿಂದ 2.6 ಪಟ್ಟು ದೊಡ್ಡದಾಗಿದೆ ಎಂದು JWST ಹೇಳಿದೆ. ವಿಶೇಷ ಅಂದರೆ ಈ ಗ್ರಹ ಸಮುದ್ರಗಳಿಂದ ಸುತ್ತುವರಿದಿದೆ ಎಂದು ಈ ಸಂಶೋಧನೆ ಹೇಳುತ್ತಿದೆ.

ಚಂದ್ರನ ಮೇಲೆ ಏಲಿಯನ್‌ಗಳ ನೌಕೆ ಕಂಡ ನಾಸಾದ ಎಲ್‌ಆರ್‌ಓ ನೌಕೆ?

ಈ ಗ್ರಹದಲ್ಲಿನ ಡೈಮಿಥಿಕಲ್ ಸಲ್ಫೈಡ್(DMS)ಅನಿಲ ವಿಜ್ಞಾನಿಗಳ ಗಮನಸೆಳೆದಿದೆ. ಕಾರಣ ಈ ಅನಿಲ ಸಮುದ್ರದ ಫ್ಲೈಟೋಪ್ಲಾಂಕ್ಟನ್ ಜೀವಗಳಿಂದ ಉತ್ಪತ್ತಿಯಾಗುವ ಈ ಅನಿಲ ಜೀವಿಗಳ ಇರುವಿಗೆ ಅಗತ್ಯ.  K2-18B ಸುತ್ತ ಈ ಅನಿಲವಿದೆ. ಅಧ್ಯಯನ ಪ್ರಾಥಮಿಕ ಹಂತದಲ್ಲಿರುವ ಕಾರಣ ಈಗಲೇ ತೀರ್ಮಾನ, ನಿರ್ಧಾರಗಳಿಗೆ ಹೋಗಬಾರದು ಅನ್ನೋ ಎಚ್ಚರಿಕೆಯನ್ನು ಕೇಂಬ್ರಿಡ್ಜ್‌ನ ಖಗೋಳ ಭೌತಶಾಸ್ತ್ರಜ್ಞ ನಿಕ್ಕು ಮಧೂಸೂಧನ್ ನೀಡಿದ್ದಾರೆ.

ಏಲಿಯನ್ಸ್ ಈ ಗ್ರಹದಲ್ಲಿರುವ ಸಾಧ್ಯತೆ ಇದೆ. ಭೂಮಿಯಿಂದ ದೊಡ್ಡದಾದ ಈ ಗ್ರಹದಲ್ಲಿ ಜೀವಿಗಳ ಉಪಸ್ಥಿತಿ ಇದೆ ಅನ್ನೋದಕ್ಕೆ ಹಲವು ಸಾಕ್ಷ್ಯಗಳು ಸಿಕ್ಕಿವೆ. ಇದೀಗ JWST ಸಂಶೋಧನೆ ಏಲಿಯನ್ಸ್ ಜಗತ್ತಿನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಏಲಿಯನ್ಸ್ ಜಗತ್ತು ಹೇಗಿದೆ? ಈ ಜಗತ್ತು ಭೂಮಿಯಂತಿದೆಯಾ? ಏಲಿಯನ್ಸ್ ಮಾನವನಿಗಿಂತ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆಯಾ? ಈ ರೀತಿಯ ಹಲವು ಕೂತೂಹಲು ಇದೀಗ ಹೆಚ್ಚಾಗಿದೆ.

ನಮ್ಮ ಗ್ಯಾಲಕ್ಸಿಯನ್ನು ಸೃಷ್ಟಿಸಿದ್ದು'ಶಿವ-ಶಕ್ತಿ', ಅತೀ ಹಳೆಯ ನಕ್ಷತ್ರ ಕಂಡುಹಿಡಿದ ಜರ್ಮನ್‌ ವಿಜ್ಞಾನಿಗಳು
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ