ನೇಹಾ ಹಿರೇಮಠ್ ಕೊಲೆ ಬಳಿಕ, ಅನ್ಯಕೋಮಿನ ಫಯಾಜ್‌ನಿಂದ ಹಿಂದೂ ಯುವಕ ರಾಕೇಶ್ ಕೊಲೆ?
ಹುಬ್ಬಳ್ಳಿಯ ನೇಹಾ ಹಿರೇಮಠ್ ಕೊಲೆ ಘಟನೆ ಮಾಸುವ ಮುನ್ನವೇ ಯಾದಗಿರಿಯಲ್ಲಿ ಅನ್ಯಕೋಮಿನ ಫಯಾಜ್ ಅಂಡ್ ಗ್ಯಾಂಗ್‌ನಿಂದ ಹಿಂದೂ ಯುವಕ ರಾಕೇಶ್‌ನಲ್ಲಿ ಕೊಲೆ ಮಾಡಲಾಗಿದೆ.
ಯಾದಗಿರಿ (ಏ.22): ರಾಜ್ಯದ ಕಲ್ಯಾಣ ಕರ್ನಾಟಕ ಜಿಲ್ಲೆಯಾದ ಯಾದಗಿರಿ ಜಿಲ್ಲೆಯ ಶಹಾಪುರ ಪೇಟ್ ಬಡಾವಣೆಯಲ್ಲಿಯೂ ಅನ್ಯಕೋಮಿನ ಯುವಕರಿಂದ ಹಿಂದೂ ಯುವಕ ರಾಕೇಶ್‌ನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯದಲ್ಲಿ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆಯ ಘಟನೆ ಮಾಸುವ ಮುನ್ನವೇ, ಯಾದಗಿರಿಯಲ್ಲಿ ಅನ್ಯಕೋಮಿನ ಯುವಕರಿಂದ ಹಿಂದೂ ಯುವಕನನ್ನು ಕೊಲೆ ಮಾಡಿದ ಘಟನೆ ನಡೆದಿದೆ. ಈ ಘಟನೆಯು ಯಾದಗಿರಿ ನಗರದ ಶಹಾಪೂರ ಪೇಟ್ ಬಡಾವಣೆಯಲ್ಲಿ ನಡೆದಿದೆ. ಕೊಲೆಯಾದ ಯುವಕ ದಲಿತ ಸಮುದಾಯಕ್ಕೆ ಸೇರಿದ ರಾಕೇಶ್ (22) ಎಂದು ಗುರುತಿಸಲಾಗಿದೆ. ಈತನನ್ನು ಫಯಾಜ್ ಹಾಗೂ ಸಹಚರರಿಂದ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಿಂದು ಯುವಕನ ಹತ್ಯೆ ಮರೆಮಾಚಲು ಪೊಲೀಸ್ ಇಲಾಖೆ ಯತ್ನ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಬೆಂಗಳೂರು ಕದಂಬ ಹೋಟೆಲ್‌ನಲ್ಲಿ ಬಾಂಬ್ ಇಟ್ಟಿದ್ದೇನೆ; ರಾಮೇಶ್ವರಂ ಕೆಫೆಗೂ ಬಾಂಬ್ ಇಟ್ಟಿದ್ದು ನಾನೇ ಎಂದ ಅನಾಮಿಕ!
ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಹಾಪೂರ ಪೇಟ್ ಬಡಾವಣೆಯಲ್ಲಿ ನಿನ್ನೆ ತಡರಾತ್ರಿ ಹಿಂದೂ ಯುವಕ ರಾಕೇಶ್‌ನ ಕೊಲೆಯಾದ್ರೂ ಪೊಲೀಸರು ಕೇಸ್ ದಾಖಲಿಸಿಕೊಂಡಿಲ್ಲ. ಹೀಗಾಗಿ, ಹಿಂದು ಯುವಕನ ಕುಟುಂಬಕ್ಕೆ ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರು ಬೆಂಗಾವಲಾಗಿ ನಿಂತಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು ಬಿಜೆಪಿ ಕಾರ್ಯಕರ್ತರಿಂದ ದೊಡ್ಡ ಮಟ್ಟದ ಪ್ರತಿಭಟನೆ ವ್ಯಕ್ತವಾಗಬಹುದು ಎಂಬ ಸುಳಿವು ಸಿಕ್ಕ ಬೆನ್ನಲ್ಲಿಯೇ ಎಚ್ಚೆತ್ತುಕೊಂಡ ಪೊಲೀಸರು ಮೃತ ರಾಕೇಶನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡೊದ್ದಾರೆ.
ಗದಗ ಒಂದೇ ಕುಟುಂಬ ನಾಲ್ವರನ್ನು ಭೀಕರ ಹತ್ಯೆಗೈದ ಫಯಾಜ್ ಗ್ಯಾಂಗ್; ಹಿರಿ ಮಗನಿಂದಲೇ ಕುಟುಂಬದ ಕೊಲೆಗೆ ಸುಪಾರಿ!
ಅಂದರೆ, ಯಾದಗಿರಿಯಲ್ಲಿ ರಾತ್ರಿ ಕೊಲೆಯಾದ ಯುವಕನ ಮೃತ ದೇಹವನ್ನು 18 ಗಂಟೆಗಳ ಬಳಿಕ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಕುರಿತಂತೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಅವರು ಸ್ಥಳದಲ್ಲೇ ನಿಂತು ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಕೊಲೆಯ ಬಗ್ಗೆ ಮಾಹಿತಿ ಲಭ್ಯವಾಗಲಿದೆ.