ನವೆಂಬರ್ 21ಕ್ಕೆ ಲಾಂಚ್ ಆಗಲಿದೆ ಕಡಿಮೆ ಬೆಲೆಯ Vivo 5G ಸ್ಮಾರ್ಟ್‌ಫೋನ್; ಬೆಲೆ, ಕ್ಯಾಮೆರಾ ಇನ್ನಿತರ ಮಾಹಿತಿ

By Mahmad Rafik  |  First Published Nov 18, 2024, 1:07 PM IST

ವಿವೋ Y300 5G ಸ್ಮಾರ್ಟ್‌ಫೋನ್ ನವೆಂಬರ್ 21 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತಿರುವ ಈ ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ.


ಬೆಂಗಳೂರು: ನೀವೇನಾದ್ರೂ ಸ್ಮಾರ್ಟ್‌ಫೋನ್ ಖರೀದಿಸಲು ಪ್ಲಾನ್ ಮಾಡಿಕೊಂಡಿದ್ರೆ ನವೆಂಬರ್ 21ರವರೆಗೆ ಕಾಯೋದು ಒಳ್ಳೆಯದು. ನವೆಂಬರ್ 21ರಂದು ವಿವೋ ಕಂಪನಿ Y-Series ಸ್ಮಾರ್ಟ್‌ಫೋನ್‌ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದು Y300 5G ಆಗಿದ್ದು, ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಷ್ಟು ಮಾತ್ರವಲ್ಲದೇ Y300 5G ಸ್ಮಾರ್ಟ್‌ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ ಎಂದು ವಿವೋ ಹೇಳಿದೆ. 

ವಿವೋ ಕಂಪನಿಯ ಅಪ್‌ಕಮಿಂಗ್ ಸ್ಮಾರ್ಟ್‌ಫೋನ್‌ ಸ್ಲ್ಯಾನ್ ರೀತಿಯ ವಿನ್ಯಾಸವನ್ನು ಹೊಂದಿದೆ. ರಿಯಲ್ ಫ್ಲಾಟ್ ಪ್ಯಾನಲ್ ಹಿಂಭಾಗದಲ್ಲಿ ಲಭ್ಯವಿರುತ್ತದೆ. ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಒಳಗೊಂಡಿದ್ದು,  ಔರಾ ರಿಂಗ್ ಲೈಟ್ ಅನ್ನು ಸಹ ಹೊಂದಿದೆ. Vivo ತನ್ನ Y-ಸರಣಿಯ ಅಡಿಯಲ್ಲಿ ಬಜೆಟ್ ಫ್ರೆಂಡ್ಲಿ ಮತ್ತು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಗುರಿಯನ್ನು ಹೊಂದಿದೆ. 

Tap to resize

Latest Videos

undefined

Vivo Y300 ಸ್ಮಾರ್ಟ್‌ಫೋನ್‌ನ ಸಂಭಾವ್ಯ ವೈಶಿಷ್ಟ್ಯಗಳು
ವರದಿಗಳ ಪ್ರಕಾರ, Vivo Y300 5ಜಿ ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್‌ಪ್ಲೇ, ಫುಲ್ HD+ AMOLED ಮತ್ತು Qualcomm Snapdragon 4 Gen 2 ಪ್ರೊಸೆಸರ್ ಇರಲಿದೆ. ಇದರೊಂದಿಗೆ ರಿಯರ್ ಫೋಟೋಗ್ರಾಫಿಗಾಗಿ 50MP ಪ್ರೈಮರಿ ಮತ್ತು 8MP ಅಲ್ಟ್ರಾ ವೈಟ್ ಆಂಗಲ್ಮ ಕ್ಯಾಮೆರಾವನ್ನು ಒಳಗೊಂಡಿರಲಿದೆ. ಸೆಲ್ಫಿಗಾಗಿ 32MP ಸಾಮರ್ಥ್ಯದ ಫ್ರಂಟ್ ಕ್ಯಾಮೆರಾ ನೀಡಲಾಗಿದೆ. 

ಈ ಸ್ಮಾರ್ಟ್‌ಫೋನ್ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಇರಲಿದೆ ಎನ್ನಲಾಗಿದೆ. ಹಾಗೆ ಡಸ್ಟ್ ಆಂಡ್ ವಾಟರ್‌  ರೆಜಿಸ್ಟೆಂಟ್ಸ್‌ಗಾಗಿ IP64 ರೇಟೆಡ್ ನೀಡಲಾಗಿದೆ. Vivo Y300 ಸ್ಮಾರ್ಟ್‌ಫೋನ್ ಸ್ಟಿರಿಯೋ ಸ್ಪೀಕರ್ಸ್ ಮತ್ತು 80W ಫಾಸ್ಟ್ ಚಾರ್ಜಿಂಗ್ ಜೊತೆ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಕೆಲ ವರದಿಗಳ ಪ್ರಕಾರ, 8GB+256GB, 12GB+256GB ಮತ್ತು 12GB+512GB ವೇರಿಯಂಟ್‌ನಲ್ಲಿ Vivo Y300 ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸಿಗಲಿದೆ. ಸ್ಟೋರೇಜ್ ಸಾಮರ್ಥ್ಯದ ಮೇಲೆ ಬೆಲೆಗಳು ಬೇರೆ ಬೇರೆಯಾಗಲಿವೆ. ಈ ಸ್ಮಾರ್ಟ್‌ಫೋನ್ ಆನ್‌ಲೈನ್‌ ವೇದಿಕೆಯಾಗಿರುವ  ಫ್ಲಿಪ್‌ಕಾರ್ಟ್‌ ಮತ್ತು ವಿವೋ ಇಂಡಿಯಾ ಸ್ಟೋರ್ ಮೂಲಕ ಖರೀದಿಸಬಹುದು ಎಂದು ಕಂಪನಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ವಿವೋದಿಂದ ಬರ್ತಿದೆ ಮಿನಿ 5G ಸ್ಮಾರ್ಟ್‌ಫೋನ್; 250MP ಕ್ಯಾಮೆರಾ, 6000mAh ಬ್ಯಾಟರಿ

ಸ್ಮಾರ್ಟ್‌ಫೋನಿನ 128GB ಸ್ಟೋರೇಜ್ ಸಾಮರ್ಥ್ಯದ Vivo Y300 ಬೆಲೆ 21,000-22,000 ರೂ.ಯಲ್ಲಿ ಇರಲಿದೆ.  256GB ಸ್ಟೋರೇಜ್ ಫೋನ್ 24,000-25,000 ರೂ. ಆಸುಪಾಸಿನಲ್ಲಿ ಲಭ್ಯವಾಗಲಿದೆ. ಆದ್ರೆ ಕಂಪನಿ ತನ್ನ ಹೊಸ ಸ್ಮಾರ್ಟ್‌ಫೋನಿನ ಬೆಲೆಯನ್ನು ಬಹಿರಂಗಪಡಿಸಿಲ್ಲ.

ಹಕ್ಕು ನಿರಾಕರಣೆ: ಈ ಪುಟದಲ್ಲಿ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಈ ಸುದ್ದಿಯನ್ನು ಏಷ್ಯಾನೆಟ್‌ ಸುವರ್ಣನ್ಯೂಸ್‌ ದೃಢೀಕರಿಸುವದಿಲ್ಲ. 

ಇದನ್ನೂ  ಓದಿ: ನೋಕಿಯಾದಿಂದ ಕಡಿಮೆ ಬೆಲೆಯಲ್ಲಿ ಪವರ್‌ಫುಲ್ 5G ಸ್ಮಾರ್ಟ್‌ಫೋನ್; 108MP ಕ್ಯಾಮೆರಾ, 6000mAh ಬ್ಯಾಟರಿ

Step into a new era of style with the Titanium inspired design of the all new vivo Y300 5G. After all, titanium is the new cool.

Launching on 21st Nov, 12PMhttps://t.co/rdq4fkPNNs pic.twitter.com/8RaEPQaOH5

— vivo India (@Vivo_India)

vivo Y300 5G spotted in live photo

- Snapdragon 4 Gen 2
- 12/512GB
- 6.67" FullHD+ 120Hz AMOLED screen
- 5,000 mAh battery with 80W charging
- 50MP primary, 8MP ultrawide, and 32MP selfie
- IP64 rating pic.twitter.com/Cq35SO2QQ5

— Featurverse (@featurverse)
click me!