ಟಾಪ್‌ 9 ಅಪಾಯಕಾರಿ ಸೋಶಿಯಲ್‌ ಆ್ಯಪ್‌ಗಳು!

By Web Desk  |  First Published May 19, 2019, 2:19 PM IST

ನಮ್ಮ ಜೀವನ ನಮ್ಮ ನಿಯಂತ್ರಣದಲ್ಲಿಲ್ಲದಿದ್ದರೆ ಡೇಂಜರ್‌ ಡೋರ್‌ ಮಗ್ಗುಲಲ್ಲೇ ನಿಂತಿರುತ್ತದೆ. ಇನ್ನು ಸಾಮಾಜಿಕ ಜಾಲತಾಣದ ನಿಯಂತ್ರಣದಲ್ಲಿ ನೀವಿದ್ದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ. ಪೋಷಕರಿರಲಿ, ಯುವಕರಿರಲಿ, ಸಾಮಾಜಿಕ ಜಾಲತಾಣ ಹಾಗೂ ಸೋಷಿಯಲ್‌ ಆ್ಯಪ್‌ಗಳ ಉಪಯೋಗದ ಮೇಲೆ ನಿಗಾ ವಹಿಸದಿದ್ದರೆ ಭವಿಷ್ಯ ಅಯೋಮಯ ಖಚಿತ.


ಹಾಗೆ ನೋಡುತ್ತಾ ಹೋದರೆ ಈ ರೀತಿಯ ಡೇಂಜರಸ್‌ ಆ್ಯಪ್‌ಗಳ ದೊಡ್ಡ ಸಾಲೇ ಸಿಕ್ಕರೂ ಹಲವನ್ನು ಒಂದೋ ನಮ್ಮ ದೇಶಕ್ಕೆ ಅದರ ಪ್ರಭಾವ ಇಲ್ಲದಿರುವುದರಿಂದ, ಅಥವಾ ಅವುಗಳ ಬಳಕೆದಾರರ ಸಂಖ್ಯೆ ಈ ದೊಡ್ಡ ಆ್ಯಪ್‌ಗಳ ಮುಂದೆ ನಗಣ್ಯವೆನಿಸಿದ್ದರಿಂದ, ಇಲ್ಲಿ ಕೇವಲ ಟಾಪ್‌ 10 ಆ್ಯಪ್‌ಗಳನ್ನು ಪಟ್ಟಿಮಾಡಲಾಗಿದೆ. ಅಂದ ಹಾಗೆ ಪ್ರತಿಯೊಂದು ಆ್ಯಪ್‌ನ ಹಿಂದೆಯೂ ಹಲವು ಘಟನೆಗಳ ಹಾಗೂ ವಿಶ್ವದಾದ್ಯಂತ ಅಲ್ಲೋಲಕಲ್ಲೋಲ ಸೃಷ್ಟಿಸಿದ ಕನಿಷ್ಟಒಂದಕ್ಕಿಂತ ಹೆಚ್ಚು ಉದಾಹರಣೆಗಳಿವೆ. ಕೆಲವೊಂದಂತೂ ಜೀವವನ್ನೇ ತೆಗೆದುಕೊಂಡದ್ದೂ ಇದೆ.

ಹಾಗಂತಡೇಂಜರಸ್‌ ಚ್ಯಾಲೆಂಜ್‌ಗಳನ್ನು ತಂದೊಡ್ಡುವ ಆ್ಯಪ್‌ಗಳಿಂದ ತೊಡಗಿ ಅಶ್ಲೀಲ, ಹಿಂಸೆಯನ್ನು ಪ್ರಚೋದಿಸುವ ಹಾಗೂ ಇನ್ನೂ ಅನೇಕ ಸಾಮಾಜಿಕವಾಗಿ ಅಪಾಯಕಾರಿಯಾದ ಕಾರಣಗಳಿಗೆ ಈ ಆ್ಯಪ್‌ಗಳು ಇಂದಿನ ಹಾಗೂ ಮುಂದಿನ ಪೀಳಿಗೆಯನ್ನೇ ಡೇಂಜರ್‌ಗೆ ದೂಡಿದೆ. ಇಲ್ಲಿವೆ ನೋಡಿ ಆ ಟಾಪ್‌ 9 ಆ್ಯಪ್‌ಗಳು.

Latest Videos

undefined

ಬದುಕು ಬದಲಿಸಬಲ್ಲ ಫಿಟ್‌ನೆಸ್ ಆ್ಯಪ್ಸ್!

1. ವಾಟ್ಸ್ಯಾಪ್‌

ದಿನ ಬೆಳಗಾದರೆ ‘ಕರಾಗ್ರೇ ವಸತೇ ಲಕ್ಷ್ಮೀ’ ಎಂದು ಹೇಳುವ ಕಾಲದಿಂದ ಮೊಬೈಲ್‌ ಹಿಡಿದು ವಾಟ್ಸ್ಯಾಪ್‌ ನೋಡದೇ ಎದ್ದೇಳದ ಪೀಳಿಗೆ ಇಂದಿನದು. ಆದರೆ ಒಬ್ಬಿರಗೊಬ್ಬರು ಸಂಭಾಷಣೆ ಮಾಡುವುದಕ್ಕಷ್ಟೇ ಇದು ಸೀಮಿತವಾಗಿದ್ದರೆ ತೊಂದರೆ ಇರಲಿಲ್ಲ. ಆದರೆ ಸುಳ್ಳು ಸುದ್ದಿಗಳಿಂದ ಹಿಡಿದು

2. ಇನ್ಸಾ$್ಟಗ್ರಾಮ್‌

ಮೊನ್ನೆ ಮೊನ್ನೆ ಹೀಗೂ ಆಯ್ತು. ಮಲೇಶಿಯಾದ ಹುಡುಗಿಯೊಬ್ಬಳು ಇನ್‌ಸ್ಟಾಗ್ರಾಮ್‌ನಲ್ಲಿರುವ ವೋಟ್‌ ಫೀಚರ್‌ನಲ್ಲಿ ತಾನು ಸಾಯಬೇಕೋ ಅಥವಾ ಬದುಕಬೇಕೋ ಅನ್ನೋ ವೋಟ್‌ನಲ್ಲಿ ಸಾಯಬೇಕು ಅನ್ನುವುದಕ್ಕೆ ಹೆಚ್ಚು ವೋಟ್‌ ಬಂದಿದ್ದರಿಂದ ಅವಳು ಆತ್ಮಹತ್ಯೆ ಮಾಡಿಕೊಂಡಳು. ಇದು ಒಂದಷ್ಟೇ ಅಲ್ಲ ಫೇಕ್‌ ಪೊಫೈಲ್‌ಗಳ ಮೂಲಕ ನಡೆಯುವ ಅದೆಷ್ಟೋ ರೀತಿಯ ಕಾನೂನು ಬಾಹಿರ ಚಟುವಟಿಕೆಗಳ ತಾಣವಾಗಿದೆ. ಅವೆಷ್ಟೋ ಡೇಟಿಂಗ್‌ ಆ್ಯಪ್‌ಗಳಿಗಿಂತ ಇಲ್ಲಿ ನಡೆಯುವ ಡೇಟಿಂಗ್‌ ಮುಂಚೂಣಿಯಲ್ಲಿದೆ ಅಂದರೆ ನಂಬುವುದೇ ಕಷ್ಟ. ಫೋಟೋ/ವಿಡಿಯೋ ಶೇರ್‌ ಮಾಡುವ, ಲೈವ್‌ ವಿಡಿಯೋ ಮಾಡುವ ಅವಕಾಶವಿರುವುದು ಎಲ್ಲರನ್ನೂ ಕನೆಕ್ಟ್ ಮಾಡುವುದಕ್ಕೆ ಕ್ಷಣ ಮಾತ್ರ ಸಾಕಾದರೂ ಮೇಲಿನ ವಿಚಾರಗಳೂ ಅಲ್ಲದೇ ಇನ್ನೂ ಹಲವು ಘಟನೆಗಳಿಂದಾಗಿ ಕೂಡ ಯುವ ಜನತೆಯನ್ನ ಅಪಯಕ್ಕೆ ದೂಡುತ್ತಿದೆ.

3. ಫೇಸ್‌ಬುಕ್‌

ಪ್ರಪಂಚದಲ್ಲೇ ಅತಿ ಹೆಚ್ಚು ಡೌನ್‌ಲೋಡ್‌ಗಳನ್ನು ಅಲ್ಲದೇ ತಿಂಗಳಿಗೆ 200 ಕೋಟಿಗೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ ತನ್ನ ಆ್ಯಪ್‌ ಹಾಗೂ ಜಾಲತಾಣದ ಮೂಲಕ ಜನರನ್ನು ಜೋಡಿಸುವುದಲ್ಲದೇ ಹಲವು ರೀತಿಯಲ್ಲಿ ಡೇಂಜರಸ್‌. ಒಂದೆಡೆ ಅದರ ಸುದ್ದಿ ಹಾಗೂ ವಿಡಿಯೋ ಸರ್ವಿಸ್‌ನಲ್ಲಿ ಬರುವ ಫೇಕ್‌ ಸುದ್ದಿಗಳ ನಿಯಂತ್ರಣಕ್ಕೆಂದೇ ಫೇಸ್‌ಬುಕ್‌ ನಿತ್ಯವೂ ಹೋರಾಡುತ್ತಿದೆ. ಇದಲ್ಲದೇ ಕೇಂಬ್ರಿಜ್‌ ಅನಲಿಟಿಕಾ ಅಲ್ಲದೇ ಇನ್ನೂ ಹಲವು ಗೌಪ್ಯತೆಯ ವಿಚಾರದ ವಿವಾದಗಳಲ್ಲದೇ ಹತ್ತು ಹಲವು ವಿವಾದಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣವಾಗಿದೆ ಫೇಸ್‌ಬುಕ್‌. ಇದಲ್ಲದೇ ಚೀನಾ, ಇರಾನ್‌ ಮುಂತಾದ ದೇಶಗಳಲ್ಲಿ ಫೇಸ್‌ಬುಕ್‌ನಲ್ಲಿರುವ ವಿಷಯಗಳ ಸೆನ್ಸರ್‌ಶಿಪ್‌ ವಿಚಾರವಾಗಿ ಆ್ಯಪ್‌ ಮತ್ತು ಸೈಟ್‌ ಅನ್ನು ತಾತ್ಕಾಲಿಕವಾಗಿ ಅಥವಾ ಸಂಪೂರ್ಣವಾಗಿ ಬ್ಯಾನ್‌ ಮಾಡಿವೆ.

ಇನ್ಮುಂದೆ ನಿಮ್ಮ ಪೋಸ್ಟ್‌ಗೆ ಸಿಕ್ಕಿರುವ ಲೈಕ್ ಲೆಕ್ಕ ಸಿಗಲ್ಲ?

4. ಟಿಂಡರ್‌

ಡೇಟಿಂಗ್‌ ಅನ್ನು ಪ್ರೇರೇಪಿಸಲೆಂದೇ ಹುಟ್ಟಿದ ಆ್ಯಪ್‌ ಇದು. ಇಲ್ಲಿ ಮುಂದಿರುವ ಹುಡುಗ ಅಥವಾ ಹುಡುಗಿ ಇಷ್ಟವಾದರೆ ಬಲಕ್ಕೆ ಇಲ್ಲವಾದರೆ ಎಡಕ್ಕೆ ಸ್ವೈಪ್‌ ಮಾಡಿದರಾಯಿತು.ಅಷ್ಟುಸುಲಭವಾಗಿದೆ ಒಬ್ಬರಿಗೊಬ್ಬರು ಕನೆಕ್ಟ್ ಆಗುವುದು. ಅದೂ ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಮ್‌ನಂತಹ ಆ್ಯಪ್‌ಗಳ ಉದ್ದೇಶಕ್ಕೆ ಹೋಲಿಸಿದರೆ ಒಂದು ಲೆವೆಲ್‌ ಮುಂದೆ ಹೋಗಿ ಡೇಟಿಂಗ್‌ಗೆ ನೇರವಾಗಿ ದಾರಿ ನೀಡುತ್ತಿದೆ. ಇದನ್ನು ಅತಿ ಹೆಚ್ಚು ಉಪಯೋಗಿಸುವುದು ಟೀನೇಜ್‌ನ ಮಂದಿಯೇ ಅಂದರೆ ಅರ್ಥವಾಗುತ್ತದೆ ಇದರ ಅಪಾಯದ ಆಳ.

5. ಸ್ನ್ಯಾಪ್‌ಚಾಟ್‌

ಕಳುಹಿಸಿದ ಚಿತ್ರವೋ, ಸಂದೇಶವೋ ಅಥವಾ ವಿಡಿಯೋ ನಿಯಮಿತ ಸೆಕೆಂಡ್‌ಗಳಾದೊಡನೆ ಮಾಯವಾಗಿಬಿಡುತ್ತವೆ. ಅಂದರೆ ಆಡಿದ ಮಾತಿಗೆ ಪೂ›ಫ್‌ ಇಲ್ಲ. ಇದೊಂದು ಅನಂತ ಅಸಂಭವಗಳಿಗೆ ಹೆದ್ದಾರಿಯಂತೆ. ಇಲ್ಲೂ ಯುವಜನತೆಯದ್ದೇ ಹೆಚ್ಚಿನ ಬಳಕೆಯಾದ್ದರಿಂದ ಗೌಪ್ಯತೆಯ ಹೆಸರಿನಲ್ಲಿ ರಿಸ್ಕೀ ದುನಿಯಾವನ್ನು ಸೃಷ್ಟಿಸಿದೆ ಸ್ನ್ಯಾಪ್‌ಚಾಟ್‌. ಈ ಗೌಪ್ಯತೆಯ ಹಿನ್ನೆಲೆಯಲ್ಲೇ ಕಾಣೆಯಾಗುವ ಚಿತ್ರಗಳೋ ವಿಡಿಯೋಗಳೋ ಸಂಪೂರ್ಣವಾಗಿ ಮಾಯವಾಗುವುದಿಲ್ಲ ಅನ್ನೋ ಭಯಾನಕ ಸತ್ಯ ಇತ್ತೀಚೆಗೆ ಹೊರಬಿದ್ದಿದೆ.

6. ಟಿಕ್‌ಟಾಕ್‌

ನಿಮಗೆ ಬೇಕಾದ್ದನ್ನು ಪೋಸ್ಟ್‌ ಮಾಡಬಹುದು ಅಂದಾಗ ಆಯ್ಕೆಗಳಿಗೆ ಲಿಮಿಟ್ಟೇ ಇಲ್ಲ. ಇನ್ನೂ ನಿರ್ಧಾರಗಳನ್ನು ಕೈಗೊಳ್ಳಲು ಸಮರ್ಥರಲ್ಲದವರ ಕೈಗೆ ಇಂತಹ ಆ್ಯಪ್‌ಗಳು ಸಿಕ್ಕಿದರೆ ಏನಾಗುತ್ತದೋ ಅದೇ ಆಗಿದೆ ಈ ಆ್ಯಪ್‌ನಲ್ಲಿ. ಟಿಕ್‌ಟಾಕ್‌ 3ರಿಂದ 15 ಸೆಕೆಂಡ್‌ಗಳ ವಿಡಿಯೋ ತುಣುಕುಗಳನ್ನು ಹಾಕುವುದಕ್ಕೆ ಅವಕಾಶ ಮಾಡಿಕೊಡುವ, ಇಂದಿನ ಯುವಕರ ಮೋಸ್ಟ್‌ ಸೆನ್ಸೇಶನಲ್‌ ಆ್ಯಪ್‌. ಆದರೆ ವಿಡಿಯೋಗಳು ಕೇವಲ ಮನರಂಜನೆಯ ಸರಹದ್ದನ್ನೂ ಮೀರಿ ಅಶ್ಲೀಲ ತುಣುಕುಗಳವರೆಗೂ ಸಾಗಿ ಸ್ವಲ್ಪ ಕಾಲ ಭಾರತದಲ್ಲಿ ಬ್ಯಾನ್‌ ಆಗಿದ್ದು ದೊಡ್ಡದಾಗಿಯೇ ಸುದ್ದಿ ಮಾಡಿತ್ತು.

7. ಯೂಟ್ಯೂಬ್‌

ವಿಶ್ವದ ಅತಿ ದೊಡ್ಡ ವಿಡಿಯೋ ಲೈಬ್ರೆರಿ. ಅದೂ ಉಚಿತ. ಇಂಟರ್ನೆಟ್‌ ಕನೆಕ್ಷನ್‌ ಇದ್ದರೆ ಸಾಕು ವಿಡಿಯೋಗಳ ದುನಿಯಾವನ್ನೇ ನಮ್ಮ ಮುಂದೆ ತೆರೆದಿಡುತ್ತದೆ ಯೂಟ್ಯೂಬ್‌. ಇದೊಂದು ರೀತಿಯಲ್ಲಿ ಉತ್ತಮ ವೇದಿಕೆಯೇ ಆದರೂ ಇಲ್ಲೂ ಇದೆ ಕರಾಳ ದುನಿಯಾ. ಒಂದೆಡೆ ಹಿಂಸಾತ್ಮಕ ವಿಡಿಯೋಗಳಾದರೆ ಇನ್ನೊಂದೆಡೆ ಅಶ್ಲೀಲ ವಿಡಿಯೋಗಳು ಯೂಟ್ಯೂಬ್‌ ತನ್ನ ಲೈಬ್ರೆರಿಯ ನಿಯಂತ್ರಣ ಸಿಗದೇ ಒದ್ದಾಡುವಂತೆ ಮಾಡಿದೆ.

8. ಮ್ಯೂಸಿಕಲೀ

ಒಂಥರಾ ಟಿಕ್‌ಟಾಕ್‌ನಂತೆಯೇ ಇರುವ ಈ ಆ್ಯಪ್‌ ಕೂಡ ಪೋಸ್ಟ್‌ ಮಾಡುವವರಿಗೆ ನೀಡುವ ಸ್ವಾತಂತ್ರ್ಯದಿಂದಾಗಿ ಡೇಂಜರಸ್‌ ಎನಿಸಿದೆ. ಅಶ್ಲೀಲ ದೃಶ್ಯಗಳಲ್ಲದೇ ಹಿಂಸಾತ್ಮಕ ದೃಶ್ಯಗಳನ್ನೂ ಬಿತ್ತರಿಸಲು ಇಲ್ಲಿ ಹೆದ್ದಾರಿಯೇ ಇದೆ. 13ಕ್ಕಿಂತ ಕಡಿಮೆ ವಯಸಿನವರು ಸೈನ್‌ ಅಪ್‌ ಮಾಡುವುದು ಸಾಧ್ಯವಿಲ್ಲವೆಂದಾದರೂ ಬಳಕೆದಾರರ ವಯಸ್ಸನ್ನು ಪರೀಕ್ಷಿಸುವ ಯಾವ ವಿಧಾನವೂ ಇಲ್ಲಿಲ್ಲ. ಇದು ಹೆಚ್ಚಿನೆಲ್ಲಾ ಆ್ಯಪ್‌ಗಳ ವಿಚಾರದಲ್ಲೂ ಸತ್ಯ ಎನ್ನುವುದು ಬೇಸರದ ಸಂಗತಿ.

9. ಟಂಬ್ಲರ್‌

ಈ ಆ್ಯಪ್‌ನಲ್ಲಿದ್ದ ಅಶ್ಲೀಲ ವಿಡಿಯೋ ತುಣುಕುಗಳು ಹಾಗೂ ಫೋಟೋಗಳಿಂದಾಗಿ ಅವನ್ನೆಲ್ಲಾ ತೆಗೆದು ಹಾಕುವ ಕಾರ್ಯದಲ್ಲಿ ಕಂಪೆನಿ ನಿರತವಾಗಿದೆ. ಮೈಕ್ರೋಬ್ಲಾಗಿಂಗ್‌ಗೆಂದೇ ಆರಂಭವಾದ ಟಂಬ್ಲರ್‌ನಲ್ಲಿ ಪೋಸ್ಟ್‌ ಮಾಡುವವರಿಗಿರುವ ಸ್ವಾತಂತ್ರ್ಯ ಮೇರೆ ಮೀರಿ ಅದನ್ನೊಂದು ಪಾರ್ನ್‌ ಸೈಟಿಗಿಂತ ಜನಪ್ರಿಯ ಅಶ್ಲೀಲ ವಿಡಿಯೋ ವೀಕ್ಷಣೆಯ ಆಯ್ಕೆಯನ್ನಾಗಿಸಿತ್ತು. ಅಂದ ಹಾಗೆ ಆ ವಿಡಿಯೋ/ಚಿತ್ರಗಳನ್ನು ತೆಗೆಯತೊಡಗಿದ ನಂತರ ಟಂಬ್ಲರ್‌ನ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ ಅಂದರೆ ಈ ಆ್ಯಪ್‌ ಅದ್ಯಾಕೆ ಜನರಿಗೆ ಬೇಕಿತ್ತು ಎನ್ನುವುದು ಅರ್ಥವಾಗುತ್ತದೆ.

click me!