ಇತ್ತೀಚೆಗಷ್ಟೇ ಎರಡು ದಿನಗಳ ಭಾರತ ಪ್ರವಾಸ ಮುಂದೂಡಿದ್ದ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್, ಭಾನುವಾರ ದಿಢೀರ್ ಚೀನಾಕ್ಕೆ ಭೇಟಿ ನೀಡಿದ್ದಾರೆ.
ಬೀಜಿಂಗ್ (ಏ.29): ಕಂಪನಿಯ ತುರ್ತು ಕಾರ್ಯಗಳ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಎರಡು ದಿನಗಳ ಭಾರತ ಪ್ರವಾಸ ಮುಂದೂಡಿದ್ದ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್, ಭಾನುವಾರ ದಿಢೀರ್ ಚೀನಾಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಚೀನಾ ಪ್ರಧಾನಿ ಲಿ ಕಿಯಾಂಗ್ ಅವರನ್ನು ಭೇಟಿ ಮಾಡಿ ಉದ್ಯಮ ವಿಸ್ತರಣೆಯ ಕುರಿತು ಮಾತುಕತೆ ನಡೆಸಿದ್ದಾರೆ. ಸ್ಥಳೀಯ ಆಟೋಮೊಬೈಲ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವಂತೆ ಬಂದಿದ್ದ ಆಹ್ವಾನದ ಹಿನ್ನೆಲೆಯಲ್ಲಿ ಮಸ್ಕ್ ಈ ದಿಢೀರ್ ಭೇಟಿ ನೀಡಿದ್ದಾರೆ. ಚೀನಾ, ಟೆಸ್ಲಾದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.
ಭಾರತ ಭೇಟಿ ಮುಂದೂಡಿದ ಎಲಾನ್ ಮಸ್ಕ್;'ಎಕ್ಸ್' ಪೋಸ್ಟ್ ನಲ್ಲಿ ಕಾರಣ ಬಹಿರಂಗಪಡಿಸಿದ ಟೆಸ್ಲಾ ಸಿಇಒ
ಮಸ್ಕ್‌ರಿಂದ ಹೊಸ ವಿಡಿಯೋ ಆ್ಯಪ್: ಯೂಟ್ಯೂಬ್‌ಗೆ ಸವಾಲು
ಗೂಗಲ್ ಒಡೆತನದ ಜನಪ್ರಿಯ ಯುಟ್ಯೂಬ್ ಗೆ ಸ್ಪರ್ಧೆ ನೀಡಲು ಎಲಾನ್ ಮಸ್ಕ್ ಒಡೆತನದ ಎಕ್ಸ್ ಕಂಪೆನಿಯು ಟೀವಿ ಅಪ್ಲಿಕೇಶನ್ ತರುವುದಕ್ಕೆ ಸಿದ್ಧವಾಗಿದೆ. ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ಉತ್ತಮ ಕ್ವಾಲಿಟಿ ವಿಡಿಯೋಗಳನ್ನು ಪೋಸ್ಟ್ ಮಾಡಬಹುದು ಎಂದು ‘ಎಕ್ಸ್ ’ ಸಿಇಓ ಲಿಂಡಾ ಯಾಕರಿನೋ ಘೋಷಿಸಿದ್ದಾರೆ.
'ಎಕ್ಸ್' ಬಳಕೆದಾರರಿಗೆ ಶಾಕ್; ಪೋಸ್ಟ್ ,ರಿಪ್ಲೈ, ಲೈಕ್ಸ್ ಗೂ ಹಣ ಪಾವತಿಸಬೇಕು; ಹೊಸ ನಿಯಮ ಜಾರಿ ದೃಢಪಡಿಸಿದ ಮಸ್ಕ್
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಯಾಕರಿನೋ ‘ಸಣ್ಣ ಪರದೆಯಿಂದ ದೊಡ್ಡ ಪರದೆಯವರೆಗೆ, ಎಕ್ಸ್ ಎಲ್ಲವನ್ನೂ ಬದಲಾಯಿಸಲಿದೆ’ ಎಂದು ಬರೆದುಕೊಂಡಿದ್ದಾರೆ. ಎಐ ಚಾಲಿತ ವಿಷಯಗಳನ್ನು ಈ ಅಪ್ಲಿಕೇಶನ್ ಒಳಗೊಳ್ಳಲಿದ್ದು, ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಈ ಎಕ್ಸ್ ಟಿವಿ ಆ್ಯಪ್ ಹೆಚ್ಚುಕಮ್ಮಿ ಯುಟ್ಯೂಬ್ ಫೀಚರ್ ಗಳನ್ನೇ ಹೋಲಲಿದೆ.