ನಮ್ಮ ಮೆಟ್ರೋದಲ್ಲಿ ಕಂಠಪೂರ್ತಿ ಕುಡಿದು ಗಲಾಟೆ; ಓರ್ವ ಪ್ರಯಾಣಿಕ ಪೊಲೀಸರ ವಶಕ್ಕೆ

By Ravi Janekal  |  First Published Oct 7, 2024, 8:20 PM IST

ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಪಾನಮತ್ತ ಪ್ರಯಾಣಿಕರು ಹೆಚ್ಚುತ್ತಿರುವುದು ಬಿಎಂಆರ್‌ಸಿಎಲ್‌ಗೆ ತಲೆನೋವಾಗಿ ಪರಿಣಮಿಸಿದೆ. ಮೆಟ್ರೋದಲ್ಲಿ ಕುಡಿದು ಪ್ರಯಾಣ ಮಾಡುವುದು ನಿಷೇಧಿಸಿದ್ದರೂ ಮದ್ಯ ಸೇವಿಸಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಕುಡಿದು ಮೆಟ್ರೋದಲ್ಲಿ ಪ್ರಯಾಣಿಕರೊಂದಿಗೆ ಕಿರಿಕಿರಿ ಮಾಡುವುದು ಹೆಚ್ಚುತ್ತಿದೆ. ಇದೀಗ ಮತ್ತೊಂದು ಅಂತಹದ್ದೇ ಘಟನೆ ಮರುಕಳಿಸಿದೆ.


ಬೆಂಗಳೂರು ( ಅ.7) ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಪಾನಮತ್ತ ಪ್ರಯಾಣಿಕರು ಹೆಚ್ಚುತ್ತಿರುವುದು ಬಿಎಂಆರ್‌ಸಿಎಲ್‌ಗೆ ತಲೆನೋವಾಗಿ ಪರಿಣಮಿಸಿದೆ. ಮೆಟ್ರೋದಲ್ಲಿ ಕುಡಿದು ಪ್ರಯಾಣ ಮಾಡುವುದು ನಿಷೇಧಿಸಿದ್ದರೂ ಮದ್ಯ ಸೇವಿಸಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಕುಡಿದು ಮೆಟ್ರೋದಲ್ಲಿ ಪ್ರಯಾಣಿಕರೊಂದಿಗೆ ಕಿರಿಕಿರಿ ಮಾಡುವುದು ಹೆಚ್ಚುತ್ತಿದೆ. ಇದೀಗ ಮತ್ತೊಂದು ಅಂತಹದ್ದೇ ಘಟನೆ ಮರುಕಳಿಸಿದೆ.

ಕುಡಿದ ಅಮಲಿನಲ್ಲಿ ಮೆಟ್ರೋ ಭದ್ರತಾ ಸಿಬ್ಬಂದಿ ಜೊತೆ ಕಿರಿಕ್ ಮಾಡಿಕೊಂಡ ಇಬ್ಬರು ಪ್ರಯಾಣಿಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನೆನ್ನೆ ಸಂಜೆ 7 ಗಂಟೆ ಸುಮಾರಿಗೆ ವೈಟ್ ಫಿಲ್ಡ್/ ಕಾಡುಗೋಡಿ ಟ್ರೀ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

Tap to resize

Latest Videos

undefined

ಕಂಠಪೂರ್ತಿ ಕುಡಿದು ಮೆಟ್ರೋದ ನೆರಳೆ ಮಾರ್ಗದ ಟ್ರೈನ್‌ನಲ್ಲಿ ಪ್ರಯಾಣಿಸಲು ಮುಂದಾಗಿದ್ದ ಇಬ್ಬರು ವ್ಯಕ್ತಿಗಳು. ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಮದ್ಯ ಸೇವಿಸಿರುವುದು ಗಮನಕ್ಕೆ ಬಂದಿದೆ. ಒಳಹೋಗಲು ಯತ್ನಿಸಿದ ವ್ಯಕ್ತಿಗಳನ್ನು ಸೆಕ್ಯೂರಿಟಿ ಗಾರ್ಡ್ ತಡೆದಿದ್ದಾರೆ. ಗಲಾಟೆ ಮಾಡಿ ಸೆಕ್ಯೂರಿಟಿ ಗಾರ್ಡ್‌ ಮೇಲೆ ಕುಡುಕರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ನಮ್ಮ ಮೆಟ್ರೋ ಪ್ರಯಾಣ ಟಿಕೆಟ್ ದರ ಹೆಚ್ಚಳ: ಸಾರ್ವಜನಿಕರ ಸಲಹೆ ಕೇಳಿದ ಬಿಎಂಆರ್‌ಸಿಎಲ್

ಮಹಿಳಾ ಸಿಬ್ಬಂದಿಗೆ ನಿಂದನೆ:

ಕುಡಿದು ಮೆಟ್ರೋ ಪ್ರವೇಶಿಸಿರುವ ಮೂವರು ಪಾನಮತ್ತ ವ್ಯಕ್ತಿಗಳು. ಟಿಕೆಟ್ ಪಡೆಯುವ ವೇಳೆ ಮಹಿಳಾ ಸಿಬ್ಬಂದಿಗೆ ಅವಾಚ್ಯ ಭಾಷೆಯಿಂದ ನಿಂದಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಸ್ಥಳಕ್ಕೆ ಬಂದ ಸೆಕ್ಯೂರಿಟಿ ಗಾರ್ಡ್ ಗಳ ಜೊತೆಗೂ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ. ಪೊಲೀಸರಿಗೆ ಕರೆ ಮಾಡಿದ ಸಿಬ್ಬಂದಿ. ನಾಲ್ವರು ವ್ಯಕ್ತಿಗಳ ಪೈಕಿ ಮೂವರು ತಪ್ಪಿಸಿಕೊಂಡಿದ್ದು ಓರ್ವನನ್ನು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ವಶಕ್ಕೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಕಾಡುಗೋಡಿ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಬಿಎಂಆರ್ ಸಿಎಲ್ ನಿಂದ ದೂರು ದಾಖಲಿಸಿದೆ.

click me!