ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರ, ಕರ್ನಾಟಕದ ಅಯೋಧ್ಯೆ ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿಯಲ್ಲಿ ನವಂಬರ್ 4 ರಿಂದ 10ರವರೆಗೆ ದತ್ತಮಾಲಾ ಅಭಿಯಾನದ ಸಂಭ್ರಮ. ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಆಯೋಜಿಸಿರೋ 21ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಶ್ರೀರಾಮಸೇನೆ ಸಂಘಟನೆ ಸಕಲ ಸಿದ್ಧತೆ ಮಾಡಿಕೊಳ್ತಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಅ.7) : ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರ, ಕರ್ನಾಟಕದ ಅಯೋಧ್ಯೆ ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿಯಲ್ಲಿ ನವಂಬರ್ 4 ರಿಂದ 10ರವರೆಗೆ ದತ್ತಮಾಲಾ ಅಭಿಯಾನದ ಸಂಭ್ರಮ. ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಆಯೋಜಿಸಿರೋ 21ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಶ್ರೀರಾಮಸೇನೆ ಸಂಘಟನೆ ಸಕಲ ಸಿದ್ಧತೆ ಮಾಡಿಕೊಳ್ತಿದೆ.
undefined
ಅಭಿಯಾನದಲ್ಲಿ ಮಾಧವಿ ಲತಾ ಭಾಗಿ?
ಈ ಬಾರಿಯ ಶ್ರೀ ರಾಮಸೇನಾ ನೇತೃತ್ವದಲ್ಲಿ ನಡೆಯುವ ದತ್ತಮಾಲಾ ಅಭಿಯಾನದಲ್ಲಿ ಮಾಜಿ ಸಚಿವ ಸಿ.ಟಿ.ರವಿ, ಮೈಸೂರು ಮಾಜಿ ಎಂಪಿ ಪ್ರತಾಪ್ ಸಿಂಹ ಜೊತೆ ಹೈದ್ರಾಬಾದ್ ಎಂಪಿ ಎಲೆಕ್ಷನ್ನಲ್ಲಿ ಓವೈಸಿ ವಿರುದ್ಧ ನಿಂತಿದ್ದ ಬಿಜೆಪಿಯ ಮಾಧವಿ ಲತಾ ಪಾಲ್ಗೊಳ್ಳಲಿದ್ದಾರಂತೆ. ಈ ಬಾರಿ 5 ರಿಂದ 6 ಸಾವಿರ ಕಾರ್ಯಕರ್ತರು ದತ್ತಮಾಲಾಧಾರಣೆ ಮಾಡಲಿದ್ದಾರೆ. ದತ್ತಪೀಠ ಸಂಪೂರ್ಣ ಹಿಂದೂ ಪೀಠವಾಗಬೇಕು. ಅಲ್ಲಿರುವ ಗೋರಿಗಳನ್ನ ನಾಗೇನಹಳ್ಳಿಗೆ ಸ್ಥಳಾಂತರಿಸಬೇಕು. ದತ್ತಪೀಠದಲ್ಲಿ ಮೌಲ್ವಿಗಳು ಬೇರೆ-ಬೇರೆ ಚಟುವಟಿಕೆ ಮಾಡ್ತಿದ್ದಾರೆ. ಅದೆಲ್ಲವೂ ಬಂದ್ ಆಗಿ, ದತ್ತಪೀಠದಲ್ಲಿ ದೇವರಿಗೆ ಇದ್ದ ಆಭರಣ ಹಾಗೂ ಆಸ್ತಿ ಎಲ್ಲವೂ ದತ್ತಾತ್ರೇಯರಿಗೆ ಸೇರಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದೂ ವಿರೋಧಿ ಸರ್ಕಾರಕ್ಕೆ ಹೆದರಬೇಡಿ; ಡಿಜೆ ಹಚ್ಚಿಯೇ ಗಣೇಶೋತ್ಸವ ಮಾಡಿ; ಯುವಕ ಮಂಡಳಿತಗೆ ಮುತಾಲಿಕ್ ಕರೆ
ಪ್ರಮುಖ ನಾಯಕರಿಗೆ ಶ್ರೀರಾಮಸೇನೆ ಆಹ್ವಾನ :
ಈ ವರ್ಷ ಶ್ರೀರಾಮಸೇನೆಯ ದತ್ತಮಾಲಾಧಾರಣೆ, ವಿಎಚ್ಪಿ-ಬಜರಂಗದಳದ ದತ್ತಜಯಂತಿಗೆ ಹೊಸ ಮೆರುಗು ಬರಲಿದೆ. ಏಕೆಂದರೆ, ಶ್ರೀರಾಮಸೇನೆಯ ದತ್ತಮಾಲಾಧಾರಣೆ ಕಾರ್ಯಕ್ರಮದಲ್ಲಿ ಸಿ.ಟಿ.ರವಿ, ಪ್ರತಾಪ್ ಸಿಂಹ ಭಾಗಿಯಾದ್ರೆ ಅಧಿಕಾರ ಹಾಗೂ ಹಿಂದುತ್ವದ ಉಳಿವಿಗಾಗಿ ಎಲ್ಲರೂ ಮತ್ತೆ ಒಂದಾಗಲಿದ್ದಾರೆ ಎಂದು ಹೇಳಲಾಗಿದೆ. ಯಾಕಂದ್ರೆ, ಬಿಜೆಪಿಯ ಚಾರ್ ಸೌ ಪಾರ್, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತ ಹೊರಟಿದ್ರು ಆದರೆ, ಅದ್ಯಾವುದು ವರ್ಕೌಟ್ ಆಗಿಲ್ಲ. ರಾಜ್ಯದಲ್ಲೂ ಅಧಿಕಾರ ಕಳ್ಕೊಂಡ್ರು, ಕೇಂದ್ರದಲ್ಲೂ ನಿರೀಕ್ಷಿತ ಗುರಿ ಮುಟ್ಟಿಲ್ಲ. ಇದರಿಂದ ಎಲ್ಲರೂ ಭವಿಷ್ಯಕ್ಕಾಗಿ ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ ಅನ್ಸತ್ತೆ. ಹಾಗಾಗಿ, ಶ್ರೀರಾಮಸೇನೆ ಕೂಡ ಹಿಂದೂ ಅನ್ನೋ ಹೆಸರಿನಲ್ಲಿ ಎಲ್ಲರಿಗೂ ಆಹ್ವಾನ ನೀಡಿದೆ.
ವಿಜಯೇಂದ್ರ ಇನ್ನೂ ಎಳಸು ಅವರಿಂದ ಕಲಿಯಬೇಕಾದ್ದು ಏನೂ ಇಲ್ಲ: ಈಶ್ವರಪ್ಪ ವಾಗ್ದಾಳಿ
ಬಜರಂಗದಳ-ವಿಎಚ್ಪಿ ನಮಗೆ ಆಹ್ವಾನ ಕೊಡಲೇಬೇಕು ಅಂತೇನಿಲ್ಲ. ಹಿಂದೂ ಎಂಬ ನಮ್ಮ ಮನೆ ಕಾರ್ಯಕ್ರಮ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ತಿಳಿಸಿದ್ದಾರೆ. ಒಟ್ಟಾರೆ, ದಶಕಗಳಿಂದ ಹಿಂದುತ್ವದ ಹೋರಾಟದ ಕಾರ್ಯಕರ್ತರಲ್ಲೇ ಎರಡು ಗುಂಪುಗಳಾಗಿದ್ವು. ಇಬ್ಬರ ಉದ್ದೇಶ ಒಂದೇ ಆದ್ರೂ ಹೋರಾಟ-ಕಾರ್ಯಕ್ರಮ-ಪೂಜೆ-ಪುನರಸ್ಕಾರಗಳು ಬೇರೆ-ಬೇರೆಯಾಗಿದ್ವು. ಆದ್ರೀಗ, ಕಾರಣವೇನೋ ಗೊತ್ತಿಲ್ಲ. ಆದ್ರೆ, ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ. ಕಾರ್ಯಕರ್ತರಲ್ಲೂ ನಾವೆಲ್ಲಾ ಒಂದು, ನಾವೆಲ್ಲಾ ಹಿಂದೂ ಎಂಬ ಭಾವನೆ ಮೂಡಿದೆ.