Published : Aug 03, 2025, 07:19 AM ISTUpdated : Aug 03, 2025, 10:53 PM IST

Karnatata Latest News Live: ಓವಲ್ ಟೆಸ್ಟ್ 4ನೇ ದಿನದಾಟ ಅಂತ್ಯ, ಗೆಲುವಿಗೆ 35 ರನ್ ಸಾಕಿದ್ದರೂ ಇಂಗ್ಲೆಂಡ್‌ಗೆ ನಿದ್ದೆಯಿಲ್ಲ

ಸಾರಾಂಶ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅನಾಮಿಕ ದೂರುದಾರ ಗುರುತಿಸಿರುವ 9 ಮತ್ತು 10ನೇ ಸಂಖ್ಯೆಯ ಜಾಗದಲ್ಲಿ ಶನಿವಾರ ಉತ್ಪನನ ನಡೆಸಿದ್ದು, ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಭಾನುವಾರ, ರಜೆಯ ದಿನವಾಗಿದ್ದು, ಕಾರ್ಯಾಚರಣೆ ನಡೆಯುವುದು ಅನುಮಾನವಾಗಿದೆ. ಉತ್ಪನನ ಕಾರ್ಯಾಚರಣೆಯ 5ನೇ ದಿನವಾದ ಶನಿವಾರ, ಬೆಳಗ್ಗೆ 11.4 5ರ ಸುಮಾರಿಗೆ ಅನಾಮಿಕ ತೋರಿಸಿದ 9ನೇ ಪಾಯಿಂಟ್‌ನಲ್ಲಿ ಅಗೆತ ನಡೆಸಲಾಯಿತು. ಗ್ರಾಮದ ನೇತ್ರಾವತಿ ಸ್ಥಾನಘಟ್ಟದ ಸನಿಹ, ರಾಜ್ಯ ಹೆದ್ದಾ ರಿಯ ಪಕ್ಕದಲ್ಲೇ ಈ ಜಾಗವಿದೆ. ಮತ್ತೊಂದೆಡೆ ನೂರಾರು ಶವ ಹೂತ ಆರೋಪದ ತನಿಖೆ ನಡೆಸುತ್ತಿವ ವಿಶೇಷ ತನಿಖಾ ತಂಡದ ಓರ್ವ ಅಧಿಕಾರಿ ದೂರುದಾರನಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಈ ಕುರಿತು ದೂರುದಾರನ ಪರ ವಕೀಲರು ಎಸ್‌ಐಟಿ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ. ಇನ್‌ಸ್ಪೆಕ್ಟರ್ ಹಂತದ ಅಧಿಕಾರಿ ದೂರು ವಾಪಸ್ ಪಡೆಯುವಂತೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

Team India

10:53 PM (IST) Aug 03

ಓವಲ್ ಟೆಸ್ಟ್ 4ನೇ ದಿನದಾಟ ಅಂತ್ಯ, ಗೆಲುವಿಗೆ 35 ರನ್ ಸಾಕಿದ್ದರೂ ಇಂಗ್ಲೆಂಡ್‌ಗೆ ನಿದ್ದೆಯಿಲ್ಲ

ಓವಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಕೇವಲ 35 ರನ್ ಸಾಕು. ಭಾರತಕ್ಕೆ 4 ವಿಕೆಟ್ ಅವಶ್ಯಕತೆ ಇದೆ. ಆದರೆ ಇಂಗ್ಲೆಂಡ್ ತಂಡ ಇಂದು ಸರಿಯಾಗಿ ನಿದ್ದೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ.

Read Full Story

10:08 PM (IST) Aug 03

ಬೆಂಗಳೂರು-ಕೋಲ್ಕತಾ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ, ಹಾರಾಟ ನಡುವೆ ತಾಂತ್ರಿಕ ದೋಷ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಿಂದ ಟೇಕ್ ಆಫ್ ಆದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ಆಂಧ್ರ ಪ್ರದೇಶ ಗಡಿಯಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

 

Read Full Story

09:30 PM (IST) Aug 03

ಕೊನೆಗೂ ವಿರಾಟ್ ಕೊಹ್ಲಿ ಜೊತೆಗಿನ ಡೇಟಿಂಗ್ ಅಸಲಿ ಕತೆ ಬಿಚ್ಚಿಟ್ಟ ತಮನ್ನಾ ಭಾಟಿಯಾ

ತಮನ್ನ ಭಾಟಿಯಾ ಡೇಟಿಂಗ್ ವಿಚಾರದಲ್ಲಿ ಪ್ರಮುಖವಾಗಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೆಸರು ಕೇಳಿಬಂದಿತ್ತು. ಈ ಕುರಿತು ತಮನ್ನ ಭಾಟಿಯಾ ಇದೇ ಮೊದಲ ಬಾರಿ ಮಾತನಾಡಿದ್ದಾರೆ. ನಿಜಕ್ಕೂ ಕೊಹ್ಲಿ ಜೊತೆ ಡೇಟಿಂಗ್ ಮಾಡಿದ್ರಾ ತಮನ್ನಾ?

Read Full Story

08:56 PM (IST) Aug 03

ಐಫೋನ್ ಬೇಡಿಕೆಯಿಂದ ಭಾರತದಲ್ಲಿ ಆ್ಯಪಲ್ ಸ್ಟೋರ್ ವಿಸ್ತರಣೆ, ಬೆಂಗಳೂರಿಗೆ ಬರುತ್ತಾ ಮಳಿಗೆ?

ಭಾರತದಲ್ಲಿ ಐಫೋನ್ ಮಾರಾಟ ಹೆಚ್ಚಾಗಿದೆ. ಹೀಗಾಗಿ ಆ್ಯಪಲ್ ತನ್ನ ಸ್ಟೋರ್ ವಿಸ್ತರಿಸಲು ಮುಂದಾಗಿದೆ. ಸದ್ಯ ಭಾರತದ ಯಾವ ನಗರದಲ್ಲಿ ಆ್ಯಪಲ್ ಸ್ಟೋರ್ ಆರಂಭಗೊಳ್ಳುತ್ತಿದೆ.  

Read Full Story

08:14 PM (IST) Aug 03

ಎಸ್ಮಾ ಎಚ್ಚರಿಕೆ ಲೆಕ್ಕಿಸದೆ ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು, ಆಗಸ್ಟ್ 5ರಂದು ಸಾರ್ವಜನಿಕ ಸೇವೆ ಸ್ತಬ್ಧ!

ರಾಜ್ಯ ಸಾರಿಗೆ ನೌಕರರು ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ. ವೇತನ ಹೆಚ್ಚಳ, ಬಾಕಿ ಅರಿಯರ್ಸ್‌ ಪಾವತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಸರ್ಕಾರದ ಎಸ್ಮಾ ಎಚ್ಚರಿಕೆಯನ್ನೂ ಲೆಕ್ಕಿಸದೆ ಮುಷ್ಕರಕ್ಕೆ ಮುಂದಾಗಿದ್ದಾರೆ.  

Read Full Story

07:50 PM (IST) Aug 03

2020ರಲ್ಲಿ ನಾಪತ್ತೆಯಾದ ಸಿಂಧೂ ಕೇಸ್‌ಗೆ ಮರುಜೀವ, ಕಣ್ಣೀರಿಟ್ಟು ಮನವಿ ಮಾಡಿದ ತಾಯಿ

ಐದು ವರ್ಷಗಳಿಂದ ಮಗಳು ಸಿಂಧು ಮನೆಗೆ ಹಿಂದಿರುತ್ತಾಳೆ ಎಂದು ದಾರಿ ಕಾಯುತ್ತಿರುವ ತಾಯಿ ಇದೀಗ ಪೊಲೀಸರ ಬಳಿಕ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ನನ್ನ ಮಗಳಿಗೆ ಏನಾಯ್ತು ಅನ್ನೋದಾದರು ಹೇಳಿ ಎಂದು ಕೈಮುಗಿದು ಬೇಡಿಕೊಂಡಿದ್ದಾರೆ. ಏನಿದು ಸಿಂಧೂ ಪ್ರಕರಣ?

 

Read Full Story

07:44 PM (IST) Aug 03

ಉದ್ಯೋಗ ಕಳಕೊಂಡವನಿಂದ ಕಬ್ಬನ್ ಪಾರ್ಕ್‌ನಲ್ಲಿ ಬ್ಲೈಂಡ್ ಡೇಟ್, ವಿವಾದಿತ ಶೋಗೆ ಫುಲ್‌ ಸ್ಟಾಪ್ ಇಟ್ಟ ಪೊಲೀಸರು

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ 'ಬ್ಲೈಂಡ್ ಡೇಟ್' ಕಾರ್ಯಕ್ರಮ ಆಯೋಜಿಸಿದ್ದ ಯುವಕನ ವಿರುದ್ಧ ಪೊಲೀಸ್ ಪ್ರಕರಣ ದಾಖಲು. ಉತ್ತರ ಭಾರತ ಮೂಲದ ಯುವಕನಿಂದ ಆಯೋಜನೆ, ತೋಟಗಾರಿಕೆ ಇಲಾಖೆ ದೂರಿನ ಮೇರೆಗೆ ಕ್ರಮ.
Read Full Story

07:08 PM (IST) Aug 03

ಕೆಆರ್‌ಎಸ್ ಟಿಪ್ಪುವಿನ ಕೊಡುಗೆಯಲ್ಲ, ನಾಲ್ವಡಿಯವರ ಕನಸಿಗೆ ತಾಯಿ, ಪತ್ನಿ ಚಿನ್ನ ಅಡವಿಟ್ಟು ದುಡ್ಡು ಹೊಂದಿಸಿದರು!

ಕೆಆರ್‌ಎಸ್ ಅಣೆಕಟ್ಟು ನಿರ್ಮಾಣದಲ್ಲಿ ಟಿಪ್ಪು ಸುಲ್ತಾನನ ಪಾತ್ರವಿಲ್ಲ ಎಂದು ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ ಸ್ಪಷ್ಟಪಡಿಸಿದ್ದಾರೆ. ನಿಜವಾದ ಕೊಡುಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದ್ದು ಎಂದು ಅವರು ಹೇಳಿದ್ದಾರೆ. ಸಚಿವ ಮಹದೇವಪ್ಪನವರ ಹೇಳಿಕೆಯನ್ನು ಅವರು ಖಂಡಿಸಿದ್ದಾರೆ.

Read Full Story

06:57 PM (IST) Aug 03

26 ಐಫೋನ್ ದೇಹಕ್ಕೆ ಅಂಟಿಸಿ ಕಳ್ಳಸಾಗಾಣೆಗೆ ಯತ್ನಿಸಿದ ಯುವತಿಗೆ ಹೃದಯಾಘಾತ, ತಜ್ಞರ ಎಚ್ಚರಿಕೆ

20 ವರ್ಷದ ಯುವತಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ತಕ್ಷಣ ಈಕೆಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ತನ್ನ ದೇಹದಲ್ಲಿ 26 ಐಫೋನ್ ಅಂಟಿಸಿ ಕಳ್ಳಾಸಾಗಾಣೆ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. 

Read Full Story

06:26 PM (IST) Aug 03

KRSಗೆ ಟಿಪ್ಪುವಿನಿಂದ ಅಡಿಗಲ್ಲೆಂದು ಸಚಿವ ಮಹದೇವಪ್ಪ ವಿವಾದ, ಮೈಸೂರು ಸಂಸದ ಯದುವೀರ್ ತೀವ್ರ ಆಕ್ರೋಶ

ಕೆಆರ್‌ಎಸ್ ಅಣೆಕಟ್ಟೆಯ ಅಡಿಗಲ್ಲು ಟಿಪ್ಪು ಸುಲ್ತಾನ್ ಹಾಕಿದ್ದಾರೆ ಎಂಬ ಸಚಿವರ ಹೇಳಿಕೆಯನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರವಾಗಿ ಖಂಡಿಸಿದ್ದಾರೆ. ಇತಿಹಾಸವನ್ನು ತಿರುಚುವ ಪ್ರಯತ್ನ ಇದಾಗಿದ್ದು, ಸಾಕ್ಷ್ಯಾಧಾರಗಳಿಲ್ಲದೆ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಅವರು ಹೇಳಿದ್ದಾರೆ.
Read Full Story

06:03 PM (IST) Aug 03

ಬೆಂಗಳೂರಿಗೆ ಆರೆಂಜ್ ಅಲರ್ಟ್, 10 ನಿಮಿಷ ಮಳೆಯಲ್ಲಿ ಕರೆಯಂತಾದ ಕೆಆರ್ ಮಾರ್ಕೆಟ್

ಬೆಂಗಳೂರಿಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಮೂರು ಗಂಟೆ ಆರೆಂಜ್ ಅಲರ್ಟ ಘೋಷಿಸಲಾಗಿದೆ. ಈಗಾಗಲೇ ನಗರದ ಹಲವೆಡೆ ಭಾರಿ ಮಳೆಯಾಗಿ ಹಲವು ರಸ್ತೆಗಳು ಜಲಾವೃತಗೊಂಡಿದೆ.

Read Full Story

05:37 PM (IST) Aug 03

KRSಗೆ ಅಡಿಗಲ್ಲು ಹಾಕಿದ್ದು ಟಿಪ್ಪು, ನಾಲ್ವಡಿ ಒಡೆಯರ್ ಪುಣ್ಯಸ್ಮರಣೆ ದಿನ ಸಚಿವ ಮಹಾದೇವಪ್ಪ ವಿವಾದ

ಸಚಿವ ಮಹಾದೇವಪ್ಪ ಮತ್ತೆ ಟಿಪ್ಪು ವಿವಾದ ಕೆದಕಿ ಇದೀಗ ಹಲವರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಆಕಡೆ ಅಲ್ಲಾಹು ಅಕ್ಬರ್, ಈಕಡೆ ಗಂಟೆ ಟನ್ ಟನ್ ಮೂಲಕ ಟಿಪ್ಪು ಸರ್ವಧರ್ಮ ಸಹಿಷ್ಣುವಾಗಿದ್ದರು. ಕೆಆರ್‌ಎಸ್ ಡ್ಯಾಂಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಎಂದು ಸಚಿವ ಮಹಾದೇವಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Read Full Story

05:25 PM (IST) Aug 03

ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ, 480 ಪುಟಗಳ ತೀರ್ಪಿನಲ್ಲಿ ಸಂಸ್ಕೃತ ಶ್ಲೋಕ ಉಲ್ಲೇಖ, ಏನಿದರ ಮಹತ್ವ?

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಅತ್ಯಾ1ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ ತೀರ್ಪಿನಲ್ಲಿ ಮಹಿಳೆಯರನ್ನು ಪೂಜಿಸುವ ಬಗ್ಗೆ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಲಾಗಿದೆ. ಈ ಪ್ರಕರಣವು 2024 ರಲ್ಲಿ ಬೆಳಕಿಗೆ ಬಂದಿತ್ತು.

Read Full Story

05:02 PM (IST) Aug 03

ಐಸಿಯುನಲ್ಲಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ - ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಪಂಚ ಗ್ಯಾರಂಟಿಗಳ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಶೂನ್ಯವಾಗಿದ್ದು ಪ್ರಸ್ತುತ ಸರ್ಕಾರ ಐಸಿಯುನಲ್ಲಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Read Full Story

04:51 PM (IST) Aug 03

ಡೀಮ್ಡ್ ಫಾರೆಸ್ಟ್ ಸರ್ವೇ ಶೀಘ್ರ ಪೂರ್ಣಗೊಳಿಸಿ - ಕೃಷಿ ಸಚಿವ ಚಲುವರಾಯಸ್ವಾಮಿ

ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನಡುವೆ ದೊಡ್ಡ ತಲೆನೋವಾಗಿರುವ ಡೀಮ್ಡ್ ಫಾರೆಸ್ಟ್ ಸರ್ವೇಯನ್ನು ಶೀಘ್ರ ಪೂರ್ಣಗೊಳಿಸುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.

Read Full Story

04:38 PM (IST) Aug 03

ಪ್ರತಿಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್‌ ವಿಫಲ - ಸಂಸದ ಜಗದೀಶ್ ಶೆಟ್ಟರ್

ಲೋಕಸಭಾ ಅಧಿವೇಶನದಲ್ಲಿ ಕಾಂಗ್ರೆಸ್‌ ಶಿಸ್ತು ಪಾಲನೆ ಮಾಡುತ್ತಿಲ್ಲ. ಪ್ರತಿಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದರು.

Read Full Story

04:33 PM (IST) Aug 03

ನಟ ದರ್ಶನ್ ರೀತಿ ಫಯಾಝ್‌ಗೂ ಜಾಮೀನು ಕೊಡಿ, ನೇಹಾ ಹಿರೇಮಠ ಕೊಲೆ ಆರೋಪಿ ಪರ ವಕೀಲರ ವಾದ

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ನೀಡಿದ ರೀತಿ, ನೇಹಾ ಹಿರೇಮಠ ಪ್ರಕರಣದಲ್ಲಿ ಕೊಲೆ ಆರೋಪಿ ಫಯಾಝ್‌ಗೆ ಜಾಮೀನು ನೀಡಬೇಕು ಎಂದು ಆರೋಪಿ ವಕೀಲರು ವಾದ ಮಂಡಿಸಿದ್ದಾರೆ ಎಂದು ನೇಹಾ ತಂದೆ ಆಕ್ರೋಶ ಹೊರಹಾಕಿದ್ದಾರೆ. ನಾಳೆ ಜಾಮೀನು ಆದೇಶ ಹೊರಬೀಳಲಿದೆ.

Read Full Story

04:18 PM (IST) Aug 03

ಆಗಸ್ಟ್ 10 ರಂದು ಬೆಂಗಳೂರಿಗೆ ಪಿಎಂ ಮೋದಿ, ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10 ರಂದು ಬೆಂಗಳೂರಿನ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಆರ್.ವಿ.ರೋಡ್ ನಿಂದ ಬೊಮ್ಮಸಂದ್ರವರೆಗಿನ ಈ ಮಾರ್ಗ 16 ನಿಲ್ದಾಣಗಳನ್ನು ಹೊಂದಿದೆ. ಮೆಟ್ರೋ ಫೇಸ್ 3 ಯೋಜನೆಗೂ ಶಂಕುಸ್ಥಾಪನೆ ನೆರವೇರಲಿದೆ.
Read Full Story

04:15 PM (IST) Aug 03

ಏಳು ವರ್ಷಗಳಲ್ಲಿ ದೇಶದಲ್ಲಿ 4 ಲಕ್ಷ ಕೋಟಿ ಹಣ ರೈತರ ಖಾತೆಗೆ ಜಮೆ - ಪ್ರಲ್ಹಾದ್ ಜೋಶಿ

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ನಿಧಿ ಯೋಜನೆ ಪೈಕಿ ಕಳೆದ ಏಳು ವರ್ಷಗಳಲ್ಲಿ ₹4 ಲಕ್ಷ ಕೋಟಿ ಹಣ ರೈತರಿಗೆ ಸಂದಾಯವಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ₹538 ಕೋಟಿ ರೈತರ ಖಾತೆಗೆ ಜಮಾ ಆಗಿದೆ ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದರು.

Read Full Story

04:06 PM (IST) Aug 03

ತಿಂಗಳಾದ್ರೂ ಮಗು ನೋಡಲು ಬರಲಿಲ್ಲ - ಮಗು ಕೊಟ್ಟ ಬಿಜೆಪಿ ಮುಖಂಡನ ಪುತ್ರನಿಗಾಗಿ ಕಾಯ್ತಿರೋ ಯುವತಿ!

ಮದುವೆಯಾಗುವುದಾಗಿ ನಂಬಿಸಿ ಮಗು ಕೊಟ್ಟು ಜೈಲು ಸೇರಿರೋ ಬಿಜೆಪಿ ಮುಖಂಡನ 20 ವರ್ಷದ ಪುತ್ರನಿಗಾಗಿ ಯುವತಿ ಕಣ್ಣೀರು ಹಾಕುತ್ತಿದ್ದಾಳೆ. ಅವಳು ಹೇಳಿದ್ದೇನು ಕೇಳಿ...

 

Read Full Story

03:41 PM (IST) Aug 03

ನಾಪತ್ತೆಯಾದ ಭಾರತೀಯ ಮೂಲದ ನಾಲ್ವರು ಶವವಾಗಿ ಪತ್ತೆ, ಹೆಲಿಕಾಪ್ಟರ್ ಸರ್ಚ್‌‌ಲ್ಲಿ ಘಟನೆ ಬಯಲು

ಕಾರಿನಲ್ಲಿ ಪ್ರಯಾಣಿಸಿದ್ದ ಭಾರತೀಯ ಮೂಲದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ನಾಪತ್ತೆ ಪ್ರಕರಣದ ಬೆನ್ನಲ್ಲೇ ಹೆಲಿಕಾಪ್ಟರ್ ಮೂಲಕ ಸರ್ಚ್ ಆಪರೇಶನ್ ಮಾಡಲಾಗಿದೆ. ಈ ವೇಳೆ ಘಟನೆ ಬಯಲಾಗಿದೆ.

Read Full Story

03:35 PM (IST) Aug 03

ಪ್ರಜ್ವಲ್ ರೇವಣ್ಣ ಜೈಲು ಜೀವನದ ಹೊಸ ಅಧ್ಯಾಯ, ಖೈದಿ ಸಂಖ್ಯೆ 15528, ಜೈಲಲ್ಲಿ ಏನೆಲ್ಲಾ ಕೆಲಸ ಮಾಡಬೇಕು?

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೊಸ ಜೀವನ ಆರಂಭಿಸಿದ್ದಾರೆ. ಖೈದಿ ಸಂಖ್ಯೆ 15528 ಪಡೆದಿರುವ ಅವರು, ಜೈಲಿನ ನಿಯಮಗಳಿಗೆ ಒಳಪಟ್ಟು 8 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ.
Read Full Story

03:00 PM (IST) Aug 03

ದೇವಸ್ಥಾನಕ್ಕೆ ಹೊರಟ ಭಕ್ತರ ಕಾರು ಭೀಕರ ಅಪಘಾತದಲ್ಲಿ 11 ಸಾವು, ಪರಿಹಾರ ಘೋಷಿಸಿದ ಮೋದಿ

ಪೃಥ್ವಿನಾಥ್ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಬೊಲೆರೋ ಕಾರು ಅಪಘಾತಕ್ಕೀಡಾದ ಘಟನೆ ನಡದಿದೆ. ನಿಯಂತ್ರಣ ತಪ್ಪಿ ಕಾರು ಸರಯು ಕಾಲುವೆಗೆ ಉರುಳಿ ಬಿದ್ದಿದೆ. ಇದರ ಪರಿಣಾಮ 11 ಭಕ್ತರು ಮೃತಪಟ್ಟಿದ್ದಾರೆ.

Read Full Story

02:48 PM (IST) Aug 03

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ಶಿವಮೊಗ್ಗದಲ್ಲಿ ವಿಶೇಷ ಪೂಜೆ, 77 ಈಡಗಾಯಿ ಸಮರ್ಪಣೆ

ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬದಂದು ಕೋಟೆ ಮಾರಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. 77 ಈಡಗಾಯಿಗಳನ್ನು ದೇವಿಗೆ ಸಮರ್ಪಿಸಿ, ಯುವ ಕಾಂಗ್ರೆಸ್ ಹಾಗೂ ಅಭಿಮಾನಿ ಬಳಗದಿಂದ ಆಚರಣೆ ಮಾಡಲಾಯಿತು.

Read Full Story

02:29 PM (IST) Aug 03

ಹತ್ತು ದಿನಗಳ ಹಿಂದಷ್ಟೇ ಪಿಜಿ ಸೇರಿದ್ದ ವಿದ್ಯಾರ್ಥಿನಿಯನ್ನ ಹೊತ್ತೊಯ್ದು ಬಲತ್ಕಾರ ಮಾಡಿದ ಪಿಜಿ ಮಾಲೀಕ ಅಶ್ರಫ್ ಅರೆಸ್ಟ್

ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಪಿಜಿ ಮಾಲೀಕ ಅತ್ಯಾ ೧ಚಾರವೆಸಗಿದ ಆಘಾತಕಾರಿ ಘಟನೆ ನಡೆದಿದೆ. ವಿದ್ಯಾರ್ಥಿನಿ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Read Full Story

01:57 PM (IST) Aug 03

'ಇದಕ್ಕಿಂತ ಹೆಚ್ಚಿಗೆ ಪ್ರತಿಕ್ರಿಯಿಸೋಲ್ಲ..' ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಚಾರಕ್ಕೆ ನಿಖಿಲ್ ಹೇಳಿದ್ದೇನು?

ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆಯಾದ ಹಿನ್ನೆಲೆಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕೋರ್ಟ್ ತೀರ್ಪಿಗೆ ತಲೆಬಾಗಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

01:55 PM (IST) Aug 03

ಪ್ರಜ್ವಲ್ ಪ್ರಕರಣ ಭೇದಿಸಲು ಬಳಸಿದ ತಂತ್ರಜ್ಞಾನ ಭಾರತದಲ್ಲೇ ಮೊದಲು, 480 ಪುಟಗಳ ತೀರ್ಪು ಬರೆದ ಜಡ್ಜ್!

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪ್ರಕರಣದಲ್ಲಿ ಬಳಸಲಾದ ತಂತ್ರಜ್ಞಾನದ ವಿವರಗಳು ಬಹಿರಂಗಗೊಂಡಿವೆ. ಎಸ್‌ಐಟಿ ತನಿಖೆಯನ್ನು ನ್ಯಾಯಾಲಯ ಶ್ಲಾಘಿಸಿದೆ.
Read Full Story

01:08 PM (IST) Aug 03

ಪ್ರಜ್ವಲ್ ರೇವಣ್ಣ ಪ್ರಕರಣ ಐತಿಹಾಸಿಕ ತೀರ್ಪು, ಎಸ್ಐಟಿಗೆ ಪದಕ ಕೊಡ್ತೇವೆ - ಗೃಹ ಸಚಿವ ಘೋಷಣೆ

ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯದ ತೀರ್ಪನ್ನು ಗೃಹ ಸಚಿವ ಪರಮೇಶ್ವರ್ 'ಐತಿಹಾಸಿಕ' ಎಂದು ಬಣ್ಣಿಸಿದ್ದಾರೆ. ಎಸ್‌ಐಟಿ ತಂಡ,ಕರ್ನಾಟಕ ಪೊಲೀಸರ ತನಿಖೆಯನ್ನು ಶ್ಲಾಘಿಸಿ ಇದು ನ್ಯಾಯ, ಸತ್ಯದ ಗೆಲುವು ಎಂದಿದ್ದಾರೆ. ತನಿಖಾ ತಂಡಕ್ಕೆ ಮುಖ್ಯಮಂತ್ರಿ ಪದಕ ನೀಡುವುದಾಗಿ ಘೋಷಿಸಿದ್ದಾರೆ.

Read Full Story

12:35 PM (IST) Aug 03

Helmet Cleaning Tips - ನಿಮ್ಮ ಹೆಲ್ಮೆಟ್ ಸ್ವಚ್ಛಗೊಳಿಸಿ ಎಷ್ಟು ವರ್ಷಾಯ್ತು? ಕೊಳೆ ಇದ್ರೂ ಉಪಯೋಗಿಸ್ತೀರಾ? ಈ ಆರೋಗ್ಯ ಸಮಸ್ಯೆಗಳು ಫಿಕ್ಸ್!

ಹೆಲ್ಮೆಟ್ ಯಾಕೆ ಮತ್ತು ಹೇಗೆ ಸ್ವಚ್ಛಗೊಳಿಸಬೇಕು ಎಂಬುದನ್ನು ಈ ಪೋಸ್ಟ್‌ನಲ್ಲಿ ತಿಳಿಯಿರಿ.

Read Full Story

12:20 PM (IST) Aug 03

Deodorant side effects - ನೀವು ಪ್ರತಿದಿನ ಡಿಯೋಡರೆಂಟ್ ಬಳಸ್ತೀರಾ? ಬಳಸೋದ್ರಿಂದ ಈ ಅಪಾಯಗಳು ತಪ್ಪಿದ್ದಲ್ಲ!

ದಿನನಿತ್ಯ ಡಿಯೋಡರೆಂಟ್ ಬಳಸುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಪೋಸ್ಟ್‌ನಲ್ಲಿ ಅವು ಯಾವುವು ಎಂಬುದನ್ನು ನೋಡೋಣ.
Read Full Story

12:11 PM (IST) Aug 03

ನಟಿ ರಮ್ಯಾ ಕೆಣಕಿದವರಿಗೆ ಇದೆ ಮಾರಿಹಬ್ಬ, 11 ಮಂದಿಯನ್ನು ಗುರುತಿಸಿದ ಪೊಲೀಸರು

ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನವಾಗಿದೆ. ಹನ್ನೊಂದು ಮಂದಿಯನ್ನು ಗುರುತಿಸಲಾಗಿದ್ದು, ೪೮ ಗ್ರೂಪ್ ಅಡ್ಮಿನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಐಪಿ ವಿಳಾಸ ಪತ್ತೆಗೆ ಇನ್‌ಸ್ಟಾಗ್ರಾಮ್‌ಗೆ ಪೊಲೀಸರು ಪತ್ರ ಬರೆದಿದ್ದಾರೆ.
Read Full Story

11:59 AM (IST) Aug 03

ರಾಜ್ಯದಲ್ಲಿ 33000ಕ್ಕೂ ಅಧಿಕ ಅಪ್ರಾಪ್ತ ಹದಿಹರೆಯದ ಮಕ್ಕಳ ಗರ್ಭಧಾರಣೆ - ಈ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣ

ಕರ್ನಾಟಕದಲ್ಲಿ ಕಳೆದ 3 ವರ್ಷಗಳಲ್ಲಿ 33,000 ಕ್ಕೂ ಹೆಚ್ಚು ಹದಿಹರೆಯದ ಗರ್ಭಧಾರಣೆ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರ ಜಿಲ್ಲೆ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. 

Read Full Story

11:22 AM (IST) Aug 03

ಪುಡಿರೌಡಿಗಳಂತೆ ಯುವಕನಿಗೆ ಕ್ರೂರವಾಗಿ ಥಳಿಸಿದ ಪುಂಡರು, ಇನ್ನೂ ಮೀಸೆ ಚಿಗುರದ ಹುಡುಗರಿಗೆ ಹುಡುಗಿ, ರೌಡಿಸಂ ಲಾಠಿ ಏಟು ಬೇಕಿತ್ತಾ?

ಬಳ್ಳಾರಿಯಲ್ಲಿ ಯುವಕನೊಬ್ಬನ ಮೇಲೆ 10 ಜನರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ಫೋಟೋವನ್ನು ವಾಟ್ಸ್‌ಆಪ್ ಸ್ಟೇಟಸ್‌ನಲ್ಲಿ ಹಾಕಿದ್ದಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಗಾಯಾಳು ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Read Full Story

10:47 AM (IST) Aug 03

ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ವ್ಹೀಲಿಂಗ್ ಪುಂಡಾಟ - ವಿಡಿಯೋ ವೈರಲ್

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಆಟೋ ಚಾಲಕನೊಬ್ಬ ನಡುರಸ್ತೆಯಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

08:48 AM (IST) Aug 03

ಉತ್ತರ ಕನ್ನಡ - ದೇವರ ಮನೆಯಲ್ಲಿ ಹಚ್ಚಿದ ದೀಪದಿಂದ ಮನೆಗೆ ಬೆಂಕಿ, ಹೊತ್ತಿ ಉರಿದ ಮನೆ!

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ದೇವರ ದೀಪದಿಂದ ಆಕಸ್ಮಿಕವಾಗಿ ಮನೆಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಭಸ್ಮವಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read Full Story

08:04 AM (IST) Aug 03

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ - ಬಿವೈವಿ

ರಾಹುಲ್‌ ಗಾಂಧಿ ಅವರು ಚುನಾವಣಾ ಅಕ್ರಮದ ಹೇಳಿಕೆ ಮುಖಾಂತರ ದೇಶ ಮತ್ತು ರಾಜ್ಯದ ಮತದಾರರಿಗೆ ಅವಮಾನ ಮಾಡಿದ್ದಾರೆ.

Read Full Story

07:55 AM (IST) Aug 03

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ

ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹ* ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಅಧಿಕಾರಿಗಳು ಶನಿವಾರ ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ 18 ಕಡೆ ದಾಳಿ ನಡೆಸಿದ್ದಾರೆ.

Read Full Story

07:39 AM (IST) Aug 03

ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು - ವಾರ್ಷಿಕ ₹ 6000 ಕೋಟಿ ನಿರೀಕ್ಷೆ

ರಾಜಧಾನಿ ಬೆಂಗಳೂರಿನ ಸುಮಾರು 1,500 ಕಿ.ಮೀ ಉದ್ದದ 654 ಆರ್ಟಿರಿಯಲ್‌ ರಸ್ತೆ, ಸಬ್‌ ಆರ್ಟಿರಿಯಲ್‌ ರಸ್ತೆ, ಜಂಕ್ಷನ್‌, ವೃತ್ತ ಸೇರಿದಂತೆ ಬಹುತೇಕ ನಗರದ ಎಲ್ಲೆಡೆ ವಾಣಿಜ್ಯ ಜಾಹೀರಾತು ಪ್ರದರ್ಶನಕ್ಕೆ ಅವಕಾಶ

Read Full Story

07:29 AM (IST) Aug 03

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ನೇಣು ಬಿಗಿದು ಸಾವಿಗೆ ಶರಣು!

ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಸವರಾಜ್ ಎಂಬಾತನೇ ಮೃತ ವ್ಯಕ್ತಿ. ಈ ಘಟನೆ ಜೈಲಿನ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

More Trending News