ಜೆಡಿಎಸ್ ಪಕ್ಷ ಮುನ್ನಡೆಸೋರಿಲ್ಲದ ಕಾರಣ ದಳ ಶಾಸಕರನ್ನು ಕರೆತರೋದಾಗಿ ಹೇಳಿದೆ: ಶಾಸಕ ಯೋಗೇಶ್ವರ

By Sathish Kumar KH  |  First Published Nov 25, 2024, 3:53 PM IST

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಜೆಡಿಎಸ್ ಪಕ್ಷವನ್ನು ಕಟ್ಟಿದ್ದಾರೆ, ಆದರೆ ಈಗ ಅವರಿಗೆ ವಯಸ್ಸಾಗಿದ್ದರಿಂದ ಪಕ್ಷ ಮುನ್ನಡೆಸುವುದು ಕಷ್ಟವಾಗುತ್ತಿದೆ. ಕುಮಾರಸ್ವಾಮಿಗೆ ಕೊಟ್ಟರೆ ಕೇವಲ 19 ಸೀಟು ಗೆದ್ದು ಪಕ್ಷದ ಬಲ ಕ್ಷೀಣಿಸುವಂತೆ ಮಾಡಿದ್ದಾರೆ. ಹೀಗಾಗಿ, ನನಗೆ ಅವಕಾಶ ಕೊಟ್ಟರೆ ಎಲ್ಲ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬರುತ್ತೇನೆ ಎಂದು ಶಾಸಕ ಸಿ.ಪಿ.ಯೋಗೇಶ್ವರ ಹೇಳಿದ್ದಾರೆ.


ರಾಮನಗರ (ನ.25): ರಾಜ್ಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಜೆಡಿಎಸ್ ಪಕ್ಷವನ್ನು ಕಟ್ಟಿದ್ದಾರೆ. ಆದರೆ, ಈಗ ಅವರಿಗೆ ವಯಸ್ಸಾಗಿದ್ದರಿಂದ ಪಕ್ಷ ಮುನ್ನಡೆಸುವುದು ಕಷ್ಟವಾಗುತ್ತಿದೆ. ಜೊತೆಗೆ, ಪಕ್ಷವನ್ನು ಮುನ್ನಡೆಸಲು ಪರ್ಯಾಯ ನಾಯಕರೂ ಇಲ್ಲವಾಗಿದ್ದಾರೆ. ಇನ್ನು ಕುಮಾರಸ್ವಾಮಿಗೆ ಕೊಟ್ಟರೆ ಕೇವಲ 19 ಸೀಟು ಗೆದ್ದುವ ಮೂಲಕ ಪಕ್ಷದ ಬಲ ಕ್ಷೀಣಿಸುವಂತೆ ಮಾಡಿದ್ದಾರೆ. ಹೀಗಾಗಿ, ನನಗೆ ಟಾಸ್ಟ್ ಕೊಟ್ಟರೆ ಎಲ್ಲ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬರುತ್ತೇನೆ ಎಂದು ಪುನಃ ಶಾಸಕ ಸಿ.ಪಿ.ಯೋಗೇಶ್ವರ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಶಾಸಕ ಸಿ.ಪಿ. ಯೋಗೇಶ್ವರ ಅವರು, ಕುಮಾರಸ್ವಾಮಿ ಅವರು ಈಗಾಗಲೇ ನಗರವನ್ನು ಅದ್ವಾನ ಮಾಡಿದ್ದಾರೆ. ಅದೆಲ್ಲವನ್ನೂ ಸರಿಪಡಿಸಬೇಕು. ಇಲ್ಲಿ ಕುಮಾರಸ್ವಾಮಿ ಏನು ಆಸಕ್ತಿ, ಕ್ರಮ ಕೈಗೊಂಡಿಲ್ಲ. ಇಂದು ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ನಡೆಸಿ,ಸ್ವಚ್ಛತೆ ಮಾಡುವುದಕ್ಕೆ ಸೂಚನೆ ನೀಡುತ್ತೇನೆ. ಬಸ್ ಸ್ಟ್ಯಾಂಡ್, ರಸ್ತೆಗಳು, ಬೀದಿಗಳಲ್ಲಿ ಕಸ ಸ್ವಚ್ಚತೆ, ಯುಜಿಡಿ ಸಮಸ್ಯೆ ಸರಿಪಡಿಸಲಾಗುವುದು. ಮೊದಲು ಇವೆಲ್ಲವನ್ನೂ ಬಗೆಹರಿಸಬೇಕು. ನಂತರ, ನಿರಂತರವಾಗಿ ತಾಲ್ಲೂಕು ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದು ಹೇಳಿದರು.

Tap to resize

Latest Videos

undefined

ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಗೆ ಕರೆತರುವ ವಿಚಾರದ ಬಗ್ಗೆ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರ ನಾಯಕತ್ವದಲ್ಲಿ ಜೆಡಿಎಸ್ ಪಕ್ಷವನ್ನು ಹುಟ್ಟು ಹಾಕಿದ್ದಾರೆ. ಆದರೆ, ಈಗ ದೇವೆಗೌಡರಿಗೆ ವಯಸ್ಸಾಗಿರುವುದರಿಂದ ಪಕ್ಷ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಪರ್ಯಾಯವಾದ ನಾಯಕತ್ವ ಇಲ್ಲ. ಅದೊಂದು ಕುಟುಂಬ ಪಕ್ಷ‌. ಕುಮಾರಸ್ವಾಮಿ ಅವರು ಸೋತಿದ್ದಾರೆ. ಅವರ ನಾಯಕತ್ವದಲ್ಲಿ ಕಳೆದ‌ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸೀಟು ಪಡೆದುಕೊಂಡಿತ್ತು. ಅದೇ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 136 ಸೀಟು ಗೆಲ್ಲಿಸಿದ್ದಾರೆ. ಈ ಎರಡು ಹೋಲಿಕೆ ನೋಡಿದರ ಕುಮಾರಸ್ವಾಮಿ ನಾಯಕತ್ವ ಕ್ಷೀಣಿಸುತ್ತಿದೆ. ಇದಕ್ಕೆ ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ಹೇಳಿದರು.

ಇದನ್ನೂ ಓದಿ: ವಕ್ಫ್ ವಿರುದ್ಧ ಹೋರಾಟ ಮಾಡಲು ಹೋದವರಿಗೆ ಬಿಜೆಪಿಯಿಂದಲೇ ವಿರೋಧ!

ದೇವೇಗೌಡರ ಇಡೀ ಕುಟುಂಬವೇ ಹೋರಾಟ ಮಾಡಿದರೂ ಚನ್ನಪಟ್ಟಣದಲ್ಲಿ ಗೆಲ್ಲಲು ಸಾಧ್ಯ ಆಗಲಿಲ್ಲ. ಅವರ ನಂಬಿರೋ ಕಾರ್ಯಕರ್ತರು, ಬಹಳ ಜನ ಶಾಸಕರು ನೊಂದಿದ್ದಾರೆ. ಏನಾದರೂ ಮನಸ್ಸು ಮಾಡಿದರೆ, ಅವರಿಗೆ ಬೇರೆ ಅವಕಾಶ ನೀಡಲಾಗುವುದು. ಒಂದು ವೇಳೆ ತಪ್ಪಿದರೆ ನೋಡಬಹುದು. ಪಕ್ಷವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದರೂ ಇಲ್ಲಿ ಗೆಲ್ಲಲಾಗಲಿಲ್ಲ. ಇನ್ನು ಒಕ್ಕಲಿಗ ನಾಯಕತ್ವ ಬದಲಾವಣೆ ಆಗಬೇಕು. ಪರ್ಯಾಯವಾಗಿ ನಾಯಕತ್ವ ಹುಡುಕುತ್ತಾ ಇದ್ದಾರೆ. ಮುಂದೆ ಯಾರಿಗೆ ಅವಕಾಶ ಸಿಗುತ್ತದೆ ನೋಡೊಣ ಎಂದರು.

ದೇವೆಗೌಡರ ಕುಟುಂಬದಿಂದ ಆಚೆ ಬರಬೇಕು ಅಂತಾ ಸಮುದಾಯ ತೀರ್ಮಾನ ಮಾಡಿದೆ. ಈ ಚುನಾವಣೆ ಫಲಿತಾಂಶದಿಂದಲೇ ಗೊತ್ತಾಗಿದೆ. ಅವರ ಕುಟುಂಬದಲ್ಲಿ ನಡೆದಿರೋ ಹಲವಾರು ಬೆಳವಣಿಗೆಗಳಿಂದ ಸಮುದಾಯ ಬೇಸತ್ತಿದೆ. ಆ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕರಿಗೆ ನೋವಾಗಿದೆ ಅನ್ನೋ ಅರ್ಥದಲ್ಲಿ ಹೇಳಿದ್ದೇನೆ. ಅಲ್ಲಿರುವವರೆಲ್ಲಾ ನನ್ನ ಮಿತ್ರರು ಇದ್ದಾರೆ. ಹೀಗಾಗಿ, ಅವಕಾಶ ಸಿಕ್ಕಿದರೆ ಕಾಂಗ್ರೆಸ್ ಪಕ್ಷಕ್ಕೆ ಕರೆತರುವುದಾಗಿ ನೋಡೊಣವೆಂದು ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟನೆಯನ್ನು ನೀಡಿದರು.

ಇದನ್ನೂ ಓದಿ: ಕೈ ಪಡೆಯ ಬೈ ಎಲೆಕ್ಷನ್ ವಿಜಯ: ಸಿದ್ದು-ಡಿಕೆ ಜೋಡಿ ಮಂತ್ರದ ಗೆಲುವಿನ ಗುಟ್ಟೇನು?

click me!