ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಗ್ಯಾರಂಟಿಗಳ ಬಗ್ಗೆ ಭಾಷಣ ಮಾಡಲು ಮುಂದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅರ್ಧಕ್ಕೆ ಭಾಷಣ ನಿಲ್ಲಿಸಿ ಮುಜುಗರಕ್ಕೀಡಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು (ನ.25): ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಗ್ಯಾರಂಟಿಗಳ ಬಗ್ಗೆ ಭಾಷಣ ಮಾಡಲು ಮುಂದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅರ್ಧಕ್ಕೆ ಭಾಷಣ ನಿಲ್ಲಿಸಿ ಮುಜುಗರಕ್ಕೀಡಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಎಐಟಿ ವೃತ್ತದಲ್ಲಿ ಒಕ್ಕಲಿಗರ ಬೆಳ್ಳಿ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವ ಕೆಜೆ ಜಾರ್ಜ್. ಕಾರ್ಯಕ್ರಮದಲ್ಲಿ ಭಾಷಣ ವೇಳೆ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ಸಚಿವ. ಈ ವೇಳೆ ಒಕ್ಕಲಿಗ ಸಮಾಜದ ಯುವಕರು ಭಾಷಣದ ಮಧ್ಯೆ ಮಧ್ಯಪ್ರವೇಶ ಮಾಡಿ, ಇದು ರಾಜಕೀಯ ವೇದಿಕೆಯಲ್ಲಿ, ರಾಜಕೀಯ ಮಾತನಾಡೋದಾದ್ರೆ ವೇದಿಕೆಯಿಂದ ಕೆಳಗಿಳಿಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಒಕ್ಕಲಿಗರ ಕಾರ್ಯಕ್ರಮ ರಾಜಕೀಯ ಮಾಡಬೇಡಿ ಎಂದು ತಾಕೀತು ಮಾಡಿದ ಒಕ್ಕಲಿಗ ಯುವಕರು. ಇದರಿಂದ ನಿರ್ಮಲಾನಂದ ಶ್ರೀಗಳ ಎದುರೇ ಮುಜುಗರಕ್ಕೀಡಾದ ಸಚಿವರು ಸ್ಥಳದಲ್ಲೇ ಕ್ಷಮೆಯಾಚಿಸಿ ವೇದಿಕೆಯಿಂದ ಕೆಳಗಿಳಿದರು.
ಒಕ್ಕಲಿಗ ನಾಯಕತ್ವದಿಂದ ದೇವೇಗೌಡ ನಿರ್ಗಮಿಸಲಿ: ಸಿ.ಪಿ.ಯೋಗೇಶ್ವರ್
ಒಕ್ಕಲಿಗರ ಕಾರ್ಯಕ್ರಮದಲ್ಲಿ ರಾಜಕೀಯ ಮಾಡಬೇಡಿ ಎಂದ ಯುವಕರು, ಇತ್ತ ವೇದಿಕೆ ಮೇಲಿಂದಲೇ ನೀವು ರಾಜಕೀಯ ಮಾಡಬೇಡಿ ಎಂದು ಯುವಕರ ಮೇಲೆ ಸಿಟ್ಟಾದ ಸಚಿವ ಕೆಜೆ ಜಾರ್ಜ್. ನಿರ್ಮಲಾನಂದ ಶ್ರೀಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಸ್ವಾಮೀಜಿಯ ಮಧ್ಯ ಪ್ರವೇಶದಿಂದ ಯುವಕರು ಸುಮ್ಮನಾದರು.