ಸಂತೋಷ್‌ ಆತ್ಮ​ಹತ್ಯೆ ಕೇಸ್‌: ವಿವರಣೆ ಪಡೆದ ಪ್ರಧಾನಿ ಮೋದಿ

By Girish GoudarFirst Published Apr 14, 2022, 1:45 PM IST
Highlights

*  ಬಿ.ಎ​ಲ್‌.​ಸಂತೋ​ಷ್‌​ರನ್ನು ಕರೆಸಿ ವಿವರ ಪಡೆ​ದ ಮೋದಿ
*  ಬಿಜೆಪಿ ಪಾಲಿಗೆ ಮುಜು​ಗರ ತಂದಿಟ್ಟ ಸಂತೋಷ್‌ ಆತ್ಮಹತ್ಯೆ ಕೇಸ್‌
*  ಸಂತೋಷ್‌ ಆತ್ಮಹತ್ಯೆ ಹಿಂದೆ ದೊಡ್ಡ ಕೈವಾಡ 

ನವ​ದೆ​ಹ​ಲಿ(ಏ.14): ಬಿಜೆಪಿ ಪಾಲಿಗೆ ತೀವ್ರ ಮುಜು​ಗರ ಸೃಷ್ಟಿ​ಸಿ​ರುವ ಗುತ್ತಿ​ಗೆ​ದಾರ ಸಂತೋಷ್‌ ಪಾಟೀಲ್‌ ಆತ್ಮ​ಹತ್ಯೆ(Santosh Patiil Suicide) ಪ್ರಕ​ರ​ಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಬುಧ​ವಾರ ಪಕ್ಷದ ಪ್ರಧಾನ ಕಾರ್ಯ​ದರ್ಶಿ ಬಿ.ಎ​ಲ್‌.​ಸಂತೋ​ಷ್‌​ರನ್ನು(BL Santosh) ಕರೆಸಿ ವಿವರ ಪಡೆ​ದಿದ್ದಾ​ರೆ.

ಪೂರ್ವ​ನಿ​ರ್ಧ​ರಿತ ಕಾರ್ಯ​ಕ್ರ​ಮ​ದಂತೆ ಸಂತೋಷ್‌ ಜೀ ಅವರು ಪ್ರಧಾನಿ ಅವ​ರನ್ನು ಭೇಟಿ​ಯಾದ ವೇಳೆ ರಾಜ್ಯದ(Karnataka) ಬೆಳ​ವ​ಣಿ​ಗೆ​ಗಳು ಚರ್ಚೆಗೆ ಬಂತು. ಈ ವೇಳೆ ಸಂತೋಷ್‌ ಪಾಟೀಲ ಅವರ ಆತ್ಮ​ಹ​ತ್ಯೆ ಹಾಗೂ ಪ್ರಕ​ರ​ಣ​ದಲ್ಲಿ ಗ್ರಾಮೀ​ಣಾ​ಭಿ​ವೃದ್ಧಿ ಸಚಿವ ಕೆ.ಎ​ಸ್‌.​ಈ​ಶ್ವ​ರಪ್ಪ(KS Eshwarappa) ಅವರ ಪಾತ್ರದ ಕುರಿತು ಪ್ರಧಾನಿ ಅವರು ಮಾಹಿತಿ ಪಡೆ​ದು​ಕೊಂಡರು ಎನ್ನ​ಲಾ​ಗಿದೆ. ಈ ಮಧ್ಯೆ, ಘಟ​ನೆಗೆ ಸಂಬಂಧಿಸಿ ಬಿಜೆಪಿ ರಾಜ್ಯಾ​ಧ್ಯಕ್ಷ ಜೆ.ಪಿ.​ನಡ್ಡಾ(JP Nadda) ಅವರು ರಾಜ್ಯ ಬಿಜೆಪಿ ಘಟ​ಕ​ದಿಂದ ವರದಿ ಕೇಳಿ​ದ್ದಾರೆ ಎನ್ನ​ಲಾ​ಗಿ​ದೆ.

Latest Videos

ಸಂತೋಷ್‌ ಸೂಸೈಡ್‌ ಕೇಸ್‌: ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಸಿಎಂ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಯತ್ನ

ಸಂತೋಷ್‌ ಆತ್ಮಹತ್ಯೆ ಹಿಂದೆ ದೊಡ್ಡ ಕೈವಾಡ-ಅರುಣ್‌ ಸಿಂಗ್‌

ಬೆಳಗಾವಿ: ಬೆಳಗಾವಿ(Belagavi) ಗುತ್ತಿಗೆದಾರ ಸಂತೋಷ ಪಾಟೀಲ್‌ ಆತ್ಮಹತ್ಯೆ ಹಿಂದೆ ದೊಡ್ಡ ಕೈವಾಡ ಇದ್ದು ಸಚಿವ ಈಶ್ವರಪ್ಪ ರಾಜೀನಾಮೆಗೆ ಸಂಬಂಧಿಸಿದಂತೆ ನಡೆದಿರುವ ಎಲ್ಲ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಪಡೆದುಕೊಂಡು ಹೈಕಮಾಂಡ್‌ಗೆ ವರದಿ ನೀಡಲಾಗುವುದು. ಜೊತೆಗೆ ಅವರ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳ ಸಂಬಂಧ ಶೀಘ್ರವೇ ಕ್ರಮ ವಹಿಸಲಾಗುವುದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್‌(Arun Singh) ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ತನಿಖೆ ನಡೆಸುವುದಾಗಿ ಹೇಳಿದ್ದಾರೆ. 40 ಪರ್ಸೆಂಟೇಜ್‌ ಕಮಿಷನ್‌(40 Percent Commission) ವಿಚಾರದ ಹಿಂದೆ ಹಲವಾರು ಕೋನಗಳಿವೆ ಎಂದರು.

ಸಂತೋಷ್‌ ಆತ್ಮಹತ್ಯೆ ಪ್ರಕರಣ: ಸಚಿವ ಈಶ್ಚರಪ್ಪ ರಾಜೀನಾಮೆಗೆ ಪಕ್ಷದೊಳಗೆ ಒತ್ತಾಯ

ದೊಡ್ಡ ಕೈವಾಡದ ಶಂಕೆ: 

ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ಹಿಂದೆ ದೊಡ್ಡ ಕೈವಾಡ ಇದೆ. ಕರ್ನಾಟಕದಲ್ಲಿ ನಡೆದಿರುವುದು ಸಣ್ಣ ಘಟನೆಯೇನೂ ಅಲ್ಲ. ಇದರ ಹಿಂದೆ ಖಂಡಿತವಾಗಿಯೂ ದೊಡ್ಡ ಕೈವಾಡದ ಶಂಕೆ ವ್ಯಕ್ತವಾಗುತ್ತಿದೆ. ಸಾವಿನ ಮನೆಯಲ್ಲಿ ಕಾಂಗ್ರೆಸ್‌(Congress) ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ರಾಜಸ್ಥಾನದಲ್ಲಿ(Rajashthan) ದಲಿತರ(Dalit) ಹತ್ಯೆಯಾಗಿದೆ. ರಾಜಸ್ಥಾನದ ಕರೋಲಿಯಲ್ಲಿ ಆ್ಯಂಬುಲೆನ್ಸ್‌ನಲ್ಲಿ ಮಹಿಳೆಯರ ಕೊಲೆ, ಅತ್ಯಾಚಾರವಾಗಿದೆ. ದವಲಪುರ, ಸವಾಯಿ, ಮಾಧವಪುರದಲ್ಲಿ ದುರ್ಘಟನೆಗಳು ನಡೆದರೂ ಅಲ್ಲಿಗೆ ಸುರ್ಜೇವಾಲ ಭೇಟಿ ನೀಡಿಲ್ಲ. ಸುರ್ಜೇವಾಲ ಇಲ್ಲಿಗೆ ಬರುವುದು ಬಿಟ್ಟು ಮೊದಲು ರಾಜಸ್ಥಾನಕ್ಕೆ ಹೋಗಬೇಕಿದೆ. ಪ್ರಿಯಾಂಕಾ ಗಾಂಧಿ ಘಟನೆ ನಡೆದ ಸ್ಥಳದಿಂದ ಕೊಂಚ ದೂರವಿದ್ದರೂ ಅವರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಅರುಣ ಸಿಂಗ್‌ ಆರೋಪಿಸಿದರು.
 

click me!