ಮಲ್ಲಿಕಾರ್ಜುನ ಖರ್ಗೆ ತಾಯಿ, ತಂಗಿಗೆ ರಾಜಾಕಾರರು ಹೊಡೆದು ಹಾಕಿದ್ದಾರೆ. ಆದರೂ ರಜಾಕಾರರು ಮುಸ್ಲಿಮರಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. ಹಾಗಾದ್ರೆ ರಜಾಕಾರರು ಏನು ಲಿಂಗಾಯತರ? ಬ್ರಾಹ್ಮಣರಾ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.
ಬೀದರ್ (ನ.25): ಮಲ್ಲಿಕಾರ್ಜುನ ಖರ್ಗೆ ತಾಯಿ, ತಂಗಿಗೆ ರಾಜಾಕಾರರು ಹೊಡೆದು ಹಾಕಿದ್ದಾರೆ. ಆದರೂ ರಜಾಕಾರರು ಮುಸ್ಲಿಮರಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. ಹಾಗಾದ್ರೆ ರಜಾಕಾರರು ಏನು ಲಿಂಗಾಯತರ? ಬ್ರಾಹ್ಮಣರಾ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.
ಇಂದು ಬೀದರ್ ನಲ್ಲಿ ನಡೆದ ವಕ್ಫ್ ಭೂಕಬಳಿಕೆ ವಿರೋಧಿ ಜನ ಜಾಗೃತಿ ಹೋರಾಟ ಸಮಾವೇಶದಲ್ಲಿ ಮಾತನಾಡಿದ ಯತ್ನಾಳ್ ಅವರು, ದಿನಾ ಒಬ್ಬರ ಕಾಲಿಗೆ ಬಿದ್ದು ಅಪ್ಪಾಜಿ ಅನ್ನೋರು ನಾವಲ್ಲ. ನಮಗೆ ಎದುರಿಗೆ ಕುಂತವರೇ ತಾಯಿ- ತಂದೆ ಎಂದು ಶಾಸಕ ಸಲಗರಗೆ ಯತ್ನಾಳ ತೀರುಗೇಟು ನೀಡಿದರು ಮುಂದುವರಿದು, ಲಫಂಗರಿಗೆ ನಾವು ಕಾಲಿಗೆ ಬೀಳೋದೇ ಇಲ್ಲ. ಮೋದಿನೇ ಹೇಳಿದ್ದಾರೆ ಯಾರ ಕಾಲಿಗೆ ಬೀಳೋದು ಬೇಡ ಎಂದು. ನಾನು ಕೇವಲ ಒಬ್ಬ ವ್ಯಕ್ತಿಗೆ, ಅದು ಮಾಜಿ ಪ್ರಧಾನಿ, ಅಜಾತ ಶತ್ರು ವಾಜಪೇಯಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಬಿಎಸ್‌ವೈಗೆ ಲಫಂಗ್ ಎಂದ ಯತ್ನಾಳ್.
ಒಕ್ಕಲಿಗರ ಕಾರ್ಯಕ್ರಮದಲ್ಲಿ ಗ್ಯಾರಂಟಿ ಭಾಷಣ; ನಿರ್ಮಲಾನಂದಶ್ರೀಗಳ ಎದುರೇ ಇಂಧನ ಸಚಿವ ಕೆಜೆ ಜಾರ್ಜ್ ಗೆ ಮುಜುಗರ!
ಈ ಹಿಂದೆ ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಮಾಡಿಕೊಟ್ಟಿದ್ದಾರೆ. ಈಗ ಮತ್ತೆ ವಕ್ಫ್ ಬೋರ್ಡ್ ಸಪೋರ್ಟ್ ಮಾಡಿದ್ರೆ ಧರ್ಮ ಯುದ್ಧ ಆಗುತ್ತದೆ. ಭಾರತದ ಮೊದಲ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಆಗಬೇಕಿತ್ತು ಆದರೆ ಈ ಅಯೋಗ್ಯ ನೆಹರೂ ಪ್ರಧಾನಿ ಆದ ಪರಿಣಾಮ ವಕ್ಫ್ ಬೋರ್ಡ್ ಇವತ್ತು ಇಷ್ಟು ಬೆಳೆದಿದೆ. ಮುಸ್ಲಿಂ ಐಎಎಸ್ ಅಧಿಕಾರಿ ಎಲ್ಲೆಲ್ಲಿ ಕೆಲಸ ಮಾಡಿ ಹೋಗಿದ್ದಾರೆ. ಅಲ್ಲೆಲ್ಲ ವಕ್ಫ್ ಬೋರ್ಡ್‌ಗೆ ಆಸ್ತಿ ಮಾಡಿಕೊಟ್ಟಿದ್ದಾರೆ.ನಾಲ್ಕೈದು ತಲೆ ಮಾರಿನಿಂದ ಉಳುಮೆ ಮಾಡಿಕೊಂಡ ಬಂದ ಭೂಮಿ ವಕ್ಫ್ ಆಸ್ತಿ ಅಂತಾರೆ. ವಕ್ಫ್ ಬೋರ್ಡ್ ತಿದ್ದುಪಡಿ ಬಿಲ್ ಅಷ್ಟು ಸರಳವಾಗಿ ಪಾಸ್ ಆಗಲ್ಲ. ಅವರು ಬೆಂಕಿ ಹಚ್ಚುತಾರೆ ನೀವು ಮನೆಯಲ್ಲಿ ಕೂಡುವ ಹಾಗಿಲ್ಲ. ಇವತ್ತು ಸ್ಥಳೀಯ ಶಾಸಕರೇ ಹೋರಾಟಕ್ಕೆ ಬಂದಿಲ್ಲ ಎಂದು ಕಿಡಿಕಾರಿದರು.