₹4300 ಕಡಿಮೆ ಬೆಲೆಯಲ್ಲಿ 108MP ಕ್ಯಾಮೆರಾವುಳ್ಳ OnePlus ಕಂಪನಿಯ 5G ಸ್ಮಾರ್ಟ್‌ಫೋನ್‌ನಲ್ಲಿವೆ ಈ ಫೀಚರ್ಸ್

By Mahmad Rafik  |  First Published Nov 18, 2024, 5:30 PM IST

OnePlus Nord CE 3 Lite 5G ಸ್ಮಾರ್ಟ್‌ಫೋನ್ 108MP ಕ್ಯಾಮೆರಾ, 67W ಫಾಸ್ಟ್ ಚಾರ್ಜಿಂಗ್ ಮತ್ತು ಇತರ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಈಗ ₹4300 ರಷ್ಟು ಕಡಿಮೆ ಬೆಲೆಯಲ್ಲಿದೆ.


ನವದೆಹಲಿ: ಅಂಡ್ರಾಯ್ಡ್, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒನ್ ಪ್ಲಸ್ ತನ್ನದೇ ಆದ ಗ್ರಾಹಕರನ್ನು ಹೊಂದಿದೆ. ಹಾಗಾಗಿಯೇ ಒಂದಿಷ್ಟು ಬಳಕೆದಾರರು ಒನ್‌ ಪ್ಲಸ್ ಪ್ರೊಡಕ್ಟ್‌ ಗಾಗಿ ಕಾಯುತ್ತಿರುತ್ತಾರೆ. ಇಂದು ಅಂತಹ ಗ್ರಾಹಕರಿಗೆ ಒನ್‌ ಪ್ಲಸ್ ಗುಡ್  ನ್ಯೂಸ್ ನೀಡಿದೆ. ಒನ್ ಪ್ಲಸ್‌ ಸ್ಮಾರ್ಟ್‌ಫೋನ್ ಖರೀದಿಸಬೇಕೆಂದು ಯೋಚಿಸುತ್ತಿದ್ದರೆ ಇದರ ಬಗ್ಗೆ ತಿಳಿದುಕೊಳ್ಳಿ. ಒನ್ ಪ್ಲಸ್ ತನ್ನ ಗುಣಮಟ್ಟದ ಕ್ಯಾಮೆರಾದಿಂದಲೇ ಜನಪ್ರಿಯತೆ ಪಡೆದುಕೊಂಡಿದೆ. ಹಾಗಾದ್ರೆ ಈ ಒನ್ ಪ್ಲಸ್ ಸ್ಮಾರ್ಟ್‌ಫೋನ್ ಯಾವೆಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ. 

ಒನ್ ಪ್ಲಸ್ ಕಂಪನಿಯಯ ಹೊಸ ಸ್ಮಾರ್ಟ್‌ಫೋನ್
ಒನ್ ಪ್ಲಸ್ ಸ್ಮಾರ್ಟ್‌ಫೋನ್ ಕಂಪನಿ OnePlus Nord CE 3 Lite 5G Smartphoneನ್ನು ಏಪ್ರಿಲ್ 2023ರಲ್ಲಿ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಇಷ್ಟವಾಗಿದ್ದ ಕಾರಣ ಹೆಚ್ಚು ಮಾರಾಟವಾಗಿತ್ತು. ಇದು 6.72 ಇಂಚಿನ ಹೆಚ್‌ಡಿ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್‌ ಹೊಂದಿದೆ. ಆತ್ಯಾಕರ್ಷಕವಾಗಿ ಕಾಣುವ ಈ ಸ್ಮಾರ್ಟ್‌ಫೋನ್‌ನ ಸ್ಕ್ರೀನ್ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ ನೀಡಲಾಗಿದೆ. ಇದೀಗ ಒನ್ ಪ್ಲಸ್ ಇದೇ ಸ್ಮಾರ್ಟ್‌ಫೋನ್‌ನನ್ನು ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಆದ್ರೆ ಹೊಸ ಲಾಂಚ್ ಬಗ್ಗೆ ಒನ್ ಪ್ಲಸ್ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. 

Tap to resize

Latest Videos

undefined

ಕ್ಯಾಮೆರಾ ಮತ್ತು ಬ್ಯಾಟರಿ 

ಒನ್‌ಪ್ಲಸ್ ಕಂಪನಿಯ OnePlus Nord CE 3 Lite 5G Smartphone ಒಳಗೆ ಮೂರು ಕ್ಯಾಮೆರಾ ಸೆಟಪ್‌ಗಳನ್ನು ಹೊಂದಿದೆ. 108MP ಪ್ರೈಮರಿ ಕ್ಯಾಮೆರಾ, 2MP ಮೈಕ್ರೊ ಲೆನ್ಸ್ ಮತ್ತು 2MPಯ ಡೆಪ್ಥ್ ಸೆನ್ಸಾರ್ ಕ್ಯಾಮೆರಾ ಒಳಗೊಂಡಿದೆ. 16MP ಸಾಮರ್ಥ್ಯದ ಫ್ರಂಟ್ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ. ಇನ್ನು ಬ್ಯಾಟರಿ ವಿಷಯಕ್ಕೆ ಬಂದ್ರೆ 5000mAh ಸಾಮಾರ್ಥ್ಯದೊಂದಿಗೆ 67 ವ್ಯಾಟ್ ಸೂಫರ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಕೇವಲ 30 ನಿಮಿಷದಲ್ಲಿ ಶೇ.80ರಷ್ಟು ಚಾರ್ಜ್ ಮಾಡಬಹುದಾಗಿದೆ.

ಇದನ್ನೂ ಓದಿ: ನೋಕಿಯಾದಿಂದ ಕಡಿಮೆ ಬೆಲೆಯಲ್ಲಿ ಪವರ್‌ಫುಲ್ 5G ಸ್ಮಾರ್ಟ್‌ಫೋನ್; 108MP ಕ್ಯಾಮೆರಾ, 6000mAh ಬ್ಯಾಟರಿ

OnePlus Nord CE 3 Lite 5G Smartphone ಬೆಲೆ ಎಷ್ಟು?
ಈ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ. 8GB ಮತ್ತು 128GB ಸ್ಟೋರೇಜ್ ಸ್ಮಾರ್ಟ್‌ಫೋನ್ ಬೆಲೆ ಆರಂಭದಲ್ಲಿ 19,999 ರೂಪಾಯಿ ಆಗಿತ್ತು. ಆದ್ರೆ ಇದೀಗ 15,670 ರೂ.ಗೆ ಆಗಿದ್ದು, 4,300 ರೂ.ವರೆಗೂ ಬೆಲೆ ಇಳಿಕೆಯಾಗಿದೆ. 8GB ಮತ್ತು 256GB ಸ್ಟೋರೇಜ್ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಆರಂಭದಲ್ಲಿ 21,999 ರೂ. ಆಗಿತ್ತು, ಆದ್ರೀಗ 15,650 ರೂ. ಸಿಗುತ್ತಿದೆ, ಅಂದ್ರೆ 6 ಸಾವಿರ ರೂ.ವರೆಗೂ ಹಣ ಉಳಿತಾಯವಾಗಲಿದೆ. ಗ್ರಾಹಕರು ಸಮೀಪದ ಶೋರೂಮ್ ಅಥವಾ ಆನ್‌ಲೈನ್‌ನಲ್ಲಿ ಖರೀದಿಸಬಹುದು.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಸಮೀಪದ ಶೋರೂಂಗೆ ವಿಚಾರಿಸಿಕೊಳ್ಳಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಲಹೆ ಪಡೆದುಕೊಳ್ಳಿ.

ಇದನ್ನೂ ಓದಿ: ನವೆಂಬರ್ 21ಕ್ಕೆ ಲಾಂಚ್ ಆಗಲಿದೆ ಕಡಿಮೆ ಬೆಲೆಯ Vivo 5G ಸ್ಮಾರ್ಟ್‌ಫೋನ್; ಬೆಲೆ, ಕ್ಯಾಮೆರಾ ಇನ್ನಿತರ ಮಾಹಿತಿ

click me!