ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಯಾದಗಿರಿಯಲ್ಲಿ ಮತ್ತೊಬ್ಬ ಹಿಂದು ಯುವಕನ್ನ ಅನ್ಯಕೋಮಿನ ಯುವಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಿನ್ನೆ ರಾತ್ರಿ ಮನೆಗೆ ಬಂದು ರೊಟ್ಟಿ ಕೇಳಿದನೆಂಬ ಕ್ಷುಲ್ಲಕ ಕಾರಣಕ್ಕೆ ಮನೆಗೆ ನುಗ್ಗಿ ಫಯಾಜ್ ಮತ್ತವನ ಗ್ಯಾಂಗ್ ಯುವಕನನ್ನ ಮನೆಯವರ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡಿತ್ತು.
ಯಾದಗಿರಿ (ಏ.22): ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಯಾದಗಿರಿಯಲ್ಲಿ ಮತ್ತೊಬ್ಬ ಹಿಂದು ಯುವಕನ್ನ ಅನ್ಯಕೋಮಿನ ಯುವಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಿನ್ನೆ ರಾತ್ರಿ ಮನೆಗೆ ಬಂದು ರೊಟ್ಟಿ ಕೇಳಿದನೆಂಬ ಕ್ಷುಲ್ಲಕ ಕಾರಣಕ್ಕೆ ಮನೆಗೆ ನುಗ್ಗಿ ಫಯಾಜ್ ಮತ್ತವನ ಗ್ಯಾಂಗ್ ಯುವಕನನ್ನ ಮನೆಯವರ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡಿತ್ತು.
ನಿನ್ನೆ ರಾತ್ರಿಯೇ ಹತ್ಯೆ ನಡೆದಿದ್ದರೂ ಕೇಸ್ ದಾಖಲಿಸಿಕೊಳ್ಳದೇ ರಾಜೀ ಸಂಧಾನ ಮಾಡಲು ಮುಂದಾಗಿದ್ದ ಪೊಲೀಸರು. ಪೊಲೀಸರು ಕೇಸ್ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಕ್ಕೆ ಇಂದು ಬಿಜೆಪಿ, ಹಿಂದುಪರ ಸಂಘಟನೆಗಳು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು. ಹೋರಾಟದ ಎಚ್ಚರಿಕೆ ಹಿನ್ನೆಲೆ ಕೊಲೆಯಾದ ಯುವಕನ ತಾಯಿ ಮಂಜಮ್ಮ ನೀಡಿದ ದೂರನ್ನು ಪಡೆದು ತಡವಾಗಿ ಕೇಸ್ ದಾಖಲಿಸಿಕೊಂಡಿರುವ ಯಾದಗಿರಿ ನಗರ ಠಾಣೆ ಪೊಲೀಸರು.
undefined
ನೇಹಾ ಹಿರೇಮಠ್ ಕೊಲೆ ಬಳಿಕ, ಅನ್ಯಕೋಮಿನ ಫಯಾಜ್‌ನಿಂದ ಹಿಂದೂ ಯುವಕ ರಾಕೇಶ್ ಕೊಲೆ?
ದಲಿತ ಯುವಕನ ಹತ್ಯೆ ಬಳಿಕ ಘಟನೆಯನ್ನು ಪೊಲೀಸ್ ಇಲಾಖೆ ಮರೆಮಾಚಲು ಯತ್ನಿಸಿದ ಆರೋಪವೂ ಕೇಳಿಬಂದಿದೆ. ಭಾನುವಾರ ತಡರಾತ್ರಿಯೇ ಯುವಕನ ಹತ್ಯೆಯಾದರೂ ತಕ್ಷಣಕ್ಕೆ ಆರೋಪಿಗಳನ್ನ ಬಂಧಿಸದೇ ಮೃತ ಯುವಕನ ಪೋಷಕರು ದೂರು ಕೊಟ್ಟರೂ ದಾಖಲಿಸಿಕೊಳ್ಳದೇ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿದ್ದಾರೆಂದು ಆರೋಪ ಕೇಳಿಬಂದಿದೆ.
ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ
ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದು ಏಕೆ? ಕಾಂಗ್ರೆಸ್ ಸರ್ಕಾರದ ಒತ್ತಡವಿದೆಯೇ? ಪೊಲೀಸರಿಗೆ ಯಾರದ್ದಾದರೂ ಭಯ ಕಾಡುತ್ತಿದೆಯೇ? ಎಂದು ಹಿಂದೂಪರ ಸಂಘಟನೆಗಳು ಪ್ರಶ್ನಿಸಿವೆ. ಅನ್ಯಕೋಮಿನ ಯುವಕರು ಹಲ್ಲೆ, ಹತ್ಯೆ ಮಾಡಿದಾಗ ತಕ್ಷಣ ಕೇಸ್ ದಾಖಲಿಸಿಕೊಳ್ಳದೇ ಹಿಂದೇಟು ಹಾಕುತ್ತಿರುವ ಪೊಲೀಸ್ ಇಲಾಖೆಯ ನಡೆಯೇ ಸಂಶಯಕ್ಕೆ ಕಾರಣವಾಗಿದೆ. ಸಂತ್ರಸ್ತರನ್ನು ರಕ್ಷಿಸಬೇಕಾದ ಪೊಲೀಸರು ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.